ದೊಡ್ಡಬಳ್ಳಾಪುರ: ಸಬ್ ಇನ್ಸ್ಪೆಕ್ಟರ್ ಗಜೇಂದ್ರ ನೇತೃತ್ವದ ಗ್ರಾಮಾಂತರ ಪೋಲಿಸರು ಕಾರ್ಯಾಚರಣೆ ನಡೆಸಿ ಸುಮಾರು 60 ಸಾವಿರ ಮೌಲ್ಯದ ಗಾಂಜಾ ಗಿಡವನ್ನು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಹಾಡೋನಹಳ್ಳಿಯಲ್ಲಿ ನಡೆದಿದೆ.
ಹಾಡೋನಹಳ್ಳಿ ಗ್ರಾಮದ ವೆಂಕಟೇಶ(45) ಗಾಂಜಾ ಗಿಡ ಬೆಳೆದ ಆರೋಪಿ. ತನ್ನ ಮನೆಗೆ ಹೊಂದಿಕೊಂಡಂತಿರುವ ಶೌಚಾಲಯ ಹಾಗೂ ಜಮೀನಿನ ನಡುವೆ 1ಕೆಜಿ900 ಗ್ರಾಂ ತೂಕದ ಸುಮಾರು 60 ಸಾವಿರ ಮೌಲ್ಯದ ಗಾಂಜಾ ಗಿಡವನ್ನು ಬೆಳೆದಿದ್ದು, ಕುಂಬಳಗಿಡದ ಬಳ್ಳಿಯನ್ನು ಗಾಂಜಾಗಿಡ ಕಾಣದಂತೆ ಮರೆ ಮಾಡಿದ್ದ ಎನ್ನಲಾಗಿದೆ.
ಡಿವೈಎಸ್ಪಿ ಟಿ.ರಂಗಪ್ಪ ಅವರ ಆದೇಶದ ಮೇರೆಗೆ. ಸಬ್ ಇನ್ಸ್ಪೆಕ್ಟರ್ ಗಜೇಂದ್ರ ನೇತೃತ್ವದ ರಾಧಾಕೃಷ್ಣ, ಸುರೇಶ್, ವೆಂಕಟೇಶ್, ಮಧುಕುಮಾರ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಗಾಂಜಾ ಗಿಡವನ್ನು ವಶ ಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

