
ದೊಡ್ಡಬಳ್ಳಾಪುರ: ಮಾ.28 ರಂದು ನಡೆಯಲಿರುವ ನಗರದಲ್ಲಿನ ದೇವಾಂಗ ಮಂಡಳಿ ಚುನಾವಣೆಯಲ್ಲಿ ಸಹ ಕಾರ್ಯದರ್ಶಿ ಸ್ಥಾನಕ್ಕೆ ಕೆ.ಪಿ.ಜಗನ್ನಾಥ್, ಪ್ರೊ.ಎಂ.ಜಿ.ಅಮರನಾಥ ತಂಡದಿಂದ ಕಟ್ಟಾಣಿ ನಾರಾಯಣಪ್ಪರ ಪುತ್ರ ಕೆ.ಎನ್.ಜನಾರ್ಧನ್ ನಾಮಪತ್ರ ಸಲ್ಲಿಸಿದ್ದಾರೆ.

ಅಧ್ಯಕ್ಷರು-1 ಸ್ಥಾನ, ಉಪಾಧ್ಯಕ್ಷ-2 ಸ್ಥಾನಗಳು, ಗೌರವ ಕಾರ್ಯದರ್ಶಿ-1 ಸ್ಥಾನ, ಸಹ ಕಾರ್ಯದರ್ಶಿ-1 ಸ್ಥಾನ, ಖಜಾಂಚಿ-1 ಸ್ಥಾನ ಹಾಗೂ 14 ಜನ ನಿರ್ದೇಶಕ ಸ್ಥಾನಗಳು ಸೇರಿದಂತೆ ಒಟ್ಟು 20 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಮಾ.28 ರಂದು ಚುನಾವಣೆ ಬೆಳಿಗ್ಗೆ 9 ರಿಂದ ಸಂಜೆ 4 ರವರೆಗೆ ನಗರದ ತೇರಿನ ಬೀದಿಯಲ್ಲಿನ ಅರಳುಮಲ್ಲಿಗೆ ಬಾಗಿಲು ಪ್ರೌಢ ಶಾಲಾ ಆವರಣದಲ್ಲಿ ನಡೆಯಲಿದೆ. ಸಂಜೆ 4 ರಿಂದ ಮತಗಳ ಎಣಿಕೆ ನಡೆಯಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

