ನೂತನ ಕೈಗಾರಿಕಾ ನೀತಿ 2020-25 ಕಾರ್ಯಕ್ರಮ / ಕೈಗಾರಿಕೋದ್ಯಮಿಗಳನ್ನು ಪ್ರೋತ್ಸಾಹಿಸಲು ನೂತನ ಕೈಗಾರಿಕಾ ನೀತಿ ಮಾದರಿಯಾಗಿದೆ: ಕೆ.ಬಿ.ಅರಸಪ್ಪ

ದಾವಣಗೆರೆ: ಕೊರೊನಾ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಸಾಕಷ್ಟು ಹಿಂಜರಿತ ಕಂಡಿದೆ. ಇದರ ಬೆನ್ನಲ್ಲೇ ಕೈಗಾರಿಕೋದ್ಯಮಿಗಳನ್ನು ಪ್ರೋತ್ಸಾಹಿಸಲು ನೂತನ ಕೈಗಾರಿಕಾ ನೀತಿ 2020-25 ಜಾರಿಗೊಂಡಿದ್ದು ಇದು ಮಾದರಿ ನೀತಿಯಾಗಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ.ಅರಸಪ್ಪ ತಿಳಿಸಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ ದಾವಣಗೆರೆ ಇವರ ಸಹಯೋಗದಲ್ಲಿ ಶನಿವಾರ ನಗರದ ಓಷಿಯನ್ ಪಾರ್ಕ್ ಹೋಟೆಲ್‍ನಲ್ಲಿ ಏರ್ಪಡಿಸಲಾಗಿದ್ದ ನೂತನ ಕೈಗಾರಿಕಾ ನೀತಿ 2020-25 ಮತ್ತು ಹೂಡಿಕೆ ಅವಕಾಶಗಳು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೊಸ ಕೈಗಾರಿಕಾ ನೀತಿ ಕ್ರಮಗಳಿಂದಾಗಿ ರಾಜ್ಯವು ಉನ್ನತ ಮಟ್ಟದ ಕೈಗಾರಿಕಾ ಕಾರ್ಯಕ್ಷಮತೆ ಹೊಂದಲು ಸಹಕಾರಿಯಾಗಿದೆ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಕೈಗಾರಿಕೆಗಳು ಸಂಕಷ್ಟದಲ್ಲಿದ್ದು, ಇದರಿಂದ ಸುಧಾರಿಸಿಕೊಳ್ಳಲು ಇನ್ನು ವರ್ಷದವರೆಗೆ ವಿದ್ಯುತ್ ದರ ಹೆಚ್ಚಿಸದಂತೆ ಮನವಿ ಮಾಡಿದಾಗ್ಯೂ ದರ ಹೆಚ್ಚಿಸಿರುವುದು ಗಾಯದ ಮೇಲೆ ಬರ ಹಾಕಿದಂತಾಗಿದೆ. ಇದನ್ನು ತಗ್ಗಿಸುವಂತೆ ಮನವಿ ಮಾಡಿದ್ದೇವೆ. 

ಕೈಗಾರಿಕೆಗಳ ಕಚ್ಚಾವಸ್ತುಗಳ ಬೆಲೆಯೂ ಶೇ.40 ಹೆಚ್ಚಿದೆ. ಇದನ್ನು ನಿಯಂತ್ರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಮೊದಲು ಕೆಎಸ್‍ಎಸ್‍ಐಡಿಸಿ ವತಿಯಿಂದ ಸ್ಟೀಲ್‍ನ್ನು ಹಂಚಿಕೆ ಮಾಡಲಾಗುತ್ತಿತ್ತು. ಈಗ ಅದೇ ರೀತಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಡಿಪೋ ಸ್ಥಾಪಿಸಿ ಸ್ಟೀಲ್‍ನ್ನು ಹಂಚಿಕೆ ಮಾಡುವಂತೆ ಮನವಿ ಮಾಡಲಾಗಿದ್ದು, ಕೆಎಸ್‍ಎಸ್‍ಐಡಿಸಿ ಎಂ.ಡಿಯವರು ಒಪ್ಪಿದ್ದಾರೆ ಎಂದರು.

ಎಂಎಸ್‍ಎಂಇ ಗಳಿಗೆ ಶೇ.10 ರಷ್ಟು ಹೂಡಿಕೆ ಉತ್ತೇಜನಾ ಸಹಾಯಧನ, ಕೆಎಸ್‍ಎಫ್‍ಸಿ ಸಾಲಗಳಿಗೆ ಸಾಲಗಳಿಗೆ ಬಡ್ಡಿಯನ್ನು ಶೇ.6 ಕ್ಕೆ ಇಳಿಸುವುದು ಮತ್ತು ಎಂಎಸ್‍ಎಂಇ ಗಳಿಗೆ ಹೆಚ್ಚಿನ ಸಾಲ ಸೌಲಭ್ಯ, ಕೆಐಎಡಿಬಿ ಕೈಗಾರಿಕಾ ಪ್ರದೇಶಗಳಲ್ಲಿ ಎಂಎಸ್‍ಎಂಇಗಳಿಗಾಗಿ ಶೇ.30 ರಷ್ಟು ನಿವೇಶನಗಳ ಮೀಸಲಾಗಿ, ವಿದ್ಯುತ್ ತೆರಿಗೆ ಮನ್ನಾ, ಖಾಸಗಿ ವಲಯದಲ್ಲಿ ಕೈಗಾರಿಕಾ ಪಾರ್ಕ್‍ಗಳು, ಟೈರ್-2 ಮತ್ತು ಟೈರ್-3 ನಗರಗಳಲ್ಲಿ ಕೈಗಾರಿಕಾ ಕ್ಲಸ್ಟರ್‍ಗಳ ಸ್ಥಾಪನೆ, ಕೈಗಾರಿಕಾ ವ್ಯಾಜ್ಯ ಕಾಯ್ದೆಯ ಸೆಕ್ಷನ್ 25-ಕೆ ಅನ್ವಯ ಕಾರ್ಮಿಕರ ಮಿತಿಯನ್ನು ಹೆಚ್ಚಿಸುವ ಕಾರ್ಮಿಕ ಸುಧಾರಣೆಗಳು ಮತ್ತು ಕಾರ್ಖಾನೆಗಳ ಕಾಯ್ದೆಯಡಿ ಪಾಲಿಸಬೇಕಾದ ಅನುಸರಣೆಯಲ್ಲಿ ಪರಿಹಾರ ಇದು ಸುಗ್ರೀವಾಜ್ಞೆಯಾಗಿರುವುದರಿಂದ ಕಾರ್ಮಿಕ ಮತ್ತು ಕೈಗಾರಿಕೆಗಳ ಹಿತದೃಷ್ಟಿಯಿಂದ ಕಾಯ್ದೆಗೆ ಅಗತ್ಯವಾದ ಶಾಸಕಾಂಗ ತಿದ್ದುಪಡಿಗಳನ್ನು ಮಾಡುತಂತೆ ಕೋರುತ್ತೇವೆ. ನೆರೆಯ ರಾಜ್ಯಗಳು ಈಗಾಗಲೇ ಈ ಸುಧಾರಣೆಗಳನ್ನು ಜಾರಿಗೆ ತಂದಿವೆ ಎಂದರು.

ಎಂಎಸ್‍ಎಂಇ ಗಳಿಗೆ ಭೂ ಮೀಸಲಾತಿ ಮತ್ತು ಹೂಡಿಕೆ ಸಹಾಯಧನವಾಗಿ ಶೇ.10 ರ ಅನುದಾನವು ಹೂಡಿಕೆಗೆ ಉತ್ತೇಜನ ನೀಡುತ್ತದೆ. ಕೈಗಾರಿಕೆಗಳ ಸುಲಲಿತ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್ ಯೋಜನೆಯನ್ನು ಇತ್ತೀಚೆಗೆ ರಾಜ್ಯ ಸರ್ಕಾರ ಜಾರಿಗೆ ತಂದಿರುವುದು ಶ್ಲಾಘನೀಯ ಎಂದ ಅವರು ಕೈಗಾರಿಕಾ ನೀತಿಯನ್ನು ಅಕ್ಷರಷಃ ಅನುಷ್ಟಾನಗೊಳಿಸಲಾಗಿದೆಯೇ ಎಂಬುದನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ನಿರ್ದೇಶಕ(ಎಂಎಸ್‍ಎಂಇ &ಪಿಪಿ) ಹೆಚ್.ಎಂ ಶ್ರೀನಿವಾಸ ಇವರು ನೂತನ ಕೈಗಾರಿಕಾ ನೀತಿ 2020-25 ಕುರಿತು ಪಿಪಿಟಿ ಮೂಲಕ ತಿಳಿಸುತ್ತಾ,  ದಿ: 13-08-2020 ರಲ್ಲಿ ನೂತನ ಕೈಗಾರಿಕಾ ನೀತಿ 2020-25 ಅಧಿಸೂಚನೆ ಹೊರಡಿಸಲಾಗಿದ್ದು, ಹೊಸ ಹೂಡಿಕೆದಾರರು ಮತ್ತು ಕೈಗಾರಿಕೋದ್ಯಮಳಿಗೆ ಪ್ರೋತ್ಸಾಹ ಮತ್ತು ರಿಯಾಯತಿಗಳು ಲಭಿಸಲಿದೆ. ಹಾಗೂ ಈ ನೀತಿಯ 5 ವರ್ಷಗಳ ಅವಧಿವರೆಗೆ ಊರ್ಜಿತವಾಗಿರುತ್ತದೆ.

ಜಾಗತಿಕವಾಗಿ ಉತ್ಪಾದನಾ ಕ್ಷೇತ್ರದಲ್ಲಿ ಕರ್ನಾಟಕದ ಸ್ಥಾನವನ್ನು ಉಳಿಸಿಕೊಳ್ಳುವುದು ಮತ್ತು ಇನ್ನೂ ಉನ್ನತ ಸಾಧನೆ ಮಾಡುವುದು, ಬಂಡವಾಳ ಸೇರ್ಪಡೆಗೊಳಿಸುವ ಮೂಲಕ ಕೈಗಾರಿಕಾ ಅಭಿವೃದ್ದಿಯನ್ನು ಸುಸ್ಥಿರವಾಗಿ ಬೆಳವಣಿಗೆ, ತಂತ್ರಜ್ಞಾನದ ವರ್ಗಾವಣೆ, ವಿಶ್ವ ದರ್ಜೆಯ ಕೈಗಾರಿಕಾ ಮೂಲಸೌಕರ್ಯಗಳು, ಕೌಶಲ್ಯತೆಯನ್ನು ಉನ್ನತೀಕರಿಸುವುದು, ನೀತಿಗಳನ್ನು ಮತ್ತು ವಿಧಾನಗಳನ್ನು ಜಾಗತಿಕ ಗುಣಮಟ್ಟಕ್ಕೆ ಸರಿಸಮನಾಗಿ ರೂಪಿಸುವುದು ನೀತಿಯ ಧ್ಯೇಯವಾಗಿದೆ.

ರೂ.5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಕರ್ಷಣೆ, ರೂ.20 ಲಕ್ಷ ಮಂದಿಗೆ ಉದ್ಯೋಗಾವಕಾಶಗಳ ಸೃಷ್ಟಿ, ಮುಂದಿನ 5 ವರ್ಷಗಳಲ್ಲಿ ವಾಣಿಜ್ಯ ರಫ್ತು ವ್ಯವಹಾರದಲ್ಲಿ 3ನೇ ಸ್ಥಾನ, ವಾರ್ಷಿಕ ಶೇ.10 ಕೈಗಾರಿಕಾ ಬೆಳವಣಿಗೆ ದರ ಕಾಯ್ದುಕೊಳ್ಳುವುದು ಮತ್ತು ತಂತ್ರಜ್ಞಾನ ಅಳವಡಿಕೆ ಮತ್ತು ನವೋನ್ವೇಷಣೆಗೆ ಪೂರಕ ಪರಿಸರವನ್ನು ನಿರ್ಮಾಣ ಮಾಡುವುದು ನೀತಿಯ ಮುಖ್ಯ ಉದ್ದೇಶವಾಗಿದೆ.

ಸೂಕ್ಷ್ಮ ಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳು, ಮಧ್ಯಮ ಕೈಗಾರಿಕೆಗಳಿಗೆ, ಬೃಹತ್, ಮೆಗಾ, ಅಲ್ಟ್ರಾ ಮೆಗಾ, ಸೂಪರ್ ಮೆಗಾ ಕೈಗಾರಿಕೆಗಳೆಂದು ವರ್ಗೀಕರಿಸಿದ್ದು ಈ ಕೈಗಾರಿಕೆಗಳಿಗೆ ಉತ್ತೇಜನ ಮತ್ತು ರಿಯಾಯಿತಿಗಳನ್ನು ನೀತಿಯಲ್ಲಿ ನೀಡಲಾಗಿದೆ. 

ನೀತಿಯ ಅಡಿಯಲ್ಲಿ ಪ್ರೋತ್ಸಾಹ ಮತ್ತು ರಿಯಾಯಿತಿಗಳು ನೀತಿಯ ಅವಧಿಯಲ್ಲಿ ಹೊಸ ಕೈಗಾರಿಕೋದ್ಯಮಗಳು ಹಾಗೂ ವಿಸ್ತರಣೆ/ವೈವಿಧ್ಯೀಕರಣ/ಆಧುನೀಕರಣಗಳಿಗೆ ಮಾಡಲಾದ ಎಲ್ಲ ಹೊಸ ಹೆಚ್ಚುವರಿ ಹೂಡಿಕೆಗಳಿಗೆ ಲಭ್ಯವಾಗಲಿದೆ.

2020-25 ರ ನೀತಿ ಅನ್ವಯ ಸ್ಟ್ಯಾಂಪ್ ಶುಲ್ಕ ವಿನಾಯಿತಿ ಮತ್ತು ವಿದ್ಯುತ್ ದರಪಟ್ಟಿ ಮೇಲೆ ತೆರಿಗೆಯ ಮೇಲಿನ ವಿನಾಯಿತಿಯು ಕಂದಾಯ ಮತ್ತು ಇಂಧನ ಇಲಾಖೆಗಳು ಅನುಕ್ರಮವಾಗಿ ಸಕ್ರಿಯಗೊಳಿಸುವ ಅಧಿಸೂಚನೆ ನೀಡಿದ ಬಳಿಕ ಜಾರಿಗೆ ಬರಲಿದೆ ಎಂದರು.

ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕ ಸುರೇಶ್ ಎನ್ ತಡಕನಹಳ್ಳಿ ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ 2019-24 ಕುರಿತು ಪಿಪಿಟಿ ಪ್ರದರ್ಶನ ಮೂಲಕ ವಿವರಣೆ ನೀಡಿ, ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ ಇದರ ಮುಖ್ಯ ಧ್ಯೇಯೋದೇಶವೆಂದರೆ ಭಾರತದ ಸಿದ್ಧ ಉಡುಪಿನ ರಾಜಧಾನಿ ಎಂಬ ಕರ್ನಾಟಕದ ಸ್ಥಾನವನ್ನು ಉಳಿಸಿಕೊಳ್ಳುವುದು ಮತ್ತು ಬಂಡವಾಳ ಕ್ರೂಢೀಕರಣ, ತಂತ್ರಜ್ಞಾನ ವರ್ಗಾವಣೆ, ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಕೌಶಲ್ಯ ಉನ್ನತೀಕರಣದ ಮೂಲಕ ಸಮಗ್ರ ಜವಳಿ ಮೌಲ್ಯ ಸರಪಳಿಯಲ್ಲಿ ಉನ್ನತ ಹಾಗೂ ಸುಸ್ಥಿರ ಬೆಳವಣಿಗೆಯನ್ನು ಸಾಧಿಸುವುದಾಗಿದೆ ಎಂದರು.

2019ರಿಂದ 2024ರ ನೀತಿಯ ಅವಧಿಯಲ್ಲಿ ರೂ.10,000 ಕೋಟಿ ಮೊತ್ತದ ಮಹತ್ವಾಕಾಂಕ್ಷೆಯನ್ನು ವಿವರಿಸುತ್ತದೆ ಹಾಗೂ ಸರಾಸರಿ 5,00,000 ಜನರಿಗೆ ಉದ್ಯೋಗ ಸೃಷ್ಟಿಸುವ ಗುರಿಯನ್ನುಹೊಂದಿದೆ. ಸ್ಥಳೀಯ ಆರ್ಥಿಹತೆಯನ್ನು ಉತ್ತೇಜಿಸುವ ಮತ್ತು ರಾಜ್ಯದಲ್ಲಿ ಸಮಗ್ರ ಜವಳಿ ಉಡುಪು ಪರಿಸರ ವ್ಯವಸ್ಥೆಯನ್ನು ಸೃಜಿಸುವ ಉದ್ದೇಶದೊಂದಿಗೆ ನೂಲುವಿಕೆ, ನೇಯುವಿಕೆ, ಸಂಯೋಜಿತ ಘಟಕಗಳು, ಸಂಸ್ಕರಣೆ, ತಾಂತ್ರಿಕ ಜವಳಿ ವಲಯಗಳನ್ನು  ಥ್ರಸ್ಟ್ ಸೆಕ್ಟರ್‍ಗಳೆಂದು ಗುರುತಿಸಲಾಗಿದೆ.ರಾಜ್ಯದಲ್ಲಿ ಅಂತರಾಷ್ಟ್ರೀಯ ಸ್ಪರ್ಧಾತ್ಮಕ ಜವಳಿ ಉದ್ಯಮವನ್ನು ಸೃಜಿಸಲು ನೂಲುವಿಕೆ, ನೇಯುವಿಕೆ (ರೇಪಿಯರ್ ಮಗ್ಗ, ಎರ್ಜೆಟ್‍ಮಗ್ಗಗಳು, ಮತ್ತು ವಿದ್ಯುನ್ಮಾನ ಜರ್ಕಾಡ್) ಸಂಯೋಜಿತ ಘಟಕಗಳು, ಸಂಸ್ಕರಣೆ  ಮತ್ತು ತಾಂತ್ರಿಕ ಜವಳಿಗಳನ್ನು ಈ ನೀತಿಯ ಒತ್ತು ನೀಡುವ ವಲಯಗಳೆಂಬುದಾಗಿ ಅವುಗಳ ಮೇಲೆ ವಿಶೇಷ ಗಮನವನ್ನು ನೀಡುವುದು.

ವಿಶ್ವದರ್ಜೆಯ ಸೌಲಭ್ಯಗಳ ತಯಾರಿಕೆಗಾಗಿ ಮತ್ತು ಜೆಡ್‍ಎಲ್‍ಡಿ ತಂತ್ರಜ್ಞಾನವನ್ನು ಉತ್ತೇಜುಸುವುದಕ್ಕಾಗಿ ಬೃಹತ್ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಜವಳಿ ಮೌಲ್ಯ ಸರಪಳಿಯ ಪ್ರತಿಯೊಂದು ಹಂತದಲ್ಲಿ ಶೂನ್ಯ ಪರಿಣಾಮ; ಶೂನ್ಯ ದೋಷ ಎಂಬ ವಾಕ್ಯವನ್ನು ಮನವರಿಕೆ ಮಾಡಿಕೊಳ್ಳುವುದು ನೀತಿಯ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಜಯಪ್ರಕಾಶ್ ನಾರಾಯಣ್, ಗ್ರಾಮೀಣ ವಿಭಾಗದ ಜಂಟಿ ಕಾರ್ಯದರ್ಶಿ ಸಿ.ಸಿ.ಹೊಂಡದಕಟ್ಟಿ, ಕಾಸಿಯಾ ಸದಸ್ಯರಾದ ಶೇಷಾಚಲ, ಮಂಜುನಾಥ ಲಿಂಗಾಯತ, ದಾವಣಗೆರೆ ಜಿಲ್ಲಾ ಮುದ್ರಣಕಾರರ ಸಂಘ, ಜಿಲ್ಲಾ ಸಣ್ಣ ಕೈಗಾರಿಕೋದ್ಯಮಿಗಳ ಸಂಘ, ಹರಿಹರ ಸಣ್ಣ ಕೈಗಾರಿಕರಗಳ ಸಂಘ, ದಾವಣಗೆರೆ ಜಿಲ್ಲಾ ಪ್ಲೆಕ್ಸ್ ಮುದ್ರಣಕಾರರ ಸಂಘ, ದಾವಣಗೆರೆ ಸ್ಟೀಲ್ ಫ್ಯಾಬ್ರಿಕೇಟ್‍ರ್ರ್ಸ್ ಅಸೋಷಿಯೇಸನ್ ಟೆಕ್ಸ್‍ಟೈಲ್ಸ್ ಪಾರ್ಕ್ ಅಸೋಷಿಯೇಸನ್ ಹಾಗೂ ಆಲ್ ಇಂಡಿಯಾ ಅಗ್ರಿಕಲ್ಚರ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್‍ನ ಪದಾಧಿಕಾರಿಗಳು ಇದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್, ಕೂ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

ರಾಜಕೀಯ

ಸಿಎಂ ಬದಲಾವಣೆ ವರಿಷ್ಠರ ತೀರ್ಮಾನಕ್ಕೆ ಬದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಿಎಂ ಬದಲಾವಣೆ ವರಿಷ್ಠರ ತೀರ್ಮಾನಕ್ಕೆ ಬದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾಂಗ್ರೆಸ್ ಸರ್ಕಾರದ ಯೋಜನೆಗಳು ಜನಮೆಚ್ಚುಗೆಗೆ ಪಾತ್ರವಾಗಿದ್ದು, ಜನಾಶೀರ್ವಾದದಿಂದ ರಾಜ್ಯದ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತಪೂರ್ವ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cm Siddaramaiah) ತಿಳಿಸಿದರು.

[ccc_my_favorite_select_button post_id="121818"]
ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ – ಡಿಸಿಎಂ‌ ಡಿ.ಕೆ. ಶಿವಕುಮಾರ್

ಬೌರಿಂಗ್ ಆಸ್ಪತ್ರೆ ದುರ್ಘಟನೆ: ಟೀಕೆ ಮಾಡೋದ್ ಬಿಟ್ಟು ಬಿಜೆಪಿಗರು ಸಹಾಯ ಮಾಡಲ್ಲ –

"ಬೌರಿಂಗ್ ಆಸ್ಪತ್ರೆ (Bowring Hospital) ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ ಇದರಿಂದ ಆಘಾತವಾಗಿದೆ" ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ (D.K. Shivakumar) ಬೇಸರ

[ccc_my_favorite_select_button post_id="121538"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

CSK ಅಭಿಮಾನಿಗಳಿಗೆ ಮತ್ತೆ ನಿರಾಸೆ..

ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಶೆಯಾಗಲಿದೆ. ಎಂಎಸ್ ಧೋನಿಯನ್ನು (MS Dhoni) ಮೈದಾನದಲ್ಲಿ ಕಣ್ಣುಂಬಿಸಿಕೊಳ್ಳಲು ಎದುರು ನೋಡುತ್ತಿದ್ದವರಿಗೆ ಈ ಆವೃತ್ತಿಯಲ್ಲಿ ಸಾಧ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿದೆ‌.

[ccc_my_favorite_select_button post_id="121736"]
ದೊಡ್ಡಬಳ್ಳಾಪುರ: ಅಕ್ರಮ ಸಂಬಂಧಕ್ಕೆ ಉಪನ್ಯಾಸಕಿ ಬಲಿ..!

ದೊಡ್ಡಬಳ್ಳಾಪುರ: ಅಕ್ರಮ ಸಂಬಂಧಕ್ಕೆ ಉಪನ್ಯಾಸಕಿ ಬಲಿ..!

ದೊಡ್ಡಬಳ್ಳಾಪುರ (Doddaballapur) ನಿರ್ಜನ ಪ್ರದೇಶದಲ್ಲಿದ್ದ ಕಾರಿನಲ್ಲಿ (Car) ಸುಟ್ಟುಕರಕಲಾದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾದ ಪ್ರಕರಣವನ್ನು ಪತ್ತೆಹಚ್ಚಿರುವ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ಚಂದ್ರಕಾಂತ್ (SP ) ಶ್ಲಾಘಿಸಿದ್ದು, ಅಭಿನಂದನೆ ಪತ್ರ ಹಾಗೂ ನಗದು ಪುರಸ್ಕಾರ ನೀಡುವುದಾಗಿ

[ccc_my_favorite_select_button post_id="121767"]
ದೊಡ್ಡಬಳ್ಳಾಪುರ:  ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಡಿವೈಡರ್ಗೆ ಕಾರು ಡಿಕ್ಕಿ.. ಚಾಲಕನಿಗೆ ಗಂಭೀರ ಗಾಯ

ದಾಬಸ್ ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಕಡೆಗೆ ತೆರಳುತ್ತಿದ್ದ ಕಾರು, ಏಕಾಏಕಿ ಚಾಲಕ ನಿಯಂತ್ರಣ ತಪ್ಪಿ ರಸ್ತೆ ಬದಿಯ ಡಿವೈಡರ್ಗೆ ಡಿಕ್ಕಿ (Accident) ಹೊಡೆದಿದೆ.

[ccc_my_favorite_select_button post_id="121485"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]