ನಾ ಕಂಡ ದೇವಾಲಯಗಳು – ರವಿಶಂಕರ್ ಕೂಡಲಿ

ದೇವಾಲಯಗಳ ಸರಣಿ ಆರಂಭ ಮಾಡುವಾಗ,ಯಾವ ದೇವಸ್ಥಾನದ ಮೂಲಕ ಆರಂಭಿಸಬೇಕು ಎಂದು ಆಲೋಚಿಸಿದಾಗ,ತಕ್ಷಣ ಮನಸ್ಸಿಗೆ ಮೂಡಿ ಬಂದದ್ದು ಯಾವುದೇ ಕಾರ್ಯ ನಿರ್ವಿಘ್ನವಾಗಿ ಮುಂದುವರೆಯಲು ಶ್ರೀ ಗಣೇಶನ ಮಂದಿರ ಪರಿಚಯದಿಂದ ಆರಂಭಿಸಿದರೆ ಸೂಕ್ತವೆನಿಸಿತು..

ಪ್ರಥಮಂ ವಿನಾಯಕಂ .. ಸರಿ , ಆದರೆ ದೇಶದ ಉದ್ದಗಲಕ್ಕೂ ಪ್ರಸಿದ್ಧವಾದ ನೂರಾರು ವಿನಾಯಕ ಮಂದಿರಗಳಿವೆ.. ನಮ್ಮ ರಾಜ್ಯದಲ್ಲೇ ಬಹಳ ಇದೆ.. ಯಾವ ಮಂದಿರ ಆಯ್ದು ಕೊಳ್ಳಲಿ ಎಂದು ಅನಿಸಿದಾಗ ಮೊಟ್ಟಮೊದಲು ಮೂಡಿಬಂದಿದ್ದೇ

#ಗುಡ್ಡಟ್ಟು ಮಹಾಹಣಪತಿ ದೇವಾಲಯ..

ಎಷ್ಟೊಂದು ದೇವಸ್ಥಾನಗಳಿರುವಾಗ ಇದೇ ಯಾಕೆ ಮನಸಿಗೆ ಬಂತು..

 ಕಾರಣ ಸ್ಪಷ್ಟ..

ಬಹುತೇಕರಿಗೆ ಇದರ ಪರಿಚಯವಿಲ್ಲ..

#ಗುಡ್ಡಟ್ಟು ಗಣಪತಿ ದೇವಾಲಯಯ ಇರುವುದು ಉಡುಪಿ ಜಿಲ್ಲೆಯ ಕುಂದಾಪುರದ ಬಳಿ.

ದೇಶದಾದ್ಯಂತ ಇರುವ ಗಣಪತಿ ದೇವಾಲಯದಲ್ಲಿ ಎಲ್ಲೂ ಕಾಣದ ವಿಶೇಷ ಸೇವೆಯೊಂದು , ಈ ದೇವಸ್ಥಾನದಲ್ಲಿ ನಡೆಯುತ್ತದೆ..

ಈ ದೇವಾಲಯದಲ್ಲಿರುವ ಗಣಪತಿಗೆ ಪ್ರತಿನಿತ್ಯ ಒಂದು ಸಾವಿರ ಕೊಡಗಳ ನೀರಿನ ಅಭಿಷೇಕ..!! 

ಹೌದು .. ಒಂದು ಸಾವಿರ ಕೊಡದಿಂದ ಜಲಾಭಿಷೇಕ..

ಹಾಗಂತ ನೀರನ್ನು ಮೋಟಾರ್ ಬಳಸಿ ಪಂಪ್ ಮಾಡಿ ಎತ್ತುವುದಿಲ್ಲ. ಹಗ್ಗ ಹಾಕಿ ನೀರು ಸೇದುವುದೂ ಇಲ್ಲ..

ಬಾವಿಯೊಳಗೆ ಇಳಿದು ಒಬ್ಬರು ನೀರು ತುಂಬಿಕೊಂಡು ಮತ್ತೊಬ್ಬರಿಗೆ ಹಸ್ತಾಂತರಿಸುತ್ತಾರೆ.. ಹಾಗೇ ಹಸ್ತಾಂತರ ಗೊಳ್ಳುತ್ತಾ ನೀರು , ಗಣಪತಿ ಮೂರ್ತಿಗೆ ಅಭಿಷೇಕ ಮಾಡಲಾಗುತ್ತದೆ

ಗ್ರಾಮದ ಆಸಕ್ತ ಜನರು , ಮತ್ತು ಹರಕೆ ಮಾಡಿಕೊಂಡಿರುವ ಭಕ್ತಾದಿಗಳು ಸೇರಿ ಒಂದು ಸಾವಿರ ಕೊಡ ನೀರಿನಿಂದ ವಿನಾಯಕ ದೇವರಿಗೆ ಅಭಿಷೇಕ ಮಾಡಲಾಗುತ್ತದೆ.. 

ಇನ್ನೂ ಆಶ್ಚರ್ಯ ವಿಷಯವೆಂದರೆ , ಮಾರನೇ ದಿನ ಬೆಳಿಗ್ಗೆ ನಿನ್ನೆ ಅಭಿಷೇಕ ಮಾಡಿದ್ದ ಅಷ್ಟೂ ನೀರನ್ನು ಹೊರತೆಗೆದು , ಅಂದಿನ ನೈವೇದ್ಯ ಮತ್ತು ಪ್ರಸಾದ ತಯಾರಿಸಲು ಬಳಕೆಯಾಗುತ್ತದೆ. 

ಹಾಗೂ ವಿನಾಯಕನ ಮೂರ್ತಿಯನ್ನು ಶುಭ್ರವಾದ ಬಟ್ಟೆಯಿಂದ ಚೂರೂ ನೀರು ಇಲ್ಲದಂತೆ ಒರೆಸಿ , ನಂತರವಷ್ಟೇ ಅಂದಿನ ದಿನದ ಅಭಿಷೇಕ ಮಾಡಲಾಗುತ್ತದೆ..

ಹಾಗಂತ , ನೀವು ಇದ್ದಕ್ಕಿದ್ದಂತೆ ದೇವಸ್ಥಾನಕ್ಕೆ ಹೋಗಿ ನೀರು ಸೇದುವ ಸೇವೆ ಮಾಡಲಾಗುವುದಿಲ್ಲ..

ಈಗ ನೀವು ಹೆಸರು ಬರೆಸಿದರೆ , ಕನಿಷ್ಠ ಆರು ವರ್ಷ ಕಾಯಬೇಕಾಗುತ್ತದೆ.. ಅಂದರೆ , ಮುಂದಿನ ಆರು ವರ್ಷಗಳ ವರೆಗೆ ಸೇವೆಗೆ ಭಕ್ತರು ಹೆಸರು ನೋಂದಾಯಿಸಿದ್ದಾರಂತೆ..!!

ಇದೆಲ್ಲಾ ಸರಿ.. ಆದರೆ ಈ ಪ್ರತೀತಿ ಏಕೆ?? ಸಾವಿರ ಕೊಡ ಪ್ರತಿನಿತ್ಯ ಏಕೆ..??

ಅದಕ್ಕೊಂದು ಹಿನ್ನೆಲೆ ಇದೆ..

ಬಹಳ ಹಿಂದೆ ತ್ರಿಪುರಾಸುರನೆಂಬ ರಾಕ್ಷಸ ಜನರಿಗೆ ಹಿಂಸೆ ಮಾಡುತ್ತಿದ್ದನಂತೆ.. ಅದು ಪರಮೇಶ್ವರನಿಗೆ ತಿಳಿದು , ತ್ರಿಪುರಾಸುರ ರಾಕ್ಷಸನನ್ನು  ಕೊಲ್ಲಲು ಯುದ್ದಕ್ಕೆ ಹೊರಡುವ ಮುನ್ನ , ಪರಮೇಶ್ವರ ಆದಿಯಲ್ಲಿ ಗಣಪನನ್ನು ಪೂಜಿಸದೇ ಯುದ್ದ ಆರಂಭಿಸಿದ್ದಕ್ಕಾಗಿ ರಾಕ್ಷಸನಿಂದ ಸೋಲುಂಟಾಗುತ್ತದೆಯಂತೆ..

ತನಗೆ ಸೋಲಾಗಲು ಗಣಪತಿ ಕಾರಣನೆಂದು , ಕೋಪಗೊಂಡ ಶಿವನು , ತ್ರಿಶೂಲವನ್ನು ಗಣಪತಿಯ ಮೇಲೆ ಎಸೆಯುತ್ತಾನೆ.. ಆಗ ತ್ರಿಶೂಲದಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಗಣಪತಿಯು ಜೇನು ತುಂಬಿದ ಕೊಳದಲ್ಲಿ ಬೀಳುತ್ತಾನೆ.. ಮತ್ತು ಅಲ್ಲಿ ಸಾಕಷ್ಟು ಜೇನುತಿಂದ ಖುಷಿಯಲ್ಲಿ , ಶಿವನಿಗೆ ಜಯವಾಗಲೆಂದು ಹಾರೈಸುತ್ತಾನೆ..

ಶಿವ  ತ್ರಿಪುರಾಸುರನನ್ನು ಸಂಹರಿಸಿ , ಕೈಲಾಸಕ್ಕೆ ಮರಳುತ್ತಾನೆ..

ಆದರೆ ಜೇನು ಹೆಚ್ಚಾಗಿ ತಿಂದ ಕಾರಣ ಗಣಪತಿಯ ಮೈಯಲ್ಲಿ ಅಸಾಧ್ಯವಾದ ಪಿತ್ತವಾಗಿ ನರಳವುದನ್ನು ಕಂಡ ಶಿವಪಾರ್ವತಿಯರು , ದೇಹದ ಉರಿಶಮನಕ್ಕೆ ಸಲಹೆ ಕೊಟ್ಟಾಗ , ಅದರಂತೆ ಗಣಪತಿಯು ಈ ದೇವಸ್ಥಾದಲ್ಲಿ ಬಂದು ನೆಲೆಸುತ್ತಾನೆ..

ಹತ್ತಿರದಲ್ಲೇ ಹರಿಯುವ ನರಸಿಂಹ ತೀರ್ಥದ ನೀರು ವಾರಾಹಿ ನದಿಯಿಂದ ಸೇರುತ್ತದೆ..

ಅದೇ ನೀರಿನಲ್ಲಿ ಪ್ರತಿನಿತ್ಯ ಗಣಪತಿಗೆ ಸಾವಿರ ಕೊಡ ನೀರು ಬಾವಿಯಿಂದ ತುಂಬಿಕೊಂಡು ಅಭಿಷೇಕ ನಿರಂತರವಾಗಿ ಜರಗುತ್ತಿದ್ದರೆ ಮಾತ್ರ ಗಣಪತಿ ಸ್ವಾಮಿಯ ಮೈಉರಿ ಶಮನವಾಗುತ್ತದೆಯಂತೆ ಎಂದು ಅಲ್ಲಿನ ಅರ್ಚಕರು ಸ್ಥಳ ಮಹಿಮೆಯನ್ನು ತಿಳಿಸಿದರು.

ಇಲ್ಲಿರುವ ಗಣಪತಿ ಬಲಮುರಿ ಗಣಪತಿ ಯಾಗಿದ್ದು ನಂಬಿ ಬರುವ , ಸೇವೆಗೈಯುವ ಭಕ್ತರ  ಕೋರಿಕೆಗಳನ್ನು ಈಡೇರಿಸುತ್ರಾನೆ..

ಮೊದಲ ಬಾರಿಗೆ ಭೇಟಿ ಕೊಡುವ ಭಕ್ತರು ಬೆಳಿಗ್ಗೆ 11-30 ಸಮಯದಲ್ಲಿ ಅಲ್ಲಿ ಇದ್ದರೇ ,ನೀರು ತುಂಬುವ ಸೇವೆಯನ್ನು ವೀಕ್ಷಿಸಬಹುದು..

ನಂತರ ಮದ್ಯಾನಃ 1-30 ಗೆ ಪ್ರತಿನಿತ್ಯ ಭಕ್ತಾದಿಗಳಿಗೆ ಪ್ರಸಾದವಿರುತ್ತದೆ. ಪ್ರತಿಯೊಬ್ಬರೂ ಒಮ್ಮೆಯಾದರೂ ಜೀವನದಲ್ಲಿ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು , ಅಪರೂಪದ ಸೇವೆಯಲ್ಲಿ ಭಾಗಿಯಾಗಬೇಕು..

ದೇವಾಲಯದ ವಿಳಾಸ

Sri Vinayaka Temple Guddattu,Shiriyara-Guddattu Road, Guddattu Kundapura, Yedadi Matyadi, Karnataka 576222

0820 259 5432

https://maps.app.goo.gl/NWvXxf1wdNTGbHB19

ಮಾಹಿತಿ : ರವಿಶಂಕರ್ ಕೂಡಲಿ

ನಾಳೆ , #ಎರಡನೇ ದೇವಾಲಯ ಪರಿಚಯ ಬರಲಿದೆ..

ರಾಜಕೀಯ

ರಾಜ್ಯದಲ್ಲಿ ವೋಟ್ ಚೋರಿ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ; ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ

ರಾಜ್ಯದಲ್ಲಿ ವೋಟ್ ಚೋರಿ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ; ಹೆಚ್.ಡಿ. ಕುಮಾರಸ್ವಾಮಿ ಗಂಭೀರ

ರಾಜ್ಯದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ವೋಟ್ ಚೋರಿ (Vote Chori) ಮೂಲಕವೇ ಅಧಿಕಾರಕ್ಕೆ ಬಂದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H.D. Kumaraswamy) ಅವರು ನೇರ ಆರೋಪ ಮಾಡಿದರು.

[ccc_my_favorite_select_button post_id="115932"]
ಕರ್ನಾಟಕ ರಾಜ್ಯೋತ್ಸವಕ್ಕೆ ಶುಭಕೋರಿದ ಪವನ್ ಕಲ್ಯಾಣ್.. ಏನೆಂದು ಗೊತ್ತೆ..?!

ಕರ್ನಾಟಕ ರಾಜ್ಯೋತ್ಸವಕ್ಕೆ ಶುಭಕೋರಿದ ಪವನ್ ಕಲ್ಯಾಣ್.. ಏನೆಂದು ಗೊತ್ತೆ..?!

ಕರುನಾಡು ಇಂದು "70ನೇ ಕರ್ನಾಟಕ ರಾಜ್ಯೋತ್ಸವ”ದ (Karnataka Rajyotsava Celebration) ಸಂಭ್ರಮದಲ್ಲಿದೆ.

[ccc_my_favorite_select_button post_id="115602"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ರಾಜ್ಯಮಟ್ಟದ ಟೆನ್ನಿಸ್ ಪಂದ್ಯಾವಳಿಗೆ ಅಭೂತಪೂರ್ವ ಪ್ರತಿಕ್ರಿಯೆ: 300ಕ್ಕೂ ಹೆಚ್ಚು ಆಟಗಾರರ ಭಾಗಿ

ರಾಜ್ಯಮಟ್ಟದ ಟೆನ್ನಿಸ್ ಪಂದ್ಯಾವಳಿಗೆ ಅಭೂತಪೂರ್ವ ಪ್ರತಿಕ್ರಿಯೆ: 300ಕ್ಕೂ ಹೆಚ್ಚು ಆಟಗಾರರ ಭಾಗಿ

ರಾಜ್ಯಮಟ್ಟದ ಟೆನ್ನಿಸ್ (tennis) ಪಂದ್ಯಾವಳಿಗೆ ಈ ಬಾರಿ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿಷ್ಠಿತ ಪಂದ್ಯಾವಳಿನಲ್ಲಿ 300ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದು, ಇದು ರಾಜ್ಯದಲ್ಲಿ ಟೆನ್ನಿಸ್ ಕ್ರೀಡೆಯ ಜನಪ್ರಿಯತೆಯನ್ನು ಎತ್ತಿ ಹಿಡಿದಿದೆ ಎಂದು ಅವರು ತಿಳಿಸಿದರು.

[ccc_my_favorite_select_button post_id="115872"]
ಕೆರೆಯಲ್ಲಿ ಮೀನು ಹಿಡಿಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು..!

ಕೆರೆಯಲ್ಲಿ ಮೀನು ಹಿಡಿಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವು..!

ಕೆರೆಯಲ್ಲಿ (Lake) ಮೀನು ಹಿಡಿಯುವ ವೇಳೆ (Fishing) ವಿದ್ಯುತ್ ಸ್ಪರ್ಶಿಸಿ ಮಹಿಳೆ ಸಾವನಪ್ಪಿರುವ ಘಟನೆ ನಡೆದಿದೆ..

[ccc_my_favorite_select_button post_id="115898"]
ಭೀಕರ ಅಪಘಾತ.. 10 ತಿಂಗಳ ಮಗು ಸೇರಿ 20 ಮಂದಿ ದುರ್ಮರಣ.!| Video

ಭೀಕರ ಅಪಘಾತ.. 10 ತಿಂಗಳ ಮಗು ಸೇರಿ 20 ಮಂದಿ ದುರ್ಮರಣ.!| Video

ಇಂದು (ಸೋಮವಾರ) ಬೆಳ್ಳಗೆ ಟಿಪ್ಪರ್ ಲಾರಿ ಮತ್ತು ಸರ್ಕಾರಿ ಸಾರಿಗೆ ಬಸ್‌ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) 20 ಮಂದಿ ಮೃತಪಟ್ಟಿರುವ ಘಟನೆ ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಚೆವೆಲ್ಲಾ ಬಳಿ ನಡೆದಿದೆ.

[ccc_my_favorite_select_button post_id="115661"]

ಆರೋಗ್ಯ

ಸಿನಿಮಾ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಭಾರತೀಯ ಚಿತ್ರರಂಗ ಕನ್ನಡದತ್ತ ಬೆರಗಿನಿಂದ ನೋಡುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

ಕನ್ನಡ ಚಿತ್ರರಂಗ ಸಮೃದ್ಧವಾಗಿ ಬೆಳೆಯಬೇಕಾದರೆ ನಾಯಕ ನಟರು ಹೆಚ್ಚು ಸಿನಿಮಾಗಳನ್ನು ಮಾಡಬೇಕು ಹಾಗೂ ಹೆಚ್ಚು ನಾಯಕ ನಟರು ಚಿತ್ರರಂಗಕ್ಕೆ ಬರಬೇಕು ಎಂದು ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.

[ccc_my_favorite_select_button post_id="115245"]
error: Content is protected !!