
ಚಿಕ್ಕಬಳ್ಳಾಪುರ: ಜಮೀನು ವಿವಾದದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಹತ್ಯೆಯಾಗಿರುವ ಘಟನೆ ತಾಲ್ಲೂಕಿನ ಅವುಲನಾಗೇನಹಳ್ಳಿಯಲ್ಲಿ ನಡೆದಿದೆ.

ಬೆಂಗಳೂರು ನಗರ ಜಿಲ್ಲೆ ಬಂಡಿಕೊಡಿಗೇನಹಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ರಾಮಾಂಜಿ (40) ಕೊಲೆಯಾದ ದುರ್ದೈವಿ ಎಂದು ಗುರತಿಸಲಾಗಿದೆ.
ಮೃತ ರಾಮಾಂಜಿ ಸ್ವ ಗ್ರಾಮ ಅವುಲನಾಗೇನಹಳ್ಳಿಯಲ್ಲಿ ಅದೇ ಗ್ರಾಮದ ಗರಿಗ ವೆಂಕಟರೆಡ್ಡಿ ನಡುವೆ ಜಮೀನು ವಿವಾದವಿತ್ತು ಎನ್ನಲಾಗಿದೆ. ಅಲ್ಲದೆ ಇತ್ತೀಚೆಗೆ ಗ್ರಾಮ ಪಂಚಾಯತಿ ಚುನಾವಣೆ ಹಿನ್ನಲೆ ದ್ವೇಷವೂ ಸೇರಿತ್ತೆನ್ನಲಾಗಿದೆ.
ಈ ಹಿನ್ನಲೆ ಇಂದು ಸಂಜೆ ರಾಮಾಂಜಿ ಕುಟುಂಬದವರಿಗೂ ಮತ್ತು ಗರಿಗ ವೆಂಕಟರೆಡ್ಡಿ ಕುಟುಂಬಸ್ಥರಿಗೂ ಜಗಳವಾಗಿ ಮಾರಕಾಸ್ತ್ರಗಳಿಂದ ರಾಮಾಂಜಿಯನ್ನು ಮಚ್ಚಿನಿಂದ ಕೊಚ್ಚಿ ಹತ್ಯರ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ಗಲಭೆಯಲ್ಲಿ ಮೃತ ರಾಮಾಂಜಿ ಪತ್ನಿ ಮಂಜುಳಮ್ಮ ಕೈ ಬೆರಳುಗಳು ತುಂಡಾಗಿವೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಗಾಯಗೊಂಡ ಮಂಜುಳಮ್ಮರಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

