
ಬೆಂಗಳೂರು: ಪೆಟ್ರೋಲ್ / ಡಿಸೇಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರುವಂತೆಯೇ ಜನಸಾಮಾನ್ಯನಿಗೆ ಇದೀಗ ಅಡುಗೆ ಅನಿಲವೂ ಹೊರೆಯಾಗಿದ್ದು, ಎಲ್ಪಿಜಿ ಗ್ಯಾಸ್ ಸಿಲಿಂಡರ್ನ ಬೆಲೆ 50 ರೂ ಏರಿಕೆ ಮಾಡಲಾಗಿದೆ.
ಭಾನುವಾರ ದರ ಪರಿಷ್ಕರಣೆ ಆಗಿದ್ದು, ಇಂದಿನಿಂದಲೇ ಹೊಸ ದರ ಅನ್ವಯವಾಗಲಿದೆ. ಒಂದೇ ತಿಂಗಳಲ್ಲಿ ಎರಡು ಬಾರಿ ಬೆಲೆ ಏರಿಕೆ ಕಂಡಿದೆ.
ಫೆ. 4ರಂದು 25 ರೂ ಬೆಲೆ ಏರಿಕೆ ಆಗಿತ್ತು. ಇದೀಗ ಈ ತಿಂಗಳು ಒಟ್ಟಾರೆಯಾಗಿ 75 ರೂಪಾಯಿ ಬೆಲೆ ಏರಿಕೆಯಾಗಿದೆ. ಸಬ್ಸಿಡಿ ರಹಿತ 14.2 ಕಿಲೋ ತೂಕದ ಅಡುಗೆ ಅನಿಲದ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ ಇದೀಗ 722ರಿಂದ 772 ರೂಪಾಯಿಗೆ ಏರಿದೆ.
ಬೇರೆ ಬೇರೆ ರಾಜ್ಯಗಳಲ್ಲಿ ಸ್ಥಳೀಯ ತೆರಿಗೆಯಲ್ಲಿನ ವ್ಯತ್ಯಾಸದಿಂದಾಗಿ ಬೆಲೆಯಲ್ಲೂ ಅಲ್ಪಸ್ವಲ್ಪ ವ್ಯತ್ಯಯವಾಗುತ್ತದೆ.
ಉಳಿದಂತೆ ಇಂಡೇನ್ ಕಂಪನಿಯ ಸಿಲೆಂಡರ್ 45 ರೂ ಏರಿಕೆಯಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ..

