ದೊಡ್ಡಬಳ್ಳಾಪುರ: ನಗರದ ಮೋದಿಜಿ ಬಾಯ್ಸ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಬಿ.ಎಸ್.ಎಫ್ ಯೋಧರಿಗೆ, ಕರೊನಾ ವಾರಿಯರ್ಸ್ ಗಳಿಗೆ ಹಾಗೂ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ನಗರದ ರಾಘವೇಂದ್ರ ಸ್ವಾಮಿ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಆದರ್ಶ ಗೋಖಲೆ ಮಾತನಾಡಿ ಮೋದಿ ಅವರು ಕೊರೊನಾ ಸಂಕಷ್ಟದ ಸಮಯದಲ್ಲಿಯೂ ಜನರ ಹಿತವನ್ನು ಕಾಪಾಡಿದ್ದಾರೆ. ಇಡೀ ಜಗತ್ತಿನಲ್ಲಿ ಜನಪ್ರಿಯ ಪ್ರಧಾನಿ ಎಂದು ಹೆಸರು ಪಡೆದಿರುವುದು ಅವರ ಕಾರ್‍ಯವೈಖರಿಗೆ ಸಾಕ್ಷಿಯಾಗಿದೆ. ಮಹನೀಯರ ಆದರ್ಶ ಗುಣಗಳನ್ನು ಹೊಂದಿರುವ ಶಿಸ್ತಿನ ಸಿಪಾಯಿಯಂತಿರುವ ಮೋದಿ ಅವರನ್ನು ಪ್ರಧಾನಿಯಾಗಿ ಪಡೆದಿರುವುದು ಈ ದೇಶದ ಹೆಮ್ಮೆ ಎಂದರು.
ಬಿ.ಎಸ್.ಎಫ್ ಯೋಧ ಸಿ.ನಾರಾಯಣ ಸ್ವಾಮಿ ಮಾತನಾಡಿ, ನಾವು 2014 ಕ್ಕೂ ಮುಂಚೆ ಕರ್ತವ್ಯ ನಿರ್ವಹಿಸಲು ಕಷ್ಟ ವಾಗುತ್ತಿತ್ತು. 2014 ರಲ್ಲಿ ಮೋದಿ ಅವರು ಪ್ರಧಾನಿ ಅದ ಮೇಲೆ ನಮಗೆ ಬುಲೆಟ್ ಪ್ರೂಫ್ ಜಾಕೆಟ, ಬುಲೆಟ್ ಪ್ರೂಫ್ ವಾಹನಗಳನ್ನು ಒದಗಿಸಿ ಕೊಟ್ಟು ಯೋಧರಿಗೆ ನೈತಿಕ ಸ್ಥೈರ್ಯವನ್ನು ತುಂಬಿದ್ದಾರೆ. ಯೋಧರ ಹಿತ ಕಾಪಾಡುವ ಪ್ರಧಾನಿಗೆ ನಮ್ಮ ಕೃತಜ್ಞತೆಗಳು ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಲಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಮೋದಿಜಿ ಬಾಯ್ಸನ ಸ್ಥಾಪಕ ನರೇಂದ್ರ, ಸದಸ್ಯರಾದ ಗಂಗಾಧರ್ (ಭಕ್ತ), ರಘು, ಗೌತಮ್ ಹಾಗೂ ಹಿಂದು ಜಾಗರಣ ವೇದಿಕೆಯ ಆನಂದ್ ತುಮಕೂರು, ದೀರಜ್ ಮುನಿರಾಜ್, ನಗರಸಭೆ ಮಾಜಿ ಸದಸ್ಯ ಎನ್.ಕೆ.ರಮೇಶ್ ಮತ್ತಿತರರು ಭಾಗವಹಿಸಿದ್ದರು.

