ಚಿಕ್ಕಬಳ್ಳಾಪುರ: ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನಪ್ಪಿ ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ಏಳರ ದೇವಸ್ಥಾನದ ಹೊಸಹಳ್ಳಿ ಗೇಟ್ ನಲ್ಲಿ ನಡೆದಿದೆ.
ತಮಿಳುನಾಡಿನಿಂದ ಆಲೂಗಡ್ಡೆ ತುಂಬಿಕೊಂಡು ಆಂಧ್ರದತ್ತ ತೆರಳುತ್ತಿದ್ದ ಲಾರಿ.ಡೀಸಲ್ ಹಾಕಿಸಿ ಕೊಂಡು ಓನ್ ವೇ ನಲ್ಲಿ ಬಂದಾಗ ಆಂಧ್ರದಿಂದ ಲೋಹದ ಶೀಟ್ ರೋಲ್ ತುಂಬಿ ಕೊಂಡು ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಲೋಹದ ಶೀಟ್ ರೋಲ್ ತುಂಬಿದ್ದ ಲಾರಿಯಲ್ಲಿದ್ದ ಓರ್ವ ಸ್ಥಳದಲ್ಲೇ ಸಾವನಪ್ಪಿದ್ದು ಮತ್ತಿಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಆಲೂಗಡ್ಡೆ ಲಾರಿಯಲ್ಲಿದ್ದ ಚಾಲಕ ಕ್ಲೀನರ್ ಗೂ ತೀವ್ರ ಗಾಯಗಳಾಗಿದ್ದು,ಗಾಯಾಳುಗಳನ್ನುಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆ ಕುರಿತಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

