
ದೊಡ್ಡಬಳ್ಳಾಪುರ: ಮಾ.29ರಂದು ನಡೆಯಲಿರುವ, ತಾಲೂಕಿನ ಮಜರಾಹೊಸಹಳ್ಳಿ ಗ್ರಾಪಂ ಚುನಾವಣೆಗೆ 35ಮಂದಿ ನಾಮಪತ್ರ ಸಲ್ಲಿಸಿದ್ದು, ತಾಪಂ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆಯೋರ್ವರ ಪುತ್ರ ಚುನಾವಣೆ ಕಣಕ್ಕಿಳಿದಿದ್ದಾರೆ.

18 ಸದಸ್ಯತ್ವ ಬಲದ ಮಜರಾಹೊಸಹಳ್ಳಿ ಗ್ರಾಮ ಪಂಚಾಯಿತಿಗೆ ಮಜರಾಹೊಸಹಳ್ಳಿ, ವೀರಾಪುರ, ತಿಪ್ಪಾಪುರ -1, ತಿಪ್ಪಾಪುರ-2, ಜಿಂಕೆಬಚ್ಚಹಳ್ಳಿ, ಹೊಸಹುಡ್ಯ ಹಾಗೂ ಚಿಕ್ಕತುಮಕೂರು ಗ್ರಾಮಗಳು ಒಳಪಡುತ್ತವೆ.
ಮಾ.19ರ ಶುಕ್ರವಾರದಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದ್ದು, ಮಾ.29ರ ಸೋಮವಾರ ಮತದಾನ ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ನಡೆಯಲಿದೆ. ಮಾ.31ರ ಬುಧವಾರದಂದು ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 8:00 ಗಂಟೆಯಿಂದ ಮತಗಳ ಏಣಿಕೆ ನಡೆಯಲಿದ್ದು,
ಇಂದು ನಡೆದ ನಾಮಪತ್ರ ಸಲ್ಲಿಕೆಯಲ್ಲಿ ತಾಲೂಕುಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ರತ್ನಮ್ಮಜಯರಾಂ ಅವರ ಪುತ್ರ ಸಂದೇಶ್ ಹೆಚ್.ಜೆ ನಾಮಪತ್ರ ಸಲ್ಲಿಸಿದರು.
ಮಜರಾಹೊಸಹಳ್ಳಿ ವಾರ್ಡ್ನ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಗಿಳಿದಿರುವ ಇವರು, ಅನುಸೂಚಿತ ಮಹಿಳೆ ಕ್ಷೇತ್ರದ ಅಭ್ಯರ್ಥಿ ಆರ್.ಮೀನಾ ಹಾಗೂ ಹಿಂದುಳಿದ ವರ್ಗದ ಅ ಕ್ಷೇತ್ರದ ಅಭ್ಯರ್ಥಿ ಸುಷ್ಮಾ ಎಂ ಅವರೊಂದಿಗೆ ಚುನಾವಣಾಧಿಕಾರಿ ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಈ ವೇಳೆ ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್, ಮುಖಂಡರಾದ ಬಿ.ಹೆಚ್.ಕೆಂಪಣ್ಣ, ತಿ.ರಂಗರಾಜು, ಆದಿತ್ಯ ನಾಗೇಶ್, ಲೋಕೇಶ್ ಹಾಗೂ ಮಜರಾಹೊಸಹಳ್ಳಿ ಗ್ರಾಮದ ಅನೇಕರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

