
ದೊಡ್ಡಬಳ್ಳಾಪುರ: ನಗರದಲ್ಲಿನ ದೇವಾಂಗ ಮಂಡಳಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆಗಾಗಿ ಮಾ.28 ರಂದು ನಡೆಯಲಿರುವ ಚುನಾವಣೆ ಕೆ.ಪಿ.ಜಗನ್ನಾಥ್, ಪ್ರೊ.ಎಂ.ಜಿ.ಅಮರನಾಥ್ ಅವರ ತಂಡದಿಂದ ಎಲ್ಲಾ 20 ಸ್ಥಾನಗಳಿಗು ಗುರುವಾರ ನಾಮ ಪತ್ರಗಳನ್ನು ಸಲ್ಲಿಸಲಾಯಿತು. ಇದೇ ರೀತಿ ಎಂ.ಜಿ.ಶ್ರೀನಿವಾಸ್ ತಂಡದ ಅಭ್ಯರ್ಥಿಗಳು ನಾಮ ಪತ್ರಗಳನ್ನು ಸಲ್ಲಿಸಿದರು.

ಅಧ್ಯಕ್ಷರು-1 ಸ್ಥಾನ, ಉಪಾಧ್ಯಕ್ಷ-2 ಸ್ಥಾನಗಳು, ಗೌರವ ಕಾರ್ಯದರ್ಶಿ-1 ಸ್ಥಾನ, ಸಹ ಕಾರ್ಯದರ್ಶಿ-1 ಸ್ಥಾನ, ಖಜಾಂಚಿ-1 ಸ್ಥಾನ ಹಾಗೂ 14 ಜನ ನಿರ್ದೇಶಕ ಸ್ಥಾನಗಳು ಸೇರಿದಂತೆ ಒಟ್ಟು 20 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ನಾಮ ಪತ್ರಗಳನ್ನು ಸಲ್ಲಿಸಲು ಮಾ.19 ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆ ಮಾ.20, ನಾಮಪತ್ರಗಳನ್ನು ವಾಪಾಸು ಪಡೆಯಲು ಮಾ.21 ಕೊನೆಯ ದಿನ. ಮಾ.28 ರಂದು ಚುನಾವಣೆ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ನಗರದ ತೇರಿನ ಬೀದಿಯಲ್ಲಿನ ಅರಳುಮಲ್ಲಿಗೆ ಬಾಗಿಲು ಪ್ರೌಢ ಶಾಲಾ ಆವರಣದಲ್ಲಿ ನಡೆಯಲಿದೆ. ಸಂಜೆ 4 ರಿಂದ ಮತಗಳ ಎಣಿಕೆ ನಡೆಯಲಿದೆ.
ಬಿರುಸುಗೊಂಡ ಪ್ರಚಾರ: ಒಟ್ಟು 5,227 ಜನ ಸದಸ್ಯರನ್ನು ಹೊಂದಿರುವ ದೇವಾಂಗ ಮಂಡಳಿಯಲ್ಲಿ 3017 ಜನ ಪುರುಷರು, 2210 ಜನ ಮಹಿಳಾ ಸದಸ್ಯರಿದ್ದಾರೆ. ಸದಸ್ಯತ್ವ ಹೊಂದಿರುವ ಎಲ್ಲರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ನಾಮ ಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಈಗಾಗಲೇ ಮನೆ ಮನೆ ಪ್ರಚಾರವನ್ನು ಕೈಗೊಂಡಿದ್ದಾರೆ. ಕೆ.ಪಿ.ಜಗನ್ನಾಥ್, ಪ್ರೊ.ಎಂ.ಜಿ.ಅಮರನಾಥ ಹಾಗೂ ಎಂ.ಜಿ.ಶ್ರೀನಿವಾಸ್ ಎರಡೂ ತಂಡಗಳು ಸಹ ಸಮಬಲವನ್ನು ಹೊಂದಿದ್ದು ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

