
ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾದ ‘ಮುಂದುವರೆದ ಅಧ್ಯಾಯ’ ಸಿನಿಮಾದ ಕುರಿತು ಯೂಟ್ಯೂಬ್ನಲ್ಲಿ ನಕಾರಾತ್ಮಕವಾಗಿ ವಿಮರ್ಶೆ ಮಾಡಲಾಗಿದೆ. ಯೂಟ್ಯೂಬ್ನಲ್ಲಿ ಕೆಲ ವಿಮರ್ಶಕರು ಸಿನಿಮಾದ ಬಗ್ಗೆ ಅಪಪ್ರಚಾರ ಮಾಡಿ ನಷ್ಟ ಉಂಟು ಮಾಡ್ತಿದ್ದಾರೆ ಎಂದು ನಟ ಆದಿತ್ಯ ಅಕ್ರೊಶ ಹೊರಹಾಕಿದ್ದಾರೆ.

ಈ ಕುರಿತು ಆದಿತ್ಯ ಹಾಗೂ ‘ಮುಂದುವರೆದ ಅಧ್ಯಾಯ’ ಚಿತ್ರತಂಡ ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದಾರೆ.
ಈ ವೇಳೆ ಮಾತನಾಡಿರುವ ಅವರು, ಕೂತ್ಕೊಂಡು ಯೂಟ್ಯೂಬ್ನಲ್ಲಿ ಚಿತ್ರದ ಬಗ್ಗೆ ವಿಮರ್ಶೆ ಮಾಡ್ತೀರಾ. ಯಾರು ನೀವೆಲ್ಲಾ? ನಿಮಗೆ ವಿಮರ್ಶೆ ಮಾಡುವ ಅರ್ಹತೆ ಯಾರು ಕೊಟ್ರು? ನಿಮಗೆಲ್ಲಾ ಕೆಲಸ ಇಲ್ಲಂದ್ರೆ ಬನ್ನಿ. ಸಿನಿಮಾ ರಂಗದಲ್ಲಿ ನಾವು ಕೆಲಸ ಕೊಡ್ತೀವಿ. ಒಂದು ದಿನ ಬಂದು ಇಲ್ಲಿ ದುಡೀರಿ. ಒಬ್ಬ ಡೈರೆಕ್ಟರ್ ಕಷ್ಟ ಏನು, ಪ್ರೊಡ್ಯೂಸರ್ ಕಷ್ಟ ಏನು, ನಮ್ಮ ಕಷ್ಟ ಏನು ಎಂದು ತಿಳಿಯುತ್ತೆ.
ಹಗಲು ರಾತ್ರಿ ಶ್ರಮಿಸಿ ಚಿತ್ರವನ್ನ ಥಿಯೇಟರ್ಗೆ ತರೋಕೆ ಎಷ್ಟು ಕಷ್ಟ ಪಡ್ತೀವಿ ಅಂತ ನಮಗೆ ಗೊತ್ತು. ನೀವು ಡಬ್ಬಾ ನನ್ನ ಮಕ್ಳು ಸುಮ್ನೆ ಕೂತ್ಕೊಂಡು ಡಬ್ಬಾ ಥರ ಮಾತಾಡ್ತೀರಾ? ನೀವು ಯಾರು ನಮ್ಮ ಸಿನಿಮಾ ಬಗ್ಗೆ ಮಾತನಾಡೋದಕ್ಕೆ? ದುಡ್ಡಿಗೋಸ್ಕರ ಸಿನಿಮಾಗಳನ್ನು ಹಾಳು ಮಾಡ್ತಿದ್ದಾರೆ. ದುಡ್ಡು ಕೊಟ್ಟರೇ ಸಿನಿಮಾ ಒಳ್ಳೆಯ ವಿಮರ್ಶೆ ಮಾಡ್ತಾರೆ, ಇಲ್ಲಾಂದ್ರೆ ಸಿನಿಮಾಗೆ ಬೇಕಾಬಿಟ್ಟಿ ಮಾತಾಡ್ತಾರೆ. ಕನ್ನಡ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ವಿಮರ್ಶೆ ಮಾಡೋದು ಮೊದಲು ನಿಲ್ಲಿಸಿ. ಇಲ್ಲಾಂದ್ರೆ ಅಭಿಮಾನಿಗಳು ಹುಡುಕೊಂಡು ಬಂದು ಹೊಡಿತಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ನಡೆಯ ಬಗ್ಗೆ ಕಡಿವಾಣ ಹಾಕಲು ಆದಿತ್ಯ, ಫಿಲ್ಮ್ ಚೇಂಬರ್ಗೆ ದೂರು ಸಲ್ಲಿಸಿದ್ದಾರೆ. ಪ್ರಸ್ತುಗರಂ ಮುಂದುವರೆದ ಅಧ್ಯಾಯ’ ಸಿನಿಮಾ ತಂಡ ಡಿಫರ್ಮೇಷನ್ ಕೇಸ್ ಹಾಕಲು ಸಹ ಮುಂದಾಗಿದೆ ಎಂದು ವರದಿಯಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

