ಚಿಕ್ಕಬಳ್ಳಾಪುರ: ಸರ್ಕಾರಿ ಶಿಕ್ಷಕನಾಗಿ ಅನುಮೋದನೆ ಮಾಡಿಕೊಳ್ಳದ ಖಾಸಗಿ ಆಡಳಿತ ಮಂಡಳಿ ನನ್ನ ಸಾವಿಗೆ ಕಾರಣ’ ಎಂದು ಬ್ಲಾಕ್ ಬೋರ್ಡ್ ಮೇಲೆ ಬರೆದು ಖಾಸಗಿ ಶಾಲೆಯ ಶಿಕ್ಷಕ ನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯಲ್ಲಿ ನಡೆದಿದೆ.
ತಾಲೂಕಿನ ಕನಗಾನಕೊಪ್ಪ ಗ್ರಾಮದ ನಿವಾಸಿ ಚಂದ್ರಶೇಖರ್ (25) ಮೃತಪಟ್ಟ ಶಿಕ್ಷಕ ಎಂದು ತಿಳಿದು ಬಂದಿದೆ. ಮಂಚೇನಹಳ್ಳಿಯ ಆಚಾರ್ಯ ಸಂಯುಕ್ತ ಪ್ರೌಢಶಾಲೆಯಲ್ಲಿ ಕಳೆದೆರಡು ವರ್ಷಗಳಿಂದ ಶೈಕ್ಷಣಿಕ ವರ್ಷಕ್ಕೆ ಸೀಮಿತವಾದಂತೆ ಗೆಸ್ಟ್ ಟೀಚರ್ ಆಗಿ ಇವರು ಕೆಲಸ ನಿರ್ವಹಿಸುತ್ತಿದ್ದರಿ ಎನ್ನಲಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ಪ್ರಾರಂಭವಾಗದೇ ಇರುವುದರಿಂದ ಇವರನ್ನು ಗೆಸ್ಟ್ ಟೀಚರ್ ಆಗಿ ತೆಗೆದುಕೊಂಡಿಲ್ಲ. ಹೀಗಾಗಿ ಇವರು ತಮ್ಮ ಜೀವನೋಪಾಯಕ್ಕಾಗಿ ಮಂಚೇನಹಳ್ಳಿಯ ಅನಿಲ್ ಕುಮಾರ್ ಎಂಬುವರ ಮನೆಯನ್ನು ಬಾಡಿಗೆ ತೆಗೆದುಕೊಂಡು ಟ್ಯೂಷನ್ ನಡೆಸುತ್ತಿದ್ದರು ಎಂದು ವರದಿಯಾಗಿದೆ.
ಶುಕ್ರವಾರ ಸಂಜೆ 7 ಗಂಟೆ ಸುಮಾರಿಗೆ ಟ್ಯೂಷನ್ ರೂಂನ ಬ್ಲಾಕ್ ಬೋರ್ಡ್ ಮೇಲೆ ‘ವಿದ್ಯಾರ್ಥಿಗಳೇ, ನಿಮ್ಮ ಭವಿಷ್ಯ ಉಜ್ವಲವಾಗಿರಲಿ. ನನ್ನೆಲ್ಲಾ ಪ್ರೀತಿಪಾತ್ರರಲ್ಲಿ ಕ್ಷಮೆಯಾಚಿಸುತ್ತೇನೆ. ಖಾಸಗಿ ಶಾಲಾ ಶಿಕ್ಷಕನಾಗಿ ಸೇವೆ ಸಲ್ಲಿಸಿ ನನ್ನ ಸೇವೆಯನ್ನು ಗುರುತಿಸಿ ಸರ್ಕಾರಿ ಶಿಕ್ಷಕನಾಗಿ ಅನುಮೋದನೆ ಮಾಡಿಕೊಳ್ಳದ ಆಚಾರ್ಯ ಪ್ರೌಢಶಾಲೆ ಮಂಚೇನಹಳ್ಳಿ ಆಡಳಿತ ಮಂಡಳಿಯವರೇ ನನ್ನ ಸಾವಿಗೆ ಕಾರಣ’ ಎಂದು ಬರೆದು ನೇಣಿಗೆ ಶರಣಾಗಿದ್ದಾರೆ.
ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿಯ ಫೇಸ್ಬುಕ್ ಪುಟ ಹಾಗೂ ಟ್ವಿಟರ್ನಲ್ಲಿ ಫಾಲೋ ಮಾಡಿ.

