ದೊಡ್ಡಬಳ್ಳಾಪುರ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಬಿಜೆಪಿಯ ವಿವಿಧ ಘಟಕಗಳವತಿಯಿಂದ ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜಿಲಾಗಿತ್ತು.
ಬೆಳ್ಬೆಗ್ಗೆ ಬಿಜೆಪಿ ಯುವಮೋರ್ಚಾ ಘಟಕದಿಂದ ಡಾ.ರಾಜ್ ಕುಮಾರ್ ವೃತ್ತದ ಬಳಿಯಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆವರಣವನ್ನು ಸ್ವಚ್ಚಗೊಳಿಸಿದ್ದರೆ.ನಂತರ, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೊನಾ ವಾರಿಯರ್ಸ್‌ಗಳಿಗೆ ಬಿಜೆಪಿ ನಗರ ಘಟಕದವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ,ಇಡೀ ಪ್ರಪಂಚವೇ ದೇಶದತ್ತ ನೋಡುವಂತೆ ಮಾಡಿದಂತಹ ದೇಶದ ಹೆಮ್ಮೆಯ ಪ್ರಧಾನಿ ಮೋದಿ ಅವರು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ. ದೇಶ ಮೊದಲು ಎನ್ನುವ ರೀತಿಯಲ್ಲಿಹಗಲು-ರಾತ್ರಿ ಎನ್ನದೇ ದೇಶದ ಬಗ್ಗೆ ಚಿಂತಿಸುತ್ತಿರುವ ಪ್ರಧಾನಿ ಇನ್ನೂ ನೂರಾರು ವರ್ಷಗಳ ಕಾಲ ದೇಶ ಮುನ್ನಡೆಸುವ ಶಕ್ತಿಯನ್ನು ದೇವರು ಅವರಿಗೆ ದಯಪಾಲಿಸಲಿ.ಅವರ ಜನ್ಮದಿನದಂದು ಕರೊನಾ ಸೋಂಕು ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಕರೊನಾ ವಾರಿಯರ್ಸ್‌ಗಳನ್ನು ಸನ್ಮಾನಿಸುತ್ತಿರುವುದು ಪುಣ್ಯದ ಕೆಲಸವೆಂದರು.
ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷ ಟಿ.ಎನ್.ನಾಗರಾಜ್,ಜಿಲ್ಲಾ ಉಪಾಧ್ಯಕ್ಷ ಮುದ್ದಪ್ಪ, ಬಿಬಿಎಂಪಿ ಮಾಜಿ ಸದಸ್ಯೆ ಮಂಜುಳನಾರಾಯಣಸ್ವಾಮಿ,ನಗರ ಅಧ್ಯಕ್ಷ ಹೆಚ್.ಎಸ್.ಶಿವಶಂಕರ್, ಯುವಮೋರ್ಚಾ ಅಧ್ಯಕ್ಷ ಶಿವರಾಜ್,ನ್ಯಾಯವಾದಿ ಮುನಿರಾಜು, ಆಶ್ರಯ ಸಮಿತಿ ಸದಸ್ಯ ಕೃಷ್ಣಮೂರ್ತಿ, ಮುಖಂಡರಾದ ಶಿವಾನಂದರೆಡ್ಡಿ, ಪದ್ಮಾವತಿ, ವತ್ಸಲ,ಶಿವಣ್ಣ,ಕೃಷ್ಣಪ್ಪ, ನಟರಾಜ್,ಆವಲಕೊಂಡಪ್ಪ, ಮಂಜುನಾಥ್,ಪುಷ್ಪ ಶಿವಶಂಕರ್,ಗಾಳಿಪಟ ಪ್ರಕಾಶ್, ಸಂದೀಪ್ ಸೇರಿದಂತೆ ಕಾರ್ಯಕರ್ತರು. ಇದ್ದರು
ಉಳಿದಂತೆ ಸಸಿ ನೆಡುವ ಕಾರ್ಯಕ್ರಮ, ರೋಗಿಗಳಿಗೆ ಹಣ್ಣು ವಿತರಣೆ, ದರ್ಗಾಜೋಗಹಳ್ಳಿಯಲ್ಲಿ ಅನ್ನ ಸಂತರ್ಪಣೆ, ಸಂಜೆ ವಿದ್ಯಾರ್ಥಿಗಳಿಗೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಸನ್ಮಾನ, ಅಭಯ ಚೌಡೇಶ್ವರಿ ದೇವಾಲಯದಲ್ಲಿ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

