ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಒಡವೆ ಅಂಗಡಿ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ 5.5 ಕೆ.ಜಿ ಬೆಳ್ಳಿ ಹಾಗೂ 35 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿವೈಎಸ್‌ಪಿ ಟಿ.ರಂಗಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ತಾಲೂಕಿನ ತೂಬಗೆರೆ ಗ್ರಾಮದಲ್ಲಿನ ಸಂತೋಷ್ ಬ್ಯಾಂಕರ್ ಮತ್ತು ಜ್ಯೂವೆಲರಿ ಅಂಗಡಿಯಲ್ಲಿ ಜೂನ್ 3೦ರಂದು ರಾತ್ರಿ ಅಂಗಡಿ ಗೋಡೆಯ ಹಿಂಭಾಗದಲ್ಲಿ ಕಿಂಡಿ ಕೊರೆದು, ಒಳನುಗ್ಗಿದ್ದ ಕಳ್ಳರು ಅಂಗಡಿಯಲ್ಲಿದ್ದ ಚಿನ್ನ ಹಾಗೂ ಬೆಳ್ಳಿ ಒಡವೆಗಳನ್ನು ಕಳ್ಳತನ ಮಾಡಿದ್ದರು. ಆರೋಪಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು ಪ್ರಕರಣಕ್ಕೆ ಸಂಬಂಸಿದಂತೆ ತೂಬಗೆರೆ ಹೋಬಳಿ ಗೆದ್ದಲು ಪಾಳ್ಯದ ನಿವಾಸಿಗಳಾದ ಸಿ.ಗಂಗಾಧರ(36), ಶ್ರೀನಿವಾಸ(34), ಕೃಷ್ಣಮೂರ್ತಿ (36) ಹಾಗೂ ಮುನಿಕೃಷ್ಣ (30) ಎಂಬುವವರನ್ನು ಬಂಧಿಸಿ ಆರೋಪಿಗಳಿಂದ 5.5ಕೆ.ಜಿ ಬೆಳ್ಳಿ, 35 ಗ್ರಾಂ ಚಿನ್ನ ಸೇರಿ 3.5 ಲಕ್ಷ ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.