
ದೊಡ್ಡಬಳ್ಳಾಪುರ: ಈ ಬಾರಿ ಹಬ್ಬಗಳಿಗೆ ಕರೊನಾ ಬಿಸಿ ತಟ್ಟಿದ್ದರೂ ಸಂಕ್ರಾಂತಿಯ ಚರಣೆಯ ಸಂಭ್ರಮ ಕಾಣಬರುತ್ತಿದೆ. ದಿನೇ ದಿನೇ ಕೃಷಿಯಿಂದ ವಿಮುಖವಾಗುತ್ತಿರುವ ಇಂದಿನ ದಿನಗಳಲ್ಲಿ ಹಿಂದಿನ ಸಂಭ್ರಮಾಚರಣೆ ಇಲ್ಲದಿದ್ದರೂ, ಹಬ್ಬದ ಆಚರಣೆಗೆ ಸಿದ್ದತೆಗಳು ನಡೆಯುತ್ತಿವೆ.
ತಾಲೂಕಿನಲ್ಲಿ ಈ ಬಾರಿ ವಾಡಿಕೆ ಮಳೆ ಆಗಿದೆ. ಆದರೆ ಅಗತ್ಯ ಧಾನ್ಯಗಳ, ಹೂ ಹಣ್ಣುಗಳ ಗಗನಕ್ಕೇರಿರುವ ಬೆಲೆಗಳ ನಡುವೆ ಸಂಕ್ರಾಂತಿ ಹಬ್ಬವನ್ನು ಸ್ವಾಗತಿಸಬೇಕಿದೆ.
ಮಾರುಕಟ್ಟೆಯಲ್ಲಿ ಕೆ.ಜಿ ಕಡಲೇಕಾಯಿ 80ರೂ, ಎಳ್ಳು ಬೆಲ್ಲ ಕೆಜಿಗೆ 160 ರೂ. ಗೆಣಸು 35ರೂ. ಕಬ್ಬು ಜಳವೆಗೆ 50 ರೂ.ಅವರೇಕಾಯಿ ಕೆ.ಜಿಗೆ 60 ರೂ ಇದ್ದು ಬೆಲೆಗಳು ಹಬ್ಬಕ್ಕಾಗಿ ಹೆಚ್ಚಿವೆ. ಬೆಲೆ ಏರಿಕೆಯ ನಡುವೆಯೇ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಕಬ್ಬು, ಗೆಣಸು, ಕಡಲೇಕಾಯಿಗಳ ಮಾರಾಟ ಭರದಿಂದ ಸಾಗಿತ್ತು.
ಸಂಕ್ರಾಂತಿ ಹಬ್ಬಕ್ಕೆ ಅಗತ್ಯವೆನಿಸಿದ ಅಕ್ಕಿ, ಬೇಳೆ, ಧಾನ್ಯಗಳ ಬೆಲೆಯೊಂದಿಗೆ ಹೂವು ಹಣ್ಣಿನ ಬೆಲೆಗಳು ಸಹ ಗಗನಕ್ಕೇರಿವೆ. ಕಾಕಡ ಕೆ.ಜಿಗೆ 500ರೂ ಕನಕಾಂಬರ ಕೆ.ಜಿಗೆ 1000ರೂ ಇದ್ದರೆ ಶಾಮಂತಿಗೆ, ಗುಲಾಬಿ ಮೊದಲಾದ ಹೂವಿನ ಬೆಲೆಗಳು 200 ರವರೆಗೂ ಇವೆ. ತರಕಾರಿಗಳ ಬೆಲೆಗಳು ಸಾಧಾರಣವಾಗಿವೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗ್ರೂಪ್ ಮೂಲಕ ನಮ್ಮೊಂದಿಗೆ ಸೇರಿ.

