17 ವರ್ಷದೊಳಗಿನ ಮಕ್ಕಳ ಆಧಾರ್ ಅಪ್‌ಡೇಟ್‌ಗೆ ಸೂಚನೆ

Notice for Aadhaar update for children under 17 years of age

ಬೆಂಗಳೂರು: ರಾಜ್ಯದಲ್ಲಿ ಐದರಿಂದ 17 ವರ್ಷದೊಳಗಿನ ಮಕ್ಕಳಿಗೆ ಆಧಾರ್ (Aadhaar) ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಬಯೋಮೆಟ್ರಿಕ್ ಅಪ್‌ಡೇಟ್ ಮಾಡಿಸುವಂತೆ ಸರಕಾರ ಆದೇಶ ಹೊರಡಿಸಿದೆ.

5ರಿಂದ 17 ವರ್ಷದ ಎಲ್ಲಾ ಮಕ್ಕಳಿಗೆ ಸೆ.30ರೊಳಗೆ ಬಯೋ ಮೆಟ್ರಿಕ್ ಅಪ್‌ಡೇಟ್‌ಗೆ ಅವಕಾಶ ನೀಡಿದ್ದು, ಉಚಿತವಾಗಿ ಎಲ್ಲಾ ಆಧಾರ್ ಸೇವಾ ಕೇಂದ್ರಗಳಲ್ಲಿ ಈ ಸೌಲಭ್ಯವನ್ನು ಒದಗಿಸಲಾಗುವುದು.

ಪೋಷಕರು ತಮ್ಮ ಮಕ್ಕಳ ಆಧಾ‌ರ್ ಕಾರ್ಡ್ ಹಾಗೂ ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ಆಧಾ‌ರ್ ಕೇಂದ್ರಕ್ಕೆ ಭೇಟಿ ನೀಡಿ ಅಪ್‌ಡೇಟ್ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ಆಧಾರ್ ಬಯೋಮೆಟ್ರಿಕ್ ಅಪ್‌ಡೇಟ್ ಮಾಡಿಸುವುದರಿಂದ ಸರಕಾರಿ ಹಾಗೂ ಶೈಕ್ಷಣಿಕ ಸೌಲಭ್ಯಗಳನ್ನು ಸುಲಭ ವಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ಸರಕಾರ ತಿಳಿಸಿದೆ. ಆದರೆ ಆಧಾರ್ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇರುವುದು ಪೋಷಕರು ಹುಡುಕಾಟ ನಡೆಸಬೇಕಾದ ಅನಿರ್ವಾರ್ಯತೆ ಎದುರಾಗಿದೆ.

CBSE ಫಲಿತಾಂಶ; MSV ಶಾಲೆ ಮಕ್ಕಳ ಮೇಲುಗೈ: ದೊಡ್ಡಬಳ್ಳಾಪುರ ತಾಲೂಕಿಗೆ ಟಾಪರ್..

CBSE results; MSV school students dominate
CBSE results; MSV school students dominate

ದೊಡ್ಡಬಳ್ಳಾಪುರ: ನಿನ್ನೆ (ಏ‌.15) ಪ್ರಕಟವಾದ
ಸಿಬಿಎಸ್‌ಇ (CBSE) 10ನೇ ತರಗತಿ ಫಲಿತಾಂಶದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರತಿಷ್ಠಿತ ಶಾಲೆಯಾದ ಎಂ‌ಎಸ್‌ವಿ ಪಬ್ಲಿಕ್ ಶಾಲೆ (MSV Public School) ಶೇ.100 ರಷ್ಟು ಸಾಧನೆ ಮಾಡಿದೆ.

2025-26ನೇ ಸಾಲಿನ ಸಿಬಿಎಸ್‌ಇ ಕೇಂದ್ರೀಯ ಪರೀಕ್ಷಾ ಮಂಡಳಿಯ ಹತ್ತನೇ ತರಗತಿ ಫಲಿತಾಂಶದಲ್ಲಿ, ದೊಡ್ಡಬಳ್ಳಾಪುರ ನಗರದ ಎಂಎಸ್‌ವಿ ಪಬ್ಲಿಕ್ ಶಾಲೆಯು ನಿರಂತರವಾಗಿ 15ನೇ ವರ್ಷವೂ ಶೇ.100 ಸಾಧನೆ ಮಾಡಿ ಮತ್ತೊಮ್ಮೆ ಗಮನ ಸೆಳೆದಿದೆ. 

ಈ ಬಾರಿ ಒಟ್ಟು 136 ವಿದ್ಯಾರ್ಥಿಗಳಲ್ಲಿ 86 ಮಕ್ಕಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, 41 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಹಾಗೂ 6 ಮಕ್ಕಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಮಕ್ಕಳ ಈ ಫಲಿತಾಂಶಕ್ಕೆ ಮತ್ತು ಅವರ ಸಾಧನೆಗೆ ಶಾಲೆಯ ಸಂಸ್ಥಾಪಕರಾದ ಸುಬ್ರಮಣ್ಯ.ಎ ರವರು ಪ್ರಶಂಸೆ ವ್ಯಕ್ತಪಡಿಸಿದರು. 

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, “ನಿರಂತರವಾಗಿ 15 ವರ್ಷಗಳ ಕಾಲ ಶೇ.100 ಫಲಿತಾಂಶವನ್ನು ಸಾಧಿಸುವುದು ನಮ್ಮ ಶಾಲೆಯ ಗುಣಮಟ್ಟದ ಶಿಕ್ಷಣ ಮತ್ತು ತಂಡದ ಕಾರ್ಯದ ಪ್ರತೀಕವಾಗಿದೆ.  ಮಕ್ಕಳ ಈ ಸಾಧನೆ ನಮ್ಮ ಶಾಲೆಗೆ ಕೀರ್ತಿ ತಂದಿದೆ, ಮಕ್ಕಳಿಗೆ ಹಾಗೂ ವಿದ್ಯೆ ಕಲಿಸಿದ ಶಿಕ್ಷಕ ವೃಂದಕ್ಕೆ ನನ್ನ ಮನಃಪೂರ್ವಕವಾದ ಅಭಿನಂದನೆಗಳು” ಎಂದು ಮುಕ್ತ ಕಂಠದಿಂದ ಹಾರೈಸಿದ್ದಾರೆ.

ಶಾಲಾ ಕಾರ್ಯದರ್ಶಿ ಮಂಜುಳಾ ಸುಬ್ರಮಣ್ಯ, ಉಪಾಧ್ಯಕ್ಷ ಸ್ವರೂಪ್, ಟ್ರಸ್ಟಿ ನಯನಾ ಸ್ವರೂಪ್ ಹಾಗೂ ಪ್ರಾಂಶುಪಾಲರಾದ ರೆಮ್ಯ.ಬಿ.ವಿ ಹಾಗೂ ಸಿಬ್ಬಂದಿ ವರ್ಗಕೂಡ ಮಕ್ಕಳ ಸಾಧನೆಯನ್ನು ಮುಕ್ತ ಕಂಠದಿಂದ ಅಭಿನಂದನೆಗಳನ್ನು ಸಲ್ಲಿಸಿದರು.

ಈ ವಿಶಿಷ್ಟ ಸಾಧನೆಗೆ ಶಿಕ್ಷಕರ ಸಮರ್ಪಣೆ, ಮಾರ್ಗದರ್ಶನ,  ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಾಲೆಯ ಶಿಸ್ತಿನ ವಾತಾವರಣ ಪ್ರಮುಖ ಕಾರಣಗಳಾಗಿವೆ.

ಈ ಸಾಧನೆಯೊಂದಿಗೆ, ಶಾಲೆಯು ಸಿಬಿಎಸ್‌ಇ ಪಠ್ಯಕ್ರಮದಲ್ಲಿ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಮುಂದಿನ ವರ್ಷಗಳಲ್ಲಿಯೂ ಇದೇ ಸಾಧನೆಯನ್ನು ಮುಂದುವರಿಸುವ ವಿಶ್ವಾಸ ವ್ಯಕ್ತವಾಗಿದೆ.

ಫಲಿತಾಂಶದ ವಿವರ

ಶ್ರೇಯಾ ಆರ್ –  97.00%
ಶ್ರುತಿ ಬಿ ಆರ್  – 95.60%
ಡಿ ರಕ್ಷಾ – 94.60%
ಗಗನಶ್ರೀ ಡಿ ಎಸ್ – 94.00%
ಕೆ ಹೆಚ್ ಸ್ಮೃತಿ. – 93.00%
ಅಫಿಫಾ. – 92.60%
ಧನುಶ್ರೀ ವಿ.- 92.00%.

ಚಿನ್ಮಯ್ ಎನ್ ಲೋಕೇಶ್. – 91.80%
ಪೂರ್ವಿಕಾ ಡಿ – 91.60%
ಹರಿಪ್ರಿಯಾ ಕೆ ಪಿ. – 91.60%
ರವಿನೂತಲ ತೇಜೋ ನಾಗಗೌರೀ ವೈಷ್ಣವಿ. – 91.40%
ಯೋಗಿತಾ ಕೆ ಪಿ. – 91.40%
ರಿಶಿಕಾ ರಾಜ್ ಸಿ. – 91.20%.

ಕೃತಿಕಾ ಹೆಚ್ ಎಂ. – 90.80%
ಭರಣಿ.ಎಸ್. – 90.40%
ವರ್ಷ ಬಿಂದು ಎನ್. – 90.20%
ಇಖ್ರಾ ಮರಿಯಮ್ – 90.00%

CBSE: ದೊಡ್ಡಬಳ್ಳಾಪುರದ ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಗೆ ಶೇ.100 ಫಲಿತಾಂಶ

CBSE: 100% results for Sri Devaraj Aras International Residential School, Doddaballapur
CBSE: 100% results for Sri Devaraj Aras International Residential School, Doddaballapur

ದೊಡ್ಡಬಳ್ಳಾಪುರ: ನಿನ್ನೆ ಪ್ರಕಟವಾದ ಸಿಬಿಎಸ್‌ಇ (CAB) 10ನೇ ತರಗತಿ ಫಲಿತಾಂಶದಲ್ಲಿ ನಗರದ ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆ (SDUIRS) ಶೇ.100 ರಷ್ಟು ಸಾಧನೆ ಮಾಡಿದೆ.

2025-26ನೇ ಸಾಲಿನ ಸಿ.ಬಿ.ಎಸ್.ಇ  (ಕೇಂದ್ರೀಯ ಪರೀಕ್ಷಾ ಮಂಡಳಿ) ಹತ್ತನೇ ತರಗತಿ ಫಲಿತಾಂಶದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರತಿಷ್ಠತ ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಶಾಲೆಯು
ಶೇ.100ರಷ್ಟು ಫಲಿತಾಂಶ ಪಡೆದ ಸಾಧನೆ ಮತ್ತೊಮ್ಮೆ ಗಮನ ಸೆಳೆದಿದೆ.

ಈ ಬಾರಿ ಒಟ್ಟು 112 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದು 112ವಿದ್ಯಾರ್ಥಿಗಳು ಉತ್ತೀರ್ಣರಾಗಿ  ಪೋಷಕರಿಗೆ ಹಾಗೂ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.

16 ಮಕ್ಕಳು ಅತ್ಯುನ್ನತ್ತ ಶ್ರೇಣಿಯಲ್ಲಿ ಹಾಗೂ 77 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಮಕ್ಕಳ ಈ ಫಲಿತಾಂಶದ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಜಿ.ಎಚ್.ನಾಗರಾಜ, ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಕಾರ್ಯದರ್ಶಿ ಕೆ.ಜಿ.ಹನುಮಂತರಾಜು, ಆಡಳಿತ ಮಂಡಳಿಯ ಸದಸ್ಯರು (G.C. Members),ಹಾಗೂ ಪ್ರಾಂಶುಪಾಲರು ಹರ್ಷ ವ್ಯಕ್ತಪಡಿಸಿದರು.

ಈ ಕುರಿತು ಪ್ರಕಟಣೆ ನೀಡಿದ್ದು, ಶಾಲೆಯ ಶೇ.100 ಫಲಿತಾಂಶವನ್ನು ಸಾಧಿಸುವುದು ನಮ್ಮ ಶಾಲೆಯ ಗುಣಮಟ್ಟದ ಶಿಕ್ಷಣ ಹಾಗೂ ಕಾರ್ಯದಕ್ಷತೆಯ ಪ್ರತೀಕವಾಗಿದೆ. ಮಕ್ಕಳ ಈ ಸಾಧನೆ ನಮ್ಮ ಶಾಲೆಗೆ ಕೀರ್ತಿ ತಂದಿದೆ, ಮಕ್ಕಳಿಗೆ ಹಾಗೂ ವಿದ್ಯೆ ಕಲಿಸಿದ ಶಿಕ್ಷಕ ವೃಂದಕ್ಕೆ ನಮ್ಮ ಮನಃಪೂರ್ವಕವಾದ ಅಭಿನಂದನೆಗಳು ಎಂದು ಮುಕ್ತ ಕಂಠದಿಂದ ಹಾರೈಸಿದ್ದಾರೆ

ಈ ವಿಶಿಷ್ಟ ಸಾಧನೆಗೆ ಶಿಕ್ಷಕರ 
ಸಮರ್ಪಣೆ-ಮಾರ್ಗದರ್ಶನ, ಪೋಷಕರ ಸಹಕಾರ, ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಾಲೆಯ ಶಿಸ್ತಿನ
ವಾತಾವರಣ ಪ್ರಮುಖ ಕಾರಣಗಳಾಗಿವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಈ ಸಾಧನೆಯೊಂದಿಗೆ, ಶಾಲೆಯು ಸಿಬಿಎಸ್‌ಇ ಪಠ್ಯಕ್ರಮದಲ್ಲಿ ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಮುಂದಿನ
ವರ್ಷಗಳಲ್ಲಿಯೂ ಇದೇ ಸಾಧನೆಯನ್ನು ಮುಂದುವರಿಸುವ ವಿಶ್ವಾಸ ವ್ಯಕ್ತವಾಗಿದೆ.

ಫಲಿತಾಂಶದ ವಿವರ

ಸುರ್ಜಿತ್ ಕುಶ್ವಾಹ  95.4%
ಸಂಪ್ರೀತ್ ರಾಜ್.ಕೆ.ಎಸ್ – 95.4%.

ಅಮೃತ.ಆರ್  89.8%
ಚುಕ್ಕಿ ಎಚ್ ಪ್ರಸಾದ್ -89.8%
ಹಿತೈಷಿ ಜೆ ನವೀನ್  89.6%
ಚೇತಸ್.ಬಿ – 89.4%
ರಿತಿಕಾ ಅಗರ್‌ವಾಲ್  89%
ಎಮ್.ಸ್ವರೂಪ್ ಗೌಡ  88.2%
ಆರ್ಯ.ಎಮ್.ಎ  87.6%
ಗೌರಿ ದದೀಚ್  86.6%
ಯಶಸ್ವಿನಿ.ಸಿ.ಜಿ  86.2%
ಚಿಂತನಾ.ಕೆ,ಹೆಚ್   – 86.2%
ಸನತ್ ಕುಮಾರ್ ಜಿ ನಾಯಕ್  86%
ಶ್ರಾವಣಿ.ಕೆ.ಬಿ – 85.8%
ಸಾತ್ವಿಕ್.ಟಿ  85.2%
ಗಮನ ಜಿ ಗೌಡ  85%.

ಮನಿಷ.ಎನ್ – 84.6%
ಪ್ರಜನ್ ಗೌಡ .ಟಿ.ಎಸ್  83.8%
ಮೋನಿಷ.ಹೆಚ್.ಎಸ್ – 83.8%
ಇಂಚರ.ಪಿ – 83.8%
ಜಾನ್ಸಿ.ಡಿ.ಟಿ  83.6%
ವಿಸ್ಮಯ್ ಗೌಡ.ಟಿ.ಎ  83.4%
ಶಿವಾಂಗಿ ಯಾದವ್  83.2%
ಇಂಚರ.ಎಮ್.ಹೆಚ್  82.8%
ಯಶಸ್  81.6%
ಗಾನವಿ.ಜೆ  81.4%.

ರಾಜಕೀಯ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ. ಕುಮಾರಸ್ವಾಮಿ

ಮೋದಿ ಅವರ ಬಲಿಷ್ಠ ನಾಯಕತ್ವ, ಸಮರ್ಪಣಾ ಮನೋಭಾವ ಎಲ್ಲರ ಹೃದಯದಲ್ಲಿ ಬೇರೂರಿದೆ: ಹೆಚ್.ಡಿ.

ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸದೃಢ ನಾಯಕತ್ವ ಹಾಗೂ ರಾಷ್ಟ್ರ ನಿರ್ಮಾಣದಲ್ಲಿನ ಅವರ ಸಮರ್ಪಣ ಭಾವವು ಸಮಸ್ತ ಭಾರತೀಯರ ಹೃದಯಂತರಹದಲ್ಲಿ ಹಾಳವಾಗಿ ನೆಲೆಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="120986"]
5 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷೆ..!

5 ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷೆ..!

ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ (Monsoon deficit) ನಿರೀಕ್ಷಿಸಲಾಗಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ಸೂಚಿಸಿದರು.

[ccc_my_favorite_select_button post_id="121032"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ನೇಣುಬಿಗಿದು ಕೊಂಡು ಇಬ್ಬರ ಆತ್ಮಹತ್ಯೆ..!

ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪುರುಷರು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ಸೋಮವಾರ ಸಂಜೆ ದೊಡ್ಡಬಳ್ಳಾಪುರ ಗ್ರಾಮಾಂತರ ಹಾಗೂ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

[ccc_my_favorite_select_button post_id="120943"]
ಕಾರು ಅಪಘಾತ: ಇನ್‌ಸ್ಪೆಕ್ಟರ್ ದುರ್ಮರಣ

ಕಾರು ಅಪಘಾತ: ಇನ್‌ಸ್ಪೆಕ್ಟರ್ ದುರ್ಮರಣ

ಕಾರು ಅಪಘಾತದಲ್ಲಿ (Accident) ವಿಜಯನಗರ-ಕೊಪ್ಪಳ ಜಿಲ್ಲಾ ಡಿಸಿಆರ್‌ಇ ಪೊಲೀಸ್‌ ಇನ್ ಸ್ಪೆಕ್ಟರ್ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆ ಜಗಳೂರು ತಾಲೂಕಿನ ಕಡಬನಕಟ್ಟೆ ಬಳಿ ಸಂಭವಿಸಿದೆ.

[ccc_my_favorite_select_button post_id="121017"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]
error: Content is protected !!