
ಬೆಂಗಳೂರು: ಮನೆಯಲ್ಲಿ ಟಿವಿ, ಬೈಕ್ ಹಾಗೂ ಫ್ರಿಡ್ಜ್ ಹೊಂದಿರುವವರು BPL ಕಾರ್ಡ್ ಹೊಂದಿದ್ರೆ ಕೂಡಲೇ ಹಿಂದಿರುಗಿಸಿ ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಒಳಗಾಗಿದ್ದ ಹಿನ್ನೆಲೆ, ಬಿಪಿಎಲ್ ಕಾರ್ಡ್ ಮಾನದಂಡದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಈ ಹಿಂದೆ ಇದ್ದ ಮಾನದಂಡಗಳನ್ನೇ ಮುಂದುವರಿಸಲಾಗುತ್ತದೆ. ನಾನು ಸಚಿವನಾದ ಬಳಿಕ ಯಾವುದೇ ತಿದ್ದುಪಡಿ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ ಮನೆಯಲ್ಲಿ ಟಿವಿ, ಬೈಕ್ ಹಾಗೂ ಫ್ರಿಡ್ಜ್ ಹೊಂದಿರುವವರು ಮಾ.31ರ ಒಳಗೆ BPL ಕಾರ್ಡ್ ಹೊಂದಿದ್ರೆ ಕೂಡಲೇ ಹಿಂದಿರುಗಿಸಬೇಕು, 5 ಎಕರೆಗಿಂತ ಹೆಚ್ಚಿನ ಜಮೀನು ಹೊಂದಿರುವವರು, ಟಿವಿ, ಬೈಕ್ ಹಾಗೂ ಫ್ರಿಡ್ಜ್ ನಿಮ್ಮ ಮನೆಯಲ್ಲಿ ಹೊಂದಿದ್ದು ಜೊತೆಗೆ BPL ಕಾರ್ಡ್ ಹೊಂದಿದ್ದರೆ ಕೂಡಲೇ ಕಾರ್ಡ್ ಹಿಂದಿರುಗಿಸಿ ಎಂದಿದ್ದ ಕತ್ತಿ ಹೇಳಿಕೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಪೆಟ್ರೋಲ್ / ಡಿಸೇಲ್/ ಎಲ್ಪಿಜಿ ಬೆಲೆ ಏರಿಕೆಯ ಒತ್ತಡದಿಂದ ಬಸವಳಿಯುತ್ತಿರುವ ಜನತೆ ಸಚಿವ ಕತ್ತಿ ಹೇಳಿಕೆಯಿಂದಾಗಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಜನತೆಯ ಕೆಂಗಣ್ಣಿಗೆ ಒಳಗಾಗಿದ್ದ ಹಿನ್ನೆಲೆಯಲ್ಲಿ ಸಚಿವ ಕತ್ತಿ ವರೆಸೆ ಬದಲಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ..

