
ಪ್ರಸ್ತುತ ವರ್ತಮಾನದಲ್ಲಿ ಭಾರತದಲ್ಲಿನ ಹಿಂದುಗಳ ಪರಿಸ್ಥಿತಿಗೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ನನ್ನನ್ನೂ ಸೇರಿದಂತೆ ಬಹುತೇಕ ಹಿಂದೂಗಳ ಮನಸ್ಸಿನಲ್ಲಿ ಏಳುತ್ತಿರುವ ಪ್ರಶ್ನೆ ಇದು.
ಹೌದು…! ಹಿಂದೆಲ್ಲಾ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿದ್ದ ಸಮಯದಲ್ಲಿ ಹಿಂದೂಪರ ಕಾರ್ಯಕರ್ತರೆಲ್ಲಾ ಒಂದಿಲ್ಲೊಂದು ಬಾರಿ ಈ ರೀತಿಯಲ್ಲಿ ಅಂದುಕೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಸಾಲು ಸಾಲು ಹಿಂದೂ ಕಾರ್ಯಕರ್ತರ ಮಾರಣಹೋಮಗಳು ಅಥವಾ ಧರ್ಮಕ್ಕಾಗಿ ತಮ್ಮ ಅಮೂಲ್ಯ ಪ್ರಾಣಗಳ ಬಲಿದಾನಗೈದವರು.
ರಾಷ್ಟ್ರಕ್ಕಾಗಿ ಸೈನಿಕರು ಕೊಡುವ ಪ್ರಾಣಕ್ಕೂ ಧರ್ಮಕ್ಕಾಗಿ ಹಿಂದೂಗಳು ಕೊಡುವ ಪ್ರಾಣಕ್ಕೂ ವ್ಯತ್ಯಾಸವಿಲ್ಲ. ಅಷ್ಟಕ್ಕೂ ಬಿಜೆಪಿ ಹೊರತುಪಡಿಸಿ ಅನ್ಯಪಕ್ಷಗಳ ಸರ್ಕಾರಗಳು ಅಧಿಕಾರದಲ್ಲಿದ್ದರೆ ಹಿಂದೂಗಳ ಮಾರಣಹೋಮ ನಡೆಯುವುದಾದರೂ ಯಾಕೆ ಎಂಬ ಪ್ರಶ್ನೆಗೆ ಉತ್ತರ ಅಧಿಕಾರ ದಾಹಕ್ಕಾಗಿ ,ಮತಬ್ಯಾಂಕ್ ಕ್ರೋಢೀಕರಣಕ್ಕಾಗಿ ಒಂದು ವರ್ಗದ ತುಷ್ಟೀಕರಣ ನಡೆಸುವುದು ಎಂದೋ ಬೆತ್ತಲೆಯಾಗಿರುವ ಸತ್ಯ…
ಕೇರಳ, ಪಶ್ಚಿಮ ಬಂಗಾಳ ಗಳಲ್ಲಿ ಹಿಂದೂಗಳ ಬಲಿಯಾಗುತ್ತಿರುವುದು ಸರ್ವೇ ಸಾಮಾನ್ಯವಾಗುತ್ತಿದೆ. ಈ ಹಿಂದೆ ಕರ್ನಾಟಕದಲ್ಲಿ ಹಿಂದೂ ಕಾರ್ಯಕರ್ತರ ಬಲಿಯೇನು ಕಡಿಮೆ ಆಗಿರಲಿಲ್ಲ. ಕಾಂಗ್ರೆಸ್ ಅಧಿಕಾರಾವಧಿಯಲ್ಲಂತೂ ಬರೋಬ್ಬರಿ ಮೂವತ್ತೆರಡು ಅಮಾಯಕ ಜೀವಗಳು ಮತಾಂಧತೆಗೆ ಬಲಿಯಾಗಿದ್ದವು. ಇದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು ಕೂಡ..
ಆದರೆ ಆಗೆಲ್ಲಾ ಹಿಂದೂಗಳು ತಾಳ್ಮೆ ತಂದುಕೊಡು ಸುಮ್ಮನಿದ್ದದ್ದು ಮುಂದೊಂದು ದಿನ ಬಿಜೆಪಿ ಸರ್ಕಾರ ಬಂದೇ ಬರುತ್ತದೆ. ಆಗ ನಮ್ಮ ಸಹವರ್ತಿ ಕಾರ್ಯಕರ್ತರ ಪ್ರಾಣತ್ಯಾಗಕ್ಕೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂಬ ಒಂದೇ ಕಾರಣದಿಂದ. ಅಧಿಕಾರವಿಲ್ಲದ ರಾಜ್ಯಗಳಲ್ಲಿ ಮತಾಂಧತೆಗೆ ಅಮಾಯಕ ಹಿಂದೂ ಕಾರ್ಯಕರ್ತರ ಹತ್ಯೆಗಳಾದಾಗ ಅದೇ ಹೆಣದ ಮೇಲೆ ಅದೇ ರಕ್ತದ ಹೆಸರಿನಲ್ಲಿ ರಾಜಕಾರಣ ಮಾಡಿ ಮತ ಪಡೆದು ಅಧಿಕಾರ ಹಿಡಿಯುವ ಬಿಜೆಪಿ ಪಕ್ಷದ ರಾಜಕಾರಣಿಗಳು ಕುರ್ಚಿ ಸಿಕ್ಕ ನಂತರ ಮಾತು ಮರೆತ ಅನೇಕ ಉದಾಹರಣೆಗಳಿವೆ.
ಮತಾಂಧರಿಗಿಂತ ಹತ್ತು ಪಟ್ಟು ಹೆಚ್ಚು ಧೈರ್ಯ, ಸಾಹಸ, ಆಕ್ರಮಣಕಾರಿ ವ್ಯಕ್ತಿತ್ವ ನಮ್ಮ ಹಿಂದೂಗಳಲ್ಲಿ ಇದೆ. ಹಾಗಿದ್ದರೂ ಸಹ ಹಿಂದೂ ಕಾರ್ಯಕರ್ತರು ಮರೀಚಿಕೆಯಂತಹ ನ್ಯಾಯಕ್ಕಾಗಿ ಎದುರು ನೋಡುತ್ತಿರುತ್ತಾರೆ. ಅದಕ್ಕೆ ಕಾರಣ ನಮ್ಮಲ್ಲಿರುವ ಸಹಿಷ್ಣು ಭಾವನೆ. ಆದರೂ ಆ ಸಹಿಷ್ಣು ಭಾವನೆಯೇ ನಮ್ಮ ಪ್ರಾಣಗಳಿಗೆ ಅಪಾಯ ತಂದಾಗ, ಮೇಲೆ ಹೇಳಿದಂತೆ ಆಯುಧ ಹಿಡಿಯುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ.
ಮೊನ್ನೆ ದೆಹಲಿಯಲ್ಲಿ ನಡೆದ ದುರ್ದೈವಿ ರಿಂಕು ಶರ್ಮನ ಹತ್ಯೆಯಾದಾಗಲೂ ಬಹುತೇಕ ಹಿಂದೂಗಳಿಗೆ ಹೀಗನ್ನಿಸಿದ್ದು ಸುಳ್ಳಲ್ಲ. ಪ್ರಭು ಶ್ರೀರಾಮನ ದೆಗುಲ ನಿರ್ಮಾಣ ನಿಧಿ ಸಂಗ್ರಹಿಸುವ ವೇಳೆ ಜೈ ಶ್ರೀರಾಮ್ ಘೋಷ ಕೂಗಿದ್ದೇ ಆ ಹದಿಹರೆಯದ ಯುವಕನ ಪ್ರಾಣಕ್ಕೆ ಎರವಾಯಿತು. ಅಷ್ಟಕ್ಕೂ ಆತನ ಕೊಲೆ ಮಾಡಲು ಪಾಕಿಸ್ತಾನ ಅಥವಾ ಅಫಘಾನಿಸ್ತಾನದಿಂದ ಹಂತಕರು ಬಂದಿರಲಿಲ್ಲ. ಯಾರ ಹೆಂಡತಿ ಹೆರಿಗೆ ಸಮಯದಲ್ಲಿ ಧರ್ಮಾತೀತ ಸಹೋದರತ್ವ ಮೆರೆದು ತನ್ನ ರಕ್ತ ನೀಡಿ ಪ್ರಾಣ ಉಳಿಸಿದ್ದನೋ,, ಅದೇ ಆಪ್ತ ಸ್ನೇಹಿತ ರಿಂಕು ಶರ್ಮನ ಬೆನ್ನಿಗೆ ಇರಿದು ಪ್ರಾಣ ತೆಗೆದಿದ್ದ.
ಈಗ ದೆಹಲಿ ಕೇಂದ್ರಾಡಳಿತ ಪ್ರದೇಶವಾದ್ದರಿಂದ ಕೇಂದ್ರ ಸರ್ಕಾರದ ಮೇಲೆ ನಂಬಿಕೆಯಿಟ್ಟು ಇಡೀ ಹಿಂದೂ ಯುವ ಸಮೂಹ ತನ್ನೆಲ್ಲಾ ಅಕ್ರೋಶವನ್ನು ಅದುಮಿಟ್ಟುಕೊಂಡು ನ್ಯಾಯಕ್ಕಾಗಿ ಕಾಯುತ್ತಿದೆ. ಅಕಸ್ಮಾತ್ ಈ ಪ್ರಕರಣದಲ್ಲಿಯೂ ಹಿಂದುತ್ವಕ್ಕೆ ನ್ಯಾಯ ಸಿಗಲಿಲ್ಲವೆಂದಾದರೆ ಗತಿಯಾರು..?
ಪ್ರಭು ಶ್ರೀ ರಾಮನದ್ದೇ ಭೂಮಿಯಲ್ಲಿ ರಾಮನಾಮ ಉಚ್ಛರಿಸಿದರೆ ಪ್ರಾಣ ತೆಗೆಯುತ್ತಾರೆಂದಾದರೆ ಒಮ್ಮೆ ಸಹಜವಾಗಿ ಯೋಚಿಸಿ ನೋಡಿ…
ಇಷ್ಟೆಲ್ಲಾ ಅಧರ್ಮಗಳನ್ನು ನೋಡಿಕೊಂಡು ಸಹಿಸಿಕೊಂಡು ತಾಳ್ಮೆ ವ್ಯಕ್ತಪಡಿಸುತ್ತಿರುವ ಹಿಂದೂ ಯುವ ಸಮೂಹದ ಎದುರು ಬಾಲ ಬಿಚ್ಚಿ “ನೀ ತಾಂಟ್ರೆ ಬಾ ತಾಂಟ್” ಅಂದರೆ ಹೇಗಿರುತ್ತದೆ ಹೇಳಿ!? ಇಂತಿ ನಿಮ್ಮವ…ಜಿ.ಎನ್.ಪ್ರದೀಪ್
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್, ಕೂ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

