
ದೊಡ್ಡಬಳ್ಳಾಪುರ: 22ನೇ ಬೆಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನ ನಗರದ ಬಸವ ಭವನದಲ್ಲಿ ಆರಂಭವಾಗಿದೆ.
ಸಮ್ಮೇಳನಾಧ್ಯಕ್ಷ ಹಿರಿಯ ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ ಅವರ ಮೆರವಣಿಗೆ ವಿಳಂಬವಾದ ಕಾರಣ, ಬಸವ ಭವನದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಈ ವೇಳೆ ಸಮ್ಮೇಳನದ ವಿಶೇಷ ಆಹ್ವಾನಿತೆ ಖ್ಯಾತ ಚಿತ್ರ ನಟಿ ಭವ್ಯ.1986ರಲ್ಲಿ ಬಿಡುಗಡೆಯಾದ ದಿ.ಡಾ.ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಂಡ ಕೃಷ್ಣಾ ನೀ ಬೇಗನೆ ಬಾರೋ ಚಿತ್ರದ ಅಲಾರೆ ಅಲಾರೆ ಅಲಾರೆ ಅಲಾರೆ ಮುಕುಂದ ಮುರಾರೆ ಗೀತೆ ನೃತ್ಯ ಪ್ರದರ್ಶನ ನೀಡಿ ರಂಜಿಸಿದರು.
ಪ್ರಸ್ತುತ, ವೇದಿಕೆಗೆ ಸಮ್ಮೇಳನಾಧ್ಯಕ್ಷರ ಆಗಮನವಾಗಿದ್ದು, ಪ್ರಸಿದ್ದ ಕವಿ ಸಿದ್ದಲಿಂಗಯ್ಯ, ಡಾ.ಹುಲಿಕಲ್ ನಟರಾಜ್, ತಾಲೂಕು ಅಧ್ಯಕ್ಷೆ ಪ್ರಮಿಳಾಮಹದೇವ್ ವೇದಿಕೆಯಲ್ಲಿದ್ದು ಕೆಲವೇ ಕ್ಷಣಗಳಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಲಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

