
ದೊಡ್ಡಬಳ್ಳಾಪುರ: ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ನಡೆಯಿತು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಕೆರೆ,ಕುಂಟೆಗಳನ್ನು ಕಟ್ಟಿಸಿ ಜನ,ಪ್ರಾಣಿ ಪಕ್ಷಿ ಸೇರಿದಂತೆ ಇಡೀ ಪ್ರಕೃತಿ ಸುಂದರವಾಗಿರುವಂತ ಕೆಲಸ ಮಾಡಿಸಿದ ಕೀರ್ತಿ ಸಿದ್ದರಾಮರಿಗೆ ಸಲ್ಲುತ್ತದೆ. ಸರಳ ಭಾಷೆಯ ಮೂಲಕ ಸಾಮಾನ್ಯ ಜನರೂ ಜೀವನದ ಮೌಲ್ಯಗಳನ್ನು ಅರಿತುಕೊಳ್ಳುವಂತೆ ವಚನಗಳನ್ನು ರಚಿಸಿ ಬದುಕಿಬನ ಮೌಲ್ಯಗಳನ್ನು ತಿಳಿಸಿದ್ದಾರೆ. ಭೋವಿ ಜನಾಂಗ ಶ್ರಮದಾಯಕ ಕಾಯಕದಲ್ಲಿ ನಿರತರಾಗಿದ್ದಾರೆ. ತಾವು ಶಾಸಕರದ ಮೇಲೆ ಹಿಂದುಳಿದ ವರ್ಗಗಳಿಗೆ ಹಲವಾರುಜನಪರ ಕಾರ್ಯಗಳನ್ನು ಮಾಡಲಾಗಿದೆ. ಜಗಜೀವನ್ ರಾಂ ಭವನ, ಹಲವಾರು ವಸತಿ ನಿಲಯಗಳು, ಕುಂಬಾರ, ಮಡಿವಾಳ ಸವಿತಾ ಸಮಾಜ ಮೊದಲಾದ ಸಮುದಾಯಗಳಿಗೆ ವಿಶೇಷ ಅನುದಾನಗಳನ್ನು ನೀಡಲಾಗಿದೆ. ಭೋವಿ ಜನಾಂಗದವರಿಗೆ ನಿವೇಷನ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು. ಈ ಹಿಂದೆ ಜಿಲ್ಲಾಕಾರಿಗಳು ಮಂಜೂರು ಮಾಡುವ ಅಕಾರವಿತ್ತು.ಆದರೆ ಈಗ ನಿಯಮಗಳು ಬದಲಾಗಿವೆ. ಎರಡು ವರ್ಷಗಳಿಂದ ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳು ಸುಗಮವಾಗಿ ಆಗುತ್ತಿಲ್ಲ ಎಂದರು.
ಭೋವಿ ಜನಾಂಗಕ್ಕೆ ಸಮುದಾಯ ಭವನಕ್ಕಾಗಿ ನಿವೇಶನ ಮಂಜೂರು, ಕೊಡಿಗೆಹಳ್ಳಿ ಬಳಿ ಸ್ಮಶಾನಕ್ಕಾಗಿ 2 ಎಕರೆ ಮೀಸಲಿರಿಸಿರುವ ಜಾಗಕ್ಕೆ ಕಾಂಪೌಂಡ್ ನಿರ್ಮಾಣ, ನಾಗರಕೆರೆ ಕಟ್ಟುವಲ್ಲಿ ಪಾತ್ರ ವಹಿಸಿದ್ದ ಭೋವಿ ಸಮುದಾಯದ ತಲೆಮಾರಿನವರು ಅನುಭದಲ್ಲಿರುವ ಜಮೀನು ಮಂಜೂರು ಮಾಡುವಂತೆ, ಹಾಗೂ ಭೋವಿ ಜನಾಂಗದ ಪಾರಂಪರಿಕ ಕಸುಬಾಗಿರುವ ಕಲ್ಲು ಹೊಡೆಯಲು ಸೂಕ್ತ ಪರವಾನಗಿ ನೀಡಬೇಕು ಎಂದು ಮುಖಂಡರು ಶಾಸಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಕಾರಿ ಸೋಮಶೇಖರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಲಕ್ಷ್ಮೀನರಸಿಂಹ, ಗ್ರಾಮ ಲೆಕ್ಕಿಗ ರಾಜೇಂದ್ರ ಬಾಬು,ಮುಖಂಡರಾದ ಸೋಮರುದ್ರಶರ್ಮ, ಬಿ.ಜಿ.ಹೇಮಂತ ರಾಜು,ಆಂಜಿನ ಮೂರ್ತಿ,ಸೇರಿದಂತೆ ಭೋವಿ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗ್ರೂಪ್ ಮೂಲಕ ನಮ್ಮೊಂದಿಗೆ ಸೇರಿ.

