ದಿನ ಭವಿಷ್ಯ: ಮಂಗಳವಾರ, ಅ.15, 2024, ದೈನಂದಿನ ರಾಶಿ ಭವಿಷ್ಯ| Astrological prediction

Astrology: Likely to be a memorable day

ಮೇಷ ರಾಶಿ: ಹೆಚ್ಚು ಪ್ರಭಾವಿ ವ್ಯಕ್ತಿಗಳ ಬೆಂಬಲವು ನಿಮ್ಮ ನೈತಿಕತೆಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ. ಅನುಭವಿ ಯೊಂದಿಗೆ ಚರ್ಚಿಸುವ ಮೂಲಕ ಹೂಡಿಕೆ ಮಾಡಿದರೆ ನೀವು ಉತ್ತಮ ಹಣವನ್ನು ಗಳಿಸುವಿರಿ. ಸ್ವಂತ ಕೆಲಸವನ್ನು ಆರಂಭಿಸಲು ಚಿಂತಿಸಿ.ಇದು ನಿಮಗೆ ಉತ್ತಮ ಲಾಭವನ್ನು ತಂದು ಕೊಡುತ್ತದೆ.ಆದರೆ ಇದರಲ್ಲಿ ನಿಮ್ಮ ಶ್ರಮ ಮತ್ತು ಶ್ರದ್ಧೆ ಮುಖ್ಯವಾಗಿರುತ್ತದೆ. (ಭಕ್ತಿಯಿಂದ ಶ್ರೀ ಉಮಾಮಹೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಷಭ ರಾಶಿ: ಯಾವುದಾದರು ಕ್ರೀಡೆ ಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಶ್ರಮವಹಿಸಿ ಕೆಲಸ ಮಾಡುವುದ ರಿಂದ ಘನತೆ ಗೌರವ ನಿಮ್ಮನ್ನು ಹುಡುಕಿ ಕೊಂಡು ಬರುತ್ತದೆ. ಹಣ ಮತ್ತು ಸಂಪತ್ತು ಸಂಬಂಧಗಳಷ್ಟು ದೊಡ್ಡದಲ್ಲ ಎಂದು ಅರ್ಥ ಮಾಡಿಕೊಳ್ಳಿ. (ಭಕ್ತಿಯಿಂದ ಶ್ರೀ ಕಾಶೀ ವಿಶ್ವನಾಥ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮಿಥುನ ರಾಶಿ: ನಿಮ್ಮ ನಿಜವಾದ ಸಾಮಾರ್ಥ್ಯಗಳನ್ನು ಅರಿತುಕೊಳ್ಳಿ. ಏಕೆಂದರೆ ನಿಮಗೆ ಶಕ್ತಿಯ ಕೊರತೆಯಿಲ್ಲ. ಆದರೆ ನಿಮ್ಮ ಶಕ್ತಿಯನ್ನು ನಿಮ್ಮ ಸುತ್ತಲು ಜನ ಅನುಮಾನಿಸುತ್ತಾರೆ.ನಿಮ್ಮ ಶಕ್ತಿ ಸಾಮರ್ಥ್ಯವನ್ನು ಅರ್ಥ ಮಾಡಿಸುವುದು ಉತ್ತಮ. (ಭಕ್ತಿಯಿಂದ ಶ್ರೀ ಮೃತ್ಯುಂಜಯ ರುದ್ರ ದೇವರ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕಟಕ ರಾಶಿ: ವಿವಿಧ ಮೂಲಗಳಿಂದ ಲಾಭದಾಯಕ ಯೋಗವಿದೆ. ಕೆಲಸದಲ್ಲಿ ಶತ್ರುಗಳು ಹೆಚ್ಚಾಗಬಹುದು.ಇತರರಿಗೆ ಮನವರಿಕೆ ಮಾಡುವ ನಿಮ್ಮ ಕೌಶಲ್ಯ ಗುಣ ಉತ್ತಮ ಲಾಭಾಂಶವನ್ನು ನೀಡುತ್ತದೆ. (ಭಕ್ತಿಯಿಂದ ಶ್ರೀ ಅರ್ಧ ನಾರೀಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ಸಿಂಹ ರಾಶಿ: ಹಣ ಹೂಡಿಕೆ ಮತ್ತು ಉಳಿತಾಯದ ಬಗ್ಗೆ ಇಂದು ನಿಮ್ಮ ಕುಟುಂಬದ ಸದಸ್ಯರ ಸಲಹೆ ಪಡೆಯುವುದು ಉತ್ತಮ. ಅವರ ಸಲಹೆಯು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೆಲವು ಜನರು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಆಸೆಯನ್ನು ಹೊಂದಿರುತ್ತಾರೆ. (ಭಕ್ತಿಯಿಂದ ಶ್ರೀ ಮಂಜುನಾಥ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಕನ್ಯಾ ರಾಶಿ: ನಿಮ್ಮ ಆತ್ಮವಿಶ್ವಾಸದಿಂದ ಸುತ್ತಮುತ್ತಲಿನ ಜನರನ್ನು ಮೆಚ್ಚಿಸುವ ಸಾಧ್ಯತೆಯಿದೆ. ವ್ಯಾಪಾರ ಸಾಲಕ್ಕಾಗಿ ನಿಮ್ಮನ್ನು ಸಂಪರ್ಕಿಸುವವರನ್ನು ನಿರ್ಲಕ್ಷಿಸಿ. ಪೋಷಕರ ಮುಂದೆ ಗುಪ್ತ ವಿಚಾರಗಳನ್ನು ಬಹಿರಂಗ ಪಡಿಸಲು ಇದು ಸರಿಯಾದ ಸಮಯ. ಯಾವುದೇ ಕೆಲಸ ಕೈಗೊಂಡರೂ ಅದನ್ನು ಸಾಧಿಸಲು ಶ್ರಮಿಸುವಿರಿ. (ಭಕ್ತಿಯಿಂದ ಶ್ರೀ ಸೋಮೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಶುಭವಾಗುವುದು.)

ತುಲಾ ರಾಶಿ: ನಿಮಗೆ ಹಣದ ಅವಶ್ಯಕತೆ ಇರುವಾಗ ಹಣದ ಬೆಲೆ ನಿಮಗೆ ತಿಳಿಯಲಿದೆ. ಇದರಿಂದ ಯಾವುದೇ ಪ್ರಯೋಜನ ವಾಗುವುದಿಲ್ಲ. ಹಣ ಖರ್ಚು ಮಾಡುವ ಮುನ್ನ ಯೋಚಿಸಿ. ನಿಮ್ಮ ಕುಟುಂಬದ ಸದಸ್ಯರು ನೀಡುವ ಸಲಹೆಯನ್ನು ಅನುಸರಿಸಿ. (ಭಕ್ತಿಯಿಂದ ಶ್ರೀ ಕಾಲಭೈರವೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ವೃಶ್ಚಿಕ ರಾಶಿ: ನಿಮ್ಮ ಆಕರ್ಷಕ ನಡವಳಿಕೆಯು ಇಂದು ಎಲ್ಲರ ಗಮನ ಸೆಳೆಯುತ್ತದೆ. ಇಲ್ಲಿಯವರೆಗೆ ಹೆಚ್ಚು ಯೋಚಿಸದೆ ಹಣವನ್ನು ಖರ್ಚು ಮಾಡುತ್ತಿದ್ದರೆ ಅದನ್ನು ತಪ್ಪಿಸಿ. ಜೀವನದಲ್ಲಿ ಅದರ ಮಹತ್ವವನ್ನು ಅರ್ಥ ಮಾಡಿಕೊಳ್ಳಿ. ಏಕೆಂದರೆ ತುರ್ತು ಅಗತ್ಯವಿದ್ದಾಗ ನಿಮಗೆ ಹಣದ ಮಹತ್ವ ಅರ್ಥವಾಗುತ್ತದೆ. (ಭಕ್ತಿಯಿಂದ ಶ್ರೀ ಕುಲದೇವರ ಪ್ರಾರ್ಥನೆ ಮಾಡಿ ಶುಭ ವಾಗುವುದು.)

ಧನಸ್ಸು ರಾಶಿ: ಸಾಮಾನ್ಯ ಜ್ಞಾನ ಮತ್ತು ತಿಳುವಳಿಕೆಯೊಂದಿಗೆ ನಿಮ್ಮ ನಿರಂತರ ಪ್ರಯತ್ನವು ನಿಮ್ಮ ಯಶಸ್ಸನ್ನು ಅಭಿವೃದ್ಧಿ ಪಡಿಸುತ್ತದೆ. ಇದಕ್ಕಾಗಿ ನಿಮ್ಮ ತಾಳ್ಮೆ ಮುಖ್ಯವಾಗುತ್ತದೆ. ಊಹಾಪೋಹ ಅಥವಾ ಅನಿರೀಕ್ಷಿತ ಲಾಭಗಳ ಮೂಲಕ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. (ಭಕ್ತಿಯಿಂದ ಶ್ರೀ ಸೋಮೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ಮಕರ ರಾಶಿ: ಕೆಲಸದಲ್ಲಿ ಶ್ರಮ ವಹಿಸಿ ಕೆಲಸ ಮಾಡುವುದು ನಿಮ್ಮನ್ನು ಕೊನೆವರೆಗೂ ಕೈ ಹಿಡಿಯುತ್ತದೆ. ನೀವು ಹಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ನ್ಯಾಯಾಲಯವು ಇಂದು ನಿಮ್ಮ ಪರವಾಗಿ ನಿರ್ಧಾರ ಗಳನ್ನು ತೆಗೆದುಕೊಳ್ಳುತ್ತದೆ. ಇದು ನಿಮಗೆ ಆರ್ಥಿಕವಾಗಿ ಪ್ರಯೋಜನ ವನ್ನು ನೀಡುತ್ತದೆ. (ಭಕ್ತಿಯಿಂದ ನವಗ್ರಹ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿ ಶುಭವಾಗುವುದು.)

ಕುಂಭ ರಾಶಿ: ಕೆಲಸದ ಕ್ಷೇತ್ರದಲ್ಲಿ ನೀವು ಉತ್ತಮ ಲಾಭವನ್ನು ಪಡೆಯಬಹುದು. ನೀವು ಮಾಡುವ ಯಾವುದೇ ಕೆಲಸವು ತಕ್ಷಣವೇ ಫಲಿತಾಂಶವನ್ನು ನೀಡುತ್ತದೆ. ನೀವು ಮಕ್ಕಳಿಗಾಗಿ ಯಾವುದೇ ಹೂಡಿಕೆ ಅಥವಾ ಆಸ್ತಿಯನ್ನು ತೆಗೆದುಕೊಳ್ಳ ಬಹುದು.(ಭಕ್ತಿಯಿಂದ ಮನೋ ನಿಯಾಮಕ ಶ್ರೀರುದ್ರ ದೇವರ ಪ್ರಾರ್ಥನೆ ಮಾಡಿ ಶುಭವಾಗುವುದು.)

ಮೀನ ರಾಶಿ: ನೀವು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹೊಸ ಗುರಿಗಳನ್ನು ಹೊಂದಲು ಈ ದಿನವು ಮಂಗಳಕರ ವಾಗಿದೆ. ಈಗ ಆದಾಯ ಹೆಚ್ಚಿಸುವ ಪ್ರಯತ್ನಗಳು ಸಫಲವಾದಂತೆ ಕಾಣುತ್ತಿದೆ.ನೀವು ಹಳೆಯ ಸಾಲಗಳಿಂದ ಮುಕ್ತರಾಗುತ್ತೀರಿ. (ಭಕ್ತಿಯಿಂದ ಶ್ರೀ ಚಂದ್ರ ಮೌಳೇಶ್ವರ ಸ್ವಾಮಿ ಪ್ರಾರ್ಥನೆ ಮಾಡಿ ಒಳಿತಾಗುವುದು.)

ತಿಥಿ: ತ್ರಯೋದಶಿ
ನಕ್ಷತ್ರ: ಪೂರ್ವಾಭಾದ್ರ ನಕ್ಷತ್ರ.

ರಾಹುಕಾಲ: 03:00PM ರಿಂದ 04:30PM
ಗುಳಿಕಕಾಲ: 12:00PM ರಿಂದ 01:30PM
ಯಮಗಂಡಕಾಲ: 09:00AM ರಿಂದ 10:30AM

ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್.ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಧಾರ್ಮಿಕ ಚಿಂತಕರು ಹಾಗೂ ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122

ರಾಜಕೀಯ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ. ಕುಮಾರಸ್ವಾಮಿ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯರ ಹೃದಯಂತರಹದಲ್ಲಿ ಹಾಳವಾಗಿ ನೆಲೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="120986"]
ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪ ಚುನಾವಣೆಯು ಕಾಂಗ್ರೆಸ್ ಸರ್ಕಾರವನ್ನು ಕಿತ್ತುಹಾಕಲು ಅವಕಾಶ: ಆರ್.ಅಶೋಕ

ಈ ಉಪಚುನಾವಣೆಯಲ್ಲಿ ಬಡವರು ಹಾಗೂ ಶ್ರೀಮಂತರ ನಡುವೆ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಕಾಂಗ್ರೆಸ್ ಸೋತು ಮುಂದಿನ ರಾಜ್ಯದ ಭವಿಷ್ಯ ತೀರ್ಮಾನವಾಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ (R. Ashoka) ಹೇಳಿದರು.

[ccc_my_favorite_select_button post_id="120773"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

IPLಗೆ ಕ್ಷಣಗಣನೆ.. ಟಿಕೆಟ್ ಬೇಡಿ ಮರ್ಯಾದೆ ಕಳೆದುಕೊಂಡ ಶಾಸಕರು

ಇಂಡಿಯನ್ ಪ್ರೀಮಿಯರ್ ಲೀಗ್ (IPL) 19ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು (ಮಾರ್ಚ್ 28) ಚಿನ್ನಸ್ವಾಮಿಯಲ್ಲಿ ನಡೆಯಲಿದ್ದು, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಲಿವೆ.

[ccc_my_favorite_select_button post_id="120518"]

RCB ಮಾರಾಟ: ವಿಜಯ್ ಮಲ್ಯ ಭಾವುಕ ಸಂದೇಶ

[ccc_my_favorite_select_button post_id="120461"]

RCBಗೆ ಕೆಎಂಎಫ್ ಪ್ರಾಯೋಜಕತ್ವ..!

[ccc_my_favorite_select_button post_id="120424"]

IPL ಟಿಕೆಟ್: ನಕಲಿ ಲಿಂಕ್ ಎಚ್ಚರಿಕೆ

[ccc_my_favorite_select_button post_id="120376"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ಕಾರು ಅಪಘಾತ: ಇನ್‌ಸ್ಪೆಕ್ಟರ್ ದುರ್ಮರಣ

ಕಾರು ಅಪಘಾತ: ಇನ್‌ಸ್ಪೆಕ್ಟರ್ ದುರ್ಮರಣ

ಕಾರು ಅಪಘಾತದಲ್ಲಿ (Accident) ವಿಜಯನಗರ-ಕೊಪ್ಪಳ ಜಿಲ್ಲಾ ಡಿಸಿಆರ್‌ಇ ಪೊಲೀಸ್‌ ಇನ್ ಸ್ಪೆಕ್ಟರ್ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಜಗಳೂರು ತಾಲೂಕಿನ ಕಡಬನಕಟ್ಟೆ ಬಳಿ ಸಂಭವಿಸಿದೆ.

[ccc_my_favorite_select_button post_id="121017"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!