
ದೊಡ್ಡಬಳ್ಳಾಪುರ: ಅಪರಿಚಿತ ವೃದ್ಧರೋರ್ವರು ರೈಲಿಗೆ ಸಿಕ್ಕು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸಮೀಪದ ಗೌರಿಬಿದನೂರು ಹಾಗೂ ತೊಂಡೆಭಾವಿ ರೈಲು ನಿಲ್ದಾಣದ ಮಧ್ಯೆ ನಡೆದಿದೆ.

ಮೃತರಿಗೆ ಸುಮಾರು 75 ವರ್ಷ ಎಂದು ಅಂದಾಜಿಸಲಾಗಿದೆ. 5 ಅಡಿ 6 ಅಂಗುಲ ಎತ್ತರ ಇದ್ದಾರೆ. ಗುಂಡುಮುಖ, ಗೋದಿ ಮೈ ಬಣ್ಣ ಹೊಂದಿದ್ದು, ಬಿಳಿ ಬಣ್ಣದ ತುಂಬು ತೋಳಿನ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ತೊಟ್ಟಿದ್ದಾರೆಂದು ರೈಲ್ವೆ ಪೊಲೀಸರು ಹರಿತಲೇಖನಿಗೆ ತಿಳಿಸಿದ್ದಾರೆ
ಮೃತರ ಕುರಿತು ಮಾಹಿತಿ ಇದ್ದವರು ದೊಡ್ಡಬಳ್ಳಾಪುರ ರೈಲ್ವೆ ಪೋಲಿಸ್ ಠಾಣೆ ಮೋಬೈಲ್ ಸಂಖ್ಯೆ 9480802143ಗೆ ಸಂಪರ್ಕಿಸಬಹುದಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

