
ದೊಡ್ಡಬಳ್ಳಾಪುರ: ತಾಲೂಕಿನ ಮೆಳೇಕೋಟೆ ಕ್ರಾಸ್ ನಲ್ಲಿನ ಎಸ್.ಜೆ.ಸಿ.ಆರ್.ವಿದ್ಯಾನಿಕೇತನ ಶಾಲೆಯಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಹಾಡೋನಹಳ್ಳಿ ಗ್ರಾಮಪಂಚಾಯಿತಿ ಸದಸ್ಯ ಹೆಚ್.ಎ.ನಾಗರಾಜ್ ಮಾತನಾಡಿ, ಸಂಕ್ರಾಂತಿ ಹಬ್ಬ ನೆಪ ಮಾತ್ರಕ್ಕೆ ನಮ್ಮ ಹಿರಿಯರು ಮಾಡಿ ರುವುದಿಲ್ಲ. ವೈಜ್ಞಾನಿಕ ಮತ್ತು ಧಾರ್ಮಿ ಕವಾಗಿ ಅರ್ಥೈಸಿ ಪ್ರಕೃತ್ತಿ ಮತ್ತು ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸಲು ಸನಾತನ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಸಂಭ್ರಮದ ಆಚರಣೆ ಆಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶೈಕ್ಷಣಿಕ ಸಲಹೆಗಾರ ಎಸ್.ವೆಂಕಟೇಶಪ್ಪ ಮಾತನಾಡಿ, ಅನ್ನದಾತ ರೈತನು ಬೆಳೆದ ದವಸ ಧಾನ್ಯಗಳನ್ನು ಒಂದೆಡೆ ರಾಶಿ ಹಾಕು ವುದರ ಮೂಲಕ ಪೂಜೆ ಸಲ್ಲಿಸಿ ಭೂಮಿ ಪೂಜೆ, ಗೋವುಗಳ ಪೂಜೆಯೊಂದಿಗೆ ಗುರು ಪೂಜೆಯನ್ನು ಆಚರಿಸಿಕೊಂಡು ಬರುವ ಸಂಪ್ರದಾಯ ಅನಾದಿ ಕಾಲದಿಂ ದಲೂ ನಮ್ಮ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾ ಗಿದೆ. ಇಂತಹ ಪ್ರಕೃತಿ ಪೂರಕ ಕಾರ್ಯ ಕ್ರಮಗಳು ನಮ್ಮ ಸಂಸ್ಕೃತಿಯ ಪ್ರತೀಕ ವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಹೆಚ್.ಎಲ್ ವಿಜಯಕುಮಾರ್ ಸೇರಿದಂತೆ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗ್ರೂಪ್ ಮೂಲಕ ನಮ್ಮೊಂದಿಗೆ ಸೇರಿ.

