
ಬೆಂ.ಗ್ರಾ.ಜಿಲ್ಲೆ: ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಕರೊನಾ ಸೋಂಕಿನ ಪ್ರಕರಣಗಳು ತೀವ್ರವಾಗಿದ್ದು, ಶನಿವಾರವಷ್ಟೆ ಶತಕದ ಗಡಿಯಲ್ಲಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ, ಕೇವಲ ನಾಲ್ಕುಗಳಲ್ಲಿ ದ್ವಿಶತಕದ ಗಡಿಗೆ ಬಂದು ನಿಂತಿದೆ. ಆದರೆ ಕೋವಿಡ್-19 ನಿಯಮ ಪಾಲನೆ ಎಂಬುದು ಆದೇಶಕ್ಕೆ ಮಾತ್ರ ಸೀಮಿತವಾಗಿದ್ದು, ಜನತೆ ಮುಂಜಾಗ್ರತೆ ವಹಿಸದಿರುವ ಕಾರಣ ಜಿಲ್ಲೆಯಲ್ಲಿ ಮತ್ತೆ ಲಾಕ್ಡೌನ್, ಸೀಲ್ ಡೌನ್, ನೈಟ್ ಕರ್ಪ್ಯೂ ಜಾರಿಗೆ ಕಾರಣವಾಗಲಿದೆ ಎಂಬ ಅನುಮಾನ ಕಾಡುತ್ತಿದೆ.

ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಬುಧವಾರದ ಕೋವಿಡ್-19 ವರದಿಯಲ್ಲಿ ಜಿಲ್ಲೆಯ 26 ಜನರಿಗೆ ಸೋಂಕು ದೃಢಪಡುವ ಮೂಲಕ, ಕರೊನಾ ಎರಡನೇ ಅಲೆಯ ಆತಂಕವನ್ನು ಹೆಚ್ಚಿಸಿದೆ.
ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ನೆಲಮಂಗಲ ತಾಲೂಕಿನ ವರದಿಯಾಗಿದೆ. ತಾಲೂಕಿನ 8 ಪುರುಷರು ಹಾಗೂ 4 ಮಹಿಳೆಯರು ಸೇರಿದಂತೆ 12 ಜನರಿಗೆ ಸೋಂಕು ದೃಢಪಟ್ಟಿದ್ದರೆ, 6 ಮಂದಿ ಪುರುಷರು ಮತ್ತು 3 ಮಹಿಳೆಯರಿಗೆ ಸೇರಿ 9 ಮಂದಿಗೆ ಸೋಂಕು ದೃಢ ಪಟ್ಟು ದೊಡ್ಡಬಳ್ಳಾಪುರ ತಾಲೂಕು ಎರಡನೇ ಸ್ಥಾನದಲ್ಲಿದೆ.
ಉಳಿದಂತೆ ಹೊಸಕೋಟೆ ತಾಲೂಕಿನಲ್ಲಿ ಮೂವರು ಪುರುಷರು, ಓರ್ವ ಮಹಿಳೆ ಸೇರಿದಂತೆ ನಾಲ್ಕು ಮಂದಿ. ದೇವನಹಳ್ಳಿ ತಾಲೂಕಿನ ಓರ್ವ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಪ್ರಸ್ತುತ ಜಿಲ್ಲೆಯಲ್ಲಿ 51 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 165ಕ್ಕೆ ಏರಿಕೆಯಾಗಿದ್ದರೆ, 05 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಆರೋಗ್ಯ ಇಲಾಖೆಯಿಂದ ನಿರಂತರವಾಗಿ ತಪಾಸಣೆ ನಡೆಸಲಾಗುತ್ತಿದ್ದು, 561 ಮಂದಿಯ ಫಲಿತಾಂಶ ಬರಬೇಕಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

