
ದೊಡ್ಡಬಳ್ಳಾಪುರ: ನಗರದ ಎಪಿಎಂಸಿ ಸಮೀಪದಲ್ಲಿರುವ ಸ್ನೇಹ ಭಾರತಿ ಮಕ್ಕಳ ತೆರೆದ ತಂಗುದಾಣದಲ್ಲಿರುವ ಅವಕಾಶ ವಂಚಿತ ಮಕ್ಕಳೊಂದಿಗೆ ಶಾಸಕ ಟಿ.ವೆಂಕಟರಮಣಯ್ಯ ಮಕರ ಸಂಕ್ರಾಂತಿ ಆಚರಿಸಿದರು.
ಹಬ್ಬದ ಅಂಗವಾಗಿ ಇಲ್ಲಿನ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿದ್ದ ಅವರು, ಊಟದ ವೇಳೆ ಎಳ್ಳು ಬೆಲ್ಲ ನೀಡಿ, ಅವರೊಂದಿಗೆ ಸಮಯ ಕಳೆಯುವ ಮೂಲಕ ಸಂಕ್ರಾತಿ ಹಬ್ಬವನ್ನು ಸಾರ್ಥಕಗೊಳಿಸಿಕೊಂಡರು.
ಈ ವೇಳೆ ವ್ಯವಸ್ಥಾಪಕ ದರಣೇಶ್ ಮಾತನಾಡಿ, ನಗರ ಮತ್ತು ಅರೆ ನಗರದ ಅವಕಾಶ ವಂಚಿತ ಮಕ್ಕಳ ವಸತಿಗೆಂದಿರು ಸ್ನೇಹ ಭಾರತಿ ಸಂಸ್ಥೆಯು ಬಾಡಿಗೆ ಕಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳಿಗೆ ಸ್ಥಳಾಭಾವವಿರುವುದರಿಂದ ಸ್ವಂತ ಕಟ್ಟಡಕ್ಕೆ ವಸತಿ ನೀಡಬೇಕೆಂದು ಮನವಿ ಮಾಡಿದರು.
ಮನವಿಗೆ ಉತ್ತರಿಸಿದ ಶಾಸಕ ಟಿ.ವೆಂಕಟರಮಣಯ್ಯ, ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡುವಂತೆ ಮನವಿ ಪತ್ರ ನೀಡಲು ಸಲಹೆ ನೀಡಿ, ಸೂಕ್ತ ಸ್ಥಳವನ್ನು ದೊರಕಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದೆಂದು ಭರವಸೆ ನೀಡಿದರು.
ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಶಂಕರ್, ಒಬಿಸಿ ಘಟಕದ ಅಧ್ಯಕ್ಷ ಪು.ಮಹೇಶ್, ಮುಖಂಡರಾದ ಅಕ್ಮಲ್, ವಿಕ್ಕಿ, ಅಂಬರೀಶ್, ಸ್ನೇಹ ಭಾರತಿ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳಾದ ಮೌನವಿ, ಬಿ.ಯರ್ರಿಸ್ವಾಮಿ, ಕೆ.ಟಿ. ದರ್ಶನ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗ್ರೂಪ್ ಮೂಲಕ ನಮ್ಮೊಂದಿಗೆ ಸೇರಿ.

