ಬೆಂ.ಗ್ರಾ.ಜಿಲ್ಲೆ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಚಿಕಿತ್ಸೆಗೆ ದಾಖಲಾಗಿದ್ದ 20 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಹೊಸದಾಗಿ 11 ಕರೊನಾ ಪ್ರಕರಣಗಳು ವರದಿಯಾಗಿದೆ. ಆದರೆ, ಕೋವಿಡ್ ಸೋಂಕು ತಪಾಸಣೆ ನಡೆಸುವ ಪ್ರಯೋಗಾಲಯಗಳು ರಾಜ್ಯ ಮಟ್ಟದಲ್ಲಿ ದೊಡ್ಡಬಳ್ಳಾಪುರ ತಾಲೂಕಿಗೆ ಮಸಿ ಬಳೆಯುವ ಪ್ರಯತ್ನ ನಡೆಸುತ್ತಿರುವ ಅನುಮಾನ ಸಾರ್ವಜನಿಕ ವಲಯದಲ್ಲಿ ಪದೇ ಪದೇ ಕೇಳಿ ಬರುತ್ತಿದೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಬುಲೆಟಿನ್ ವರದಿಯನ್ವಯ ನೆಲಮಂಗಲ ತಾಲೂಕಿನ 01 ಪುರುಷರು, 03 ಮಹಿಳೆಯರು ಸೇರಿ 04. ಹೊಸಕೋಟೆ ತಾಲೂಕಿನ 02 ಪುರುಷರು, 01 ಮಹಿಳೆಯರು ಸೇರಿ 03. ದೇವನಹಳ್ಳಿ ತಾಲೂಕಿನ 0 ಪುರುಷ, 01 ಮಹಿಳೆ ಸೇರಿ 01 ಹಾಗೂ ದೊಡ್ಡಬಳ್ಳಾಪುರ ತಾಲೂಕಿನ 02 ಪುರುಷರು, 0 ಮಹಿಳೆಯರು ಸೇರಿ 02 ಹಾಗೂ ಮತ್ತು ಅನ್ಯ ಜಿಲ್ಲೆಯವರು ಸೇರಿ ಒಟ್ಟು ಜಿಲ್ಲೆಯಲ್ಲಿ 11 ಜನರಿಗೆ ಸೋಂಕು ದೃಢಪಟ್ಟಿದೆ.
ಆದರೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಬೇಟಿ ನೀಡುವ ಮುನ್ನಾ ದಿನವಾದ ಮಂಗಳವಾರ ಅತಿ ಹೆಚ್ಚು 11 ಸೋಂಕಿತರು ವರದಿಯಾಗಿದ್ದ ದೊಡ್ಡಬಳ್ಳಾಪುರ ತಾಲೂಕಿನಲ್ಲಿ, ಬುಧವಾರದ ವರದಿಯಲ್ಲಿ ಎರಡು ಸೋಂಕಿನ ಪ್ರಕರಣ ವರದಿಯಾಗುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಚಿವರು, ಮುಖ್ಯಮಂತ್ರಿ ಭೇಟಿಯ ಮುನ್ನಾ ದಿನವೇ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ತೀವ್ರಗೊಳ್ಳುತ್ತದೆ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಈ ಕುರಿತು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ತೀವ್ರವಾಗಿ ಚರ್ಚೆ ನಡೆದಿದ್ದು, ಕೋವಿಡ್ ಸೋಂಕಿನ ಪರೀಕ್ಷೆಗೆ ಜಿಲ್ಲೆಯ ಅನ್ಯ ತಾಲೂಕುಗಳನ್ನು ಅವಲಂಬಿಸಬೇಕಾಗಿರುವುದು ಕಾರಣ ಎಂದು ಶಂಕಿಸಲಾಗುತ್ತಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪರೀಕ್ಷೆಗೆ ಹೊಸಕೋಟೆಯ ಎಂಜೆಎಸ್ ಆಸ್ಪತ್ರೆ, ದೇವನಹಳ್ಳಿಯ ಆಕಾಶ್ ಆಸ್ಪತ್ರೆ, ನೆಲಮಂಗಲದ ಸಿದ್ದಾರ್ಥ ಆಸ್ಪತ್ರೆಗಳಲ್ಲಿನ ಪ್ರಯೋಗಾಲಯದಲ್ಲಿ ತಪಾಸಣೆ ನಡೆಸಿ ವರದಿ ನೀಡಲಾಗುತ್ತದೆ. ಆದರೆ ದೊಡ್ಡಬಳ್ಳಾಪುರಕ್ಕೆ ಯಾವುದೇ ಸ್ಥಳೀಯ ಪ್ರಯೋಗಾಲಯ ಇಲ್ಲದೆ ಇರುವುದು ಇಂತಹ ಶಡ್ಯಂತ್ರಕ್ಕೆ ಒಳಗಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಈ ಮುನ್ನಾ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಜಿಲ್ಲೆಗೆ ಭೇಟಿಯ ವೇಳೆ, ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಿಲ್ಲೆಗೆ ಭೇಟಿ ನೀಡುವ ಮುನ್ನಾ ದಿನ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ತೀವ್ರವಾಗಿದ್ದು ಇದಕ್ಕೆ ಸಾಕ್ಷಿಯಾಗಿದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ ಈಗಾಗಲೇ ಸೋಂಕಿನ ಸಂಖ್ಯೆ ಕಡಿಮೆ ತೋರಿಸಲು ಕೆಲ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ವಾಬ್ ಟೆಸ್ಟ್ ಮಾಡದೇ..! ಸರ್ಕಾರಕ್ಕೆ ಕಡಿಮೆ ಸೋಂಕಿತರು ಎಂದು ವರದಿ ತೋರಿಸಲು ನೀರಿನಲ್ಲಿ ಮುಳುಗಿಸಿ ಸೋಂಕಿನ ಸಂಖ್ಯೆ ಕಡಿಮೆ ತೋರಿಸಿ, ಒತ್ತಡದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪದ ನಡುವೆಯೇ…. ತಾಲೂಕು, ತಾಲೂಕುಗಳ ಮಧ್ಯೆ ವಿಷ ಬೀಜ ಬಿತ್ತುವ ಪ್ರಯತ್ನ ಕೋವಿಡ್ ತಪಾಸಣೆ ಲ್ಯಾಬ್ ಗಳಲ್ಲಿ ನಡೆಸಲಾಗುತ್ತಿದೆ ಎನ್ನುವ ಆರೋಪ ತೀವ್ರವಾಗಿದೆ.
24 ಗಂಟೆಯ ಒಳಗಾಗಿ ಕೋವಿಡ್ ತಪಾಸಣೆ ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ಅವರ ಸೂಚನೆ ನೀಡಿದ್ದರು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಕೋವಿಡ್ ತಪಾಸಣೆ ವರದಿ ಮೂರ್ – ನಾಲ್ಕು ದಿನಗಳ ನಂತರ ದೊರಕುತ್ತಿದೆ.
ಈ ಕುರಿತಂತೆ ಕೋವಿಡ್ ಸೋಂಕು ಹರಡದಂತೆ ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಗಮನಹರಿಸುವಂತೆ ಕರವೇ ಪ್ರವೀಣ ಶೆಟ್ಟಿ ಬಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟರವಿ ಒತ್ತಾಯಿಸಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ 60 ಮಂದಿ ಸೋಂಕಿತರನ್ನು ನಿಗಾ ಘಟಕದಲ್ಲಿಡಲಾಗಿದೆ ಎನ್ನಲಾಗುತ್ತಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 326ಕ್ಕೆ ಇಳಿಕೆಯಾಗಿದೆ. ಅಲ್ಲದೆ 2125 ಮಂದಿಯನ್ನು ಕಡ್ಡಾಯ ಗೃಹ ಬಂಧನದಲ್ಲಿ ಇಡಲಾಗಿದೆ.
ಇಂದಿನ ವರದಿಯ ಪ್ರಕಾರ 3285 ಮಂದಿಯ ಫಲಿತಾಂಶ ಬಾಕಿ ಉಳಿದಿದೆ ಎನ್ನಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..