ಬೆಂಗಳೂರು: ಕರ್ನಾಟಕ ಗ್ರಾಮ ಪಂಚಾಯಿತಿಗಳ ಚುನಾವಣೆ-2020 ಘೋಷಣೆಯಾಗಿದ್ದು, ಮಾದರಿ ನೀತಿ ಸಂಹಿತೆ ದಿನಾಂಕ:30.11.2020 ರಿಂದ 31.12.2020 ರ ಸಂಜೆ 5.00 ಗಂಟೆಯವರೆಗೆ ಜಾರಿಯಲ್ಲಿದ್ದು, ಈ ಸಮಯದಲ್ಲಿ ಅಬಕಾರಿ ಅಕ್ರಮಗಳನ್ನು ತಡೆದು, ಚುನಾವಣೆಯು ಮುಕ್ತ, ಶಾಂತಿಯುತ ಹಾಗೂ ನಿಷ್ಪಕ್ಷಪಾತವಾಗಿ ನಡೆಸುವ ನಿಟ್ಟಿನಲ್ಲಿ ಚುನಾವಣಾ ದೂರುಗಳು ಮತ್ತು ಚುನಾವಣಾ ನಿಮಿತ್ತ ಮದ್ಯ ಮಾರಾಟ, ಹಂಚಿಕೆ ಹಾಗೂ ಸಾಗಾಣಿಕೆಯಂತಹ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾವಾರು ಉಪ ವಿಭಾಗಗಳಲ್ಲಿ ಪ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದೆ.
ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕ ಭರತ್ ಕೆ.ಎನ್. ಮೊ.ಸಂ.: 9986867266, ಅಬಕಾರಿ ರಕ್ಷಕ ಶ್ರೀಕಾಂತ, ಮೊ.ಸಂ.: 9916491511, ಯಶ್ವಂತ್ ಕುಮಾರ್.ಕೆ, ಮೊ.ಸಂ.: 7019656556, ನೆಲಮಂಗಲ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಗಿರೀಶ್.ಎ.ವಿ., ಮೊ.ಸಂ.: 9449597036, ಅಬಕಾರಿ ನಿರೀಕ್ಷಕ ಸುಭಾಷ್ ಚಂದ್ರ ಬೋಸ್, ಮೊ.ಸಂ.: 7348916211, ಅಬಕಾರಿ ರಕ್ಷಕ ನವೀನ್ ಕುಮಾರ್, ಮೊ.ಸಂ.:9901242329, ಮುನಿರಾಜು.ಎಂ, ಮೊ.ಸಂ.: 8762768052, ಹೊಸಕೋಟೆ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಜುನಾಯಿ.ಸಿ.ಎಸ್., ಮೊ.ಸಂ.: 9449597034, ಅಬಕಾರಿ ನಿರೀಕ್ಷಕ ದಿಲೀಪ್ ಕುಮಾರ್, ಮೊ.ಸಂ.: 9731265002, ಅಬಕಾರಿ ರಕ್ಷಕ ರಾಜೇಶ್, ಮೊ.ಸಂ.: 7090998888, ಖಂಡಪ್ಪ, ಮೊ.ಸಂ.: 8105787626 ಅವರನ್ನು ಒಳಗೊಂಡ ಪ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ರಚಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿಯ ಫೇಸ್ಬುಕ್ ಪುಟ ಹಾಗೂ ಟ್ವಿಟರ್ನಲ್ಲಿ ಫಾಲೋ ಮಾಡಿ.

