ದೊಡ್ಡಬಳ್ಳಾಪುರ: ತೋಟಗಾರಿಕೆ ಇಲಾಖೆ ವತಿಯಿಂದ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ಟೊಮ್ಯಾಟೋ ಬೆಳೆಗೆ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹಾಗೂ ವಿಜಯಪುರ ಹೋಬಳಿ,ದೊಡ್ಡಬಳ್ಳಾಪುರ ತಾಲ್ಲೂಕಿನ ಕಸಬಾ ಹಾಗೂ ತೂಬಗೆರೆ ಹೋಬಳಿ,ನೆಲಮಂಗಲ ತಾಲ್ಲೂಕಿನ ಕಸಬಾ ಹೋಬಳಿ ಮತ್ತು ಹೊಸಕೋಟೆ ತಾಲ್ಲೂಕಿನ ಅನುಗೊಂಡನಹಳ್ಳಿ, ಜಡಿಗೇನಹಳ್ಳಿ ಹಾಗೂ ನಂದಗುಡಿ ಹೋಬಳಿಯ ರೈತರು ವಿಮಾ ನೋಂದಣಿ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ಹೆಕ್ಟೇರ್ ಗೆ ವಿಮಾ ಮೊತ್ತ ರೂ.1,18,000/- ಗಳಾಗಿದ್ದು, ರೈತರು ಪಾವತಿಸಬೇಕಾಗಿರುವ ವಿಮಾ ಕಂತು ವಿಮಾ ಮೊತ್ತದ ಶೇಕಡ 5 ರಂತೆ ರೂ. 5,900/- ಗಳನ್ನು ಜುಲೈ 15 ರೊಳಗಾಗಿ ಪಾವತಿಸಬೇಕಾಗಿರುತ್ತದೆ.
ವಿಮೆ ಮಾಡಿಸುವ ರೈತರು ನಿಗದಿತ ಅರ್ಜಿಯೊಂದಿಗೆ ಪಹಣಿ,ಬ್ಯಾಂಕ್ ಖಾತೆ ಪುಸ್ತಕ, ಆಧಾರ್ ನಕಲು ಪ್ರತಿಗಳನ್ನು ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳನ್ನು ಲಗತ್ತಿಸಿ ಆಯಾ ತಾಲ್ಲೂಕಿನ ಯಾವುದಾದರೂ ರಾಷ್ಟ್ರೀಯ ಅಧಿಕೃತ ಬ್ಯಾಂಕ್‍ಗಳಲ್ಲಿ (ಖಾತೆ ಹೊಂದಿರುವ ಬ್ಯಾಂಕ್) ನೋಂದಾಯಿಸಬಹುದಾಗಿದೆ.
ಟೊಮ್ಯಾಟೋ ಬೆಳೆ ಸಾಲ ಪಡೆದಿರುವ ರೈತರು ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಕೊಳ್ಳಲು ಇಚ್ಛಿಸದಿದ್ದಲ್ಲಿ ನೋಂದಣಿಯ ಕೊನೆಯ ದಿನಾಂಕವಾದ 15-07-2020ರ 7 ದಿನಗಳ ಮುಂಚಿತವಾಗಿ ಸಾಲ ಪಡೆದ ಬ್ಯಾಂಕ್ ನಲ್ಲಿ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲ್ಲೂಕು ಮಟ್ಟದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ತಾಂತ್ರಿಕ ಅಧಿಕಾರಿಗಳನ್ನು ಸಂಪರ್ಕಿಸಬಹುದು. ದೇವನಹಳ್ಳಿ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಮೊ.ಸಂ.: 9448001644, ತಾಂತ್ರಿಕ ಸಹಾಯಕರು ಮೊ.ಸಂ.: 9886736664, ಕಚೇರಿ ದೂ.ಸಂ.: 080 27681204. ದೊಡ್ಡಬಳ್ಳಾಪುರ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಮೊ.ಸಂ.: 9632410677, ತಾಂತ್ರಿಕ ಸಹಾಯಕರು ಮೊ.ಸಂ.: 9741895988, ಕಚೇರಿ ದೂ.ಸಂ.: 080 27623770. ಹೊಸಕೋಟೆ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಮೊ.ಸಂ.: 9538953949, ತಾಂತ್ರಿಕ ಸಹಾಯಕರು ಮೊ.ಸಂ.: 8453966868, ಕಚೇರಿ ದೂ.ಸಂ.: 080 29716626. ಹಾಗೂ ನೆಲಮಂಗಲ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು(ಜಿಪಂ) ಮೊ.ಸಂ.: 9901754339, ತಾಂತ್ರಿಕ ಸಹಾಯಕರು ಮೊ.ಸಂ.: 9980276248, ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ತೋಟಗಾರಿಕೆ ಉಪ ನಿರ್ದೇಶಕರು(ಜಿಪಂ) ಮಾಹಾಂತೇಶ ಮುರಗೋಡ (ಮೊ.ಸಂ.: 9448999214) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.