
ದೊಡ್ಡಬಳ್ಳಾಪುರ: ಎರಡು ಚಿರತೆಗಳ ನಡುವೆ ನಡೆದ ಕಾಳಗದಲ್ಲಿ, ಹೆಣ್ಣು ಚಿರತೆ ಸಾವನಪ್ಪಿರುವ ಘಟನೆ ತಾಲೂಕಿನ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದ ಸಮೀಪದಲ್ಲಿರುವ ಬೆಟ್ಟದ ತಪ್ಪಲಿನ ಕಂಡು ಬಂದಿದೆ. (ವಿಡಿಯೋ ನೋಡಿ)

ಇಂದು ಬೆಳಗ್ಗೆ ಗ್ರಾಮದ ಯುವಕರು ಬೆಟ್ಟದ ಬಳಿ ತೆರಳಿದ್ದಾಗ ಚಿರತೆಯ ಕಳೇಬರ ಕಂಡಿದೆ. ಸುಮಾರು ಮೂರು ವರ್ಷದೆನ್ನಲಾಗುತ್ತಿರುವ ಚಿರತೆ ಸತ್ತು ಒಂದು ವಾರವಾಗಿದೆ ಎಂದು ಶಂಕಿಸಲಾಗಿದ್ದು.
ಈ ಕುರಿತು ಹರಿತಲೇಖನಿ ಅರಣ್ಯ ಇಲಾಖೆಯ ಅಧಿಕಾರಿ ಚೇತನ್ ಅವರಿಗೆ ಮಾಹಿತಿ ನೀಡಿದ್ದ ಹಿನ್ನಲೆಯಲ್ಲಿ, ಸ್ಥಳ ಪರಿಶೀಲನೆ ನಡೆಸಿ ಚಿರತೆ ಕಳೇಬರವನ್ನು ಪತ್ತೆ ಹಚ್ಚಿದ ಚೇತನ್ ನೇತೃತ್ವದ ಅಧಿಕಾರಿಗಳು, ಮೃತ ಚಿರತೆಯ ವೈದ್ಯಕೀಯ ತಪಾಸಣೆ ನಡೆಸಿದ್ದು, ಎರಡು ಚಿರತೆಗಳ ನಡುವೆ ನಡೆದ ಕಾಳಗದಿಂದಾಗಿ ಚಿರತೆ ಸಾವನಪ್ಪಿದೆ ಎಂದು ತಿಳಿಸಿದ್ದಾರೆ.
ಮಾಕಳಿ ಹಾಗೂ ಉಜ್ಜನಿ ಬೆಟ್ಟದ ವ್ಯಾಪ್ತಿಯಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಪದೇ ಪದೆ ಗ್ರಾಮಕ್ಕೆ ನುಗ್ಗುತ್ತಿವೆ. ಗುರುವಾರ ರಾತ್ರಿ ಗುಮ್ಮನಹಳ್ಳಿ ಗ್ರಾಮದ ಬಳಿ ಮೇಕೆಯ ಮೇಲೆ ಸಹ ದಾಳಿ ನಡೆಸಿದ್ದು, ಚಿರತೆಗಳ ಸೆರೆಹಿಡಿಯಲು ಕ್ರಮಕೈಗೊಳ್ಳಲಾಗುವುದೆಂದು ಚೇತನ್ ಹರಿತಲೇಖನಿಗೆ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

