ಮೋಟಾರು ವಾಹನ ಕಾಯ್ದೆ 1988: ಹಳೆಯ ಮತ್ತು ತಿದ್ದುಪಡಿ / ಜನಸಾಮಾನ್ಯರಿಗೆ ಕಾನೂನು ಅರಿವು.

ದೇಶವ್ಯಾಪಿಯಾಗಿ ಮೋಟಾರು ವಾಹನ ಕಾಯ್ದೆ (1988ರ ತಿದ್ದುಪಡಿ) ಸೆಪ್ಟೆಂಬರ್ 1 ರಿಂದ ಜಾರಿಗೆ ಬಂದಿದೆ. ಈ ತಿದ್ದುಪಡಿ ಕಾಯ್ದೆಯು ವಾಹನ ಸವಾರರು ಮತ್ತು ಮಾಲೀಕರನ್ನು ನಿದ್ದೆಗೆಡಿಸದೆ ಇರುವುದರಲ್ಲಿ ಯಾವುದೇ ಸಂಶಯ ಬೇಡ!

ರಸ್ತೆ ಅಪಘಾತಗಳಿಂದ ಸಂಭವಿಸುವ ಪ್ರಾಣಹಾನಿಯನ್ನು ತಪ್ಪಿಸುವ ಸಲುವಾಗಿ ವಾಹನ ಸವಾರರನ್ನು ನಿಯಂತ್ರಿಸಲು ಗಣನೀಯ ಪ್ರಮಾಣದಲ್ಲಿ ದಂಡದ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ. 

ರಸ್ತೆ ನಿಯಮ ಉಲ್ಲಂಘನೆ ಮಾಡುವ ವಾಹನ ಸವಾರರನ್ನು ನಿಯಂತ್ರಿಸಲು ಹೆಚ್ಚಿನ ಪ್ರಮಾಣದಲ್ಲಿ ದಂಡ ಹಾಕುವುದೇ ಪರಿಹಾರವೆಂದು ಸರ್ಕಾರ ಭಾವಿಸಿದೆ. 

ಮೋಟಾರು ವಾಹನ ಕಾಯ್ದೆ 1988,  ಸೆಕ್ಷನ್ 140 ರ ಅಡಿಯಲ್ಲಿ ಅಫಘಾತ ಸಂಭವಿಸಿದ ನಂತರ ಗಾಯಾಳುವಿನ ತುರ್ತು ಚಿಕಿತ್ಸೆಗಾಗಿ ರೂ.25 ಸಾವಿರ ಅಥವಾ ಮೃತಪಟ್ಟ ವ್ಯಕ್ತಿಯ ಕುಟುಂಬದವರ ಅಂತ್ಯಕ್ರಿಯೆ, ಇತ್ಯಾದಿ ಕಾರಣಕ್ಕೆ ರೂ.50 ಸಾವಿರ ತಕ್ಷಣದ ಪರಿಹಾರವನ್ನು ವಿಮಾ ಕಂಪನಿಯಿಂದ ಪಡೆಯುವ ಹಕ್ಕನ್ನು ನೀಡಿತ್ತು. ಆದರೆ ಮೋಟಾರು ವಾಹನ ಕಾಯ್ದೆ 1988ರ ತಿದ್ದುಪಡಿ ಕಾಯ್ದೆ ಇಂತಹ ಹಕ್ಕನ್ನು ಮೊಟಕುಗೊಳಿಸಿದೆ. ಅಫಘಾತಕ್ಕೆ ಒಳಗಾದ ವ್ಯಕ್ತಿಗೆ ಯಾವುದೇ ಬಗೆಯ ಮಧ್ಯಂತರ ಪರಿಹಾರ ಸಿಗುವುದಿಲ್ಲ. ಪರಿಹಾರ ಪಡೆಯಬೇಕಾದರೆ ನ್ಯಾಯಾಲಯದಲ್ಲಿ ಅಪಘಾತ ಪ್ರಕರಣದ ತೀರ್ಪು ಬರುವವರೆಗೂ ಕಾಯಬೇಕು. 

ಈ ಹಿಂದೆ ಸೆಕ್ಷನ್ 145 ರ ಅಡಿಯಲ್ಲಿ ಮೂರನೇ ವ್ಯಕ್ತಿಯ(Third Party Liability) ನಿಬಂಧನೆ ಇತ್ತು. ತಿದ್ದುಪಡಿ ಮೂಲಕ ‘ಹೊಣೆಗಾರಿಕೆ’ ಪದದ ವ್ಯಾಪ್ತಿಯನ್ನು ಕುಗ್ಗಿಸಲಾಗಿದೆ. ಅಂದರೆ ವಾಹನ ಚಾಲಕ/ನಿರ್ವಾಹಕ/ ಸಹಾಯಕರು (ವಿಶೇಷವಾಗಿ ಗೂಡ್ಸ್ ವಾಹನಗಳ ಹಮಾಲಿಗಳು) ಕಾರ್ಮಿಕ ಪರಿಹಾರ ಕಾಯ್ದೆಯ ಅನ್ವಯ ಪರಿಹಾರ ಪಡೆಯುವ ಹಕ್ಕನ್ನು ಮೊಟಕುಗೊಳಿಸಲಾಗಿದೆ. ವಾಹನದಲ್ಲಿನ ಸಹ ಪ್ರಯಾಣಿಕನನ್ನು ಮೂರನೇ ವ್ಯಕ್ತಿ ವ್ಯಾಖ್ಯಾನದಿಂದ ಹೊರಗಿಡಲಾಗಿದೆ. ಉದಾಹರಣೆಗೆ ವಾಹನ ಅಪಘಾತ ಚಾಲಕನ ನಿರ್ಲಕ್ಷ್ಯದಿಂದ ಸಂಭವಿಸಿದ್ದರೆ ವಿಮಾ ಕಂಪನಿ ನಷ್ಟ ಪರಿಹಾರದ ಜವಾಬ್ದಾರಿಯಿಂದ ನುಣುಚಿಕೊಂಡು ವಾಹನದ ಚಾಲಕ ಮತ್ತು ಮಾಲೀಕನನ್ನು ಹೊಣೆಗಾರನನ್ನಾಗಿಸಿದೆ. ಅದೇ ರೀತಿ ಸೆಕ್ಷನ್ 147 ರ ಅಡಿಯಲ್ಲಿನ ವಿಮಾ ಕಂಪನಿಗಳ ಮೇಲಿನ ಅಪರಿಮಿತ ಹೊಣೆಗಾರಿಕೆಯನ್ನು (Unlimited Liability) ತೆಗೆದುಹಾಕಲಾಗಿದೆ. ಉದಾಹರಣೆಗೆ ವಾಹನದ ವಿಮೆಯನ್ನು 10 ಲಕ್ಷಕ್ಕೆ ಮಾಡಿಸಿದ್ದರೆ, ವಿಮಾ ಕಂಪನಿಗಳು ಕೇವಲ 10 ಲಕ್ಷ ರೂಪಾಯಿವರೆಗಿನ ಪರಿಹಾರ ನೀಡಲಷ್ಟೇ ಜವಾಬ್ದಾರಿ ಹೊಂದಿರುತ್ತವೆ. ಒಂದು ಪಕ್ಷ ನ್ಯಾಯಾಲಯವು 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಪರಿಹಾರವನ್ನು ನೀಡಿ ಎಂದು ತೀರ್ಪು ಕೊಟ್ಟರೆ ವಾಹನದ ಮಾಲೀಕ ಉಳಿದ ಪರಿಹಾರವನ್ನು ನೀಡಬೇಕಾಗುತ್ತದೆ.

ಕಾರ್ಮಿಕ ವಲಯಕ್ಕೆ ಆಘಾತಕಾರಿಯಾಗುವಂತಹ ಅಂಶವೊಂದಿದೆ. ಕೆಲಸದ ಅವಧಿಯಲ್ಲಿ (During the course of employment) ವಾಹನ ಚಾಲಕ ಅಫಘಾತದಲ್ಲಿ ಗಾಯಗೊಂಡರೆ ಅಥವಾ ಸಾವನ್ನಪ್ಪಿದರೆ ವಾಹನದ ಮಾಲೀಕ ಮತ್ತು ವಿಮಾ ಕಂಪನಿಯನ್ನು ಹೊಣೆಗಾರರನ್ನಾಗಿಸಿ ಕಾರ್ಮಿಕ ನ್ಯಾಯಾಲಯದಲ್ಲಿ ಪರಿಹಾರ ಕೋರಬಹುದಾಗಿತ್ತು. ಸದರಿ ತಿದ್ದುಪಡಿ ಇದರ ಸ್ವರೂಪವನ್ನು ಬದಲಾಯಿಸಲಾಗಿದೆ. ಅಫಘಾತ ಚಾಲಕನ ಅಜಾಗರೂಕತೆಯಿಂದ ಸಂಭವಿಸಿದ್ದರೆ ನ್ಯಾಯಾಲಯದಲ್ಲೂ ಪರಿಹಾರ ಪಡೆಯುವುದು ಅಸಾಧ್ಯ, ಮೊದಲೇ ಹದಗೆಟ್ಟ ರಸ್ತೆಗಳು ಒತ್ತಡದ ಕೆಲಸ, ಹಠಾತನೇ ಎದುರಾಗುವ ಸಮಸ್ಯೆಗಳ ಮಧ್ಯೆ ಚಾಲಕ ವೃತ್ತಿ ಮಾಡುವವರಿಗೆ ಈ ತಿದ್ದುಪಡಿಯಿಂದ ತೊಂದರೆಯಾಗಲಿದೆ.

ಇದನ್ನು ಸರಿದೂಗಿಸಲು ವಾಹನ ಚಾಲಕ/ನಿರ್ವಾಹಕ/ಹಮಾಲಿಗಳಿಗೆ ವಿಮಾ ಪಾಲಿಸಿಯಲ್ಲಿ ಹೆಚ್ಚಿನ ಹಣ ನೀಡಿ ವಿಮೆ ಪಡೆದುಕೊಳ್ಳುವ ಹೊಣೆಗಾರಿಕೆಯನ್ನು ವಾಹನ ಮಾಲೀಕರ ಮೇಲೆ ವರ್ಗಾಯಿಸಲಾಗಿದೆ. ಪ್ರತಿವರ್ಷವೂ ವಿಮೆ ಪಾಲಿಸಿಯನ್ನು ನವೀಕರಿಸಬೇಕು ಅಲ್ಲದೇ ವರ್ಷ ವರ್ಷವೂ ವಿಮೆಯ ಮೊತ್ತ ಏರಿಕೆಯಾಗುತ್ತದೆ. ಇದರಿಂದ ವಾಹನ ಮಾಲೀಕರಿಗೆ ಹೆಚ್ಚಿನ ಹೊರೆಯಾಗುತ್ತದೆ. 

ಸಣ್ಣಪುಟ್ಟ ನ್ಯೂನತೆಗಳಿದ್ದಾಗ ಅಥವಾ ವಿಮಾ ಪಾಲಿಸಿಯಲ್ಲಿನ ನಿಬಂಧನೆಗಳನ್ನು ಅರ್ಥೈಸುವಲ್ಲಿ ತೊಡಕುಗಳು ಕಂಡುಬಂದಾಗ ಸೆಕ್ಷನ್ 150 ರ ಅಡಿಯಲ್ಲಿ ವಿಮಾ ಕಂಪನಿಗಳು ತೊಂದರೆಗೆ ಒಳಗಾದವರಿಗೆ ಪರಿಹಾರ ನೀಡಿ ನಂತರ ವಾಹನದ ಮಾಲೀಕರಿಂದ ಪರಿಹಾರದ ಹಣವನ್ನು ಹಿಂಪಡೆಯುವಂತಹ ಅವಕಾಶವಿತ್ತು. ಆದರೆ ತಿದ್ದುಪಡಿಯು ಭಾದಿತನ ಸಾಮಾಜಿಕ ಹಿತಾಸಕ್ತಿಯನ್ನು ಪರಿಗಣಿಸದೇ ವಿಮಾ ವಲಯವನ್ನು ಸಂಪೂರ್ಣವಾಗಿ ಲಾಭ ನಷ್ಟದ ಸಂಸ್ಥೆಯಂತೆ ಬಿಂಬಿಸಲಾಗಿದೆ. 

ಈ ಹಿಂದೆ ಇದ್ದ ಸೆಕ್ಷನ್ 163 ಎ ಪ್ರಕಾರ ರಚನಾತ್ಮಕ ಸೂತ್ರದಡಿಯಲ್ಲಿ ಗಾಯಾಳು ಮತ್ತು ಮೃತರಿಗೆ ವೈದ್ಯಕೀಯ ವೆಚ್ಚದ ಪರಿಹಾರವನ್ನು ನೀಡಲು ಸಾಧ್ಯವಿತ್ತು. ಇದಕ್ಕೆ ಬದಲಾಗಿ ಜಾರಿಗೆ ಬಂದಿರುವ ಸೆಕ್ಷನ್ 164 ಇಂತಹ ಸೌಲಭ್ಯಗಳನ್ನು ಮೊಟಕುಗೊಳಿಸಿ ಒಂದು ಬಾರಿಗೆ ಮಾತ್ರ ಗಾಯಾಳುವಿಗೆ ರೂ.2.50 ಲಕ್ಷ ಮತ್ತು ಮೃತರಿಗೆ ರೂ.5 ಲಕ್ಷ ನಿರ್ದಿಷ್ಟ ವೈದ್ಯಕೀಯ ವೆಚ್ಚ ಪಡೆಯಲು ಅನುವು ಮಾಡಿಕೊಟ್ಟಿದೆ. 

ಹಿಂದಿನ ಕಾಯ್ದೆಯ ಸೆಕ್ಷನ್ 166 ರ ಅಡಿಯಲ್ಲಿ ಗಾಯಾಳು ಪರಿಹಾರ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಕಾಲಮಿತಿ ಇರಲಿಲ್ಲ. ತಿದ್ದುಪಡಿ ಪ್ರಕಾರ ಗಾಯಾಳು ಅಫಘಾತ ಸಂಭವಿಸಿದ ಆರು ತಿಂಗಳ ಒಳಗೆ ಪ್ರಕರಣ ದಾಖಲಿಸಬೇಕು. ಇದರಿಂದ ಗಂಭೀರ ಗಾಯಗಳಿಂದ ನರಳುವ ವ್ಯಕ್ತಿ ಚಿಕಿತ್ಸೆಯನ್ನು ಬಿಟ್ಟು ನ್ಯಾಯಾಲಯ ಅಥವಾ ವಕೀಲರ ಕಚೇರಿ ಅಥವಾ ಪೋಲಿಸ್ ಠಾಣೆಗೆ ಹೋರಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ?  

ಕೆಲವು ವಿಶೇಷ ಪ್ರಕರಣಗಳಲ್ಲಿ(ವಿಮಾ ಸೌಲಭ್ಯವಿಲ್ಲದೇ ಇರುವ) ಗಾಯಾಳುವಿಗೆ 2.50 ಲಕ್ಷ ಮತ್ತು ಮೃತನಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವ ಶಾಸನಾತ್ಮಕ ಹೊಣೆಗಾರಿಕೆ ಸರ್ಕಾರಕ್ಕಿತ್ತು. ಆದರೆ ಪ್ರಸ್ತುತ ತಿದ್ದುಪಡಿ ಮೂಲಕ ಅದನ್ನೂ ತೆಗೆದುಹಾಕಿ ವಿಮಾ ಕಂಪನಿಗಳನ್ನು ಜನರ ಹಿತಾಸಕ್ತಿ ವಲಯದಿಂದ ಹೊರಗಿಡಲಾಗಿದೆ. 

ಈ ಮೇಲಿನ ಎಲ್ಲಾ ಅಂಶಗಳ ನೇರ ಪರಿಣಾಮ ವಾಹನ ಮಾಲೀಕರು ಮತ್ತು ಚಾಲಕರ ಮೇಲೆ ಬೀಳಲಿದೆ. @ಟಿ.ಕೆ.ಹನುಮಂತರಾಜು, 9740768291

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

ರಾಜಕೀಯ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ. ಕುಮಾರಸ್ವಾಮಿ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯರ ಹೃದಯಂತರಹದಲ್ಲಿ ಹಾಳವಾಗಿ ನೆಲೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="120986"]
ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪಚುನಾವಣೆಯಲ್ಲಿ ಬಡವರು ಹಾಗೂ ಶ್ರೀಮಂತರ ನಡುವೆ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಸೋತು ಮುಂದಿನ ರಾಜ್ಯದ ಭವಿಷ್ಯ ತೀರ್ಮಾನವಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.

[ccc_my_favorite_select_button post_id="120773"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ದೊಡ್ಡಬಳ್ಳಾಪುರ: ಎರಡು ಪ್ರತ್ಯೇಕ ಅಪಘಾತ.. ಇಬ್ಬರ ದುರ್ಮರಣ..!

ಮಂಗಳವಾರ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ (Accident) ಇಬ್ಬರು ಸಾವನಪ್ಪಿರುವ ಘಟನೆ ತಾಲೂಕಿನ..*** ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.

[ccc_my_favorite_select_button post_id="120965"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!