
ದೊಡ್ಡಬಳ್ಳಾಪುರ: ಶಾಲೆಗಳ ಪರಿಶೀಲನೆಗೆ ತೆರಳಿದ್ದ ವೇಳೆ, ವಿದ್ಯಾರ್ಥಿಗಳಿಗೆ ಬಿಇಒ ಖುದ್ದು ಪಾಠ ಮಾಡಿದ ಘಟನೆ ತಾಲೂಕಿನ ಆರೂಢಿ ಸರ್ಕಾರಿ ಮಾದರಿ ಪಾಠಶಾಲೆಯಲ್ಲಿ ನಡೆಯಿತು.

ಇಂದು ತಾಲೂಕಿನ ವಿವಿಧ ಶಾಲೆಗಳಿಗೆ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದರ ಅಂಗವಾಗಿ ತಾಲೂಕಿನ ಆರೂಢಿ ಗ್ರಾಮದ ಸರ್ಕಾರಿ ಮಾದರಿ ಪ್ರಾಠಶಾಲೆಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳ ಜೊತೆ ಪಠ್ಯ ಚಟುವಟಿಕೆ ಕುರಿತು ಮಾತುಕತೆ ನಡೆಸಿದರು.
ಈ ವೇಳೆ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿನ ಗೊಂದಲ ಇರುವುದು ಅರಿತ ಅವರು, ಚಾಕ್ ಪೀಸ್ ಹಿಡಿದು ತರಗತಿ ತೆಗೆದುಕೊಂಡು ವಿದ್ಯಾರ್ಥಿಗಳ ಅನುಮಾನ ದೂರಾಗಿಸಿದರು.
ಈ ವೇಳೆ ಶಾಲೆಯ ಮುಖ್ಯಶಿಕ್ಷಕ ಸಿದ್ದರಾಮಯ್ಯ, ಸಹ ಶಿಕ್ಷಕ ರಾಜಣ್ಣ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

