
ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಸವಿತಾ ಮಹರ್ಷಿ ಜಯಂತಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ 394 ನೇ ಜಯಂತಿ ಆಚರಣೆ ನಡೆಯಿತು.
ಸವಿತಾ ಮಹರ್ಷಿ ಹಾಗೂ ಶಿವಾಜಿ ಮಹಾರಾಜರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಹಿಂದುಳಿದ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡುವುದರೊಂದಿಗೆ ಮುಖ್ಯವಾಹಿನಿಗೆ ಬರಬೇಕು. ಮಂಗಳ ಕಾರ್ಯಗಳಲ್ಲಿ ಸವಿತಾ ಸಮಾಜದ ಅಸ್ತಿತ್ವ ಮುಖ್ಯವಾಗಿದೆ. ಹೋರಾಟದ ಹೆಸರಿಗೆ ಅನ್ವರ್ಥರಾಗಿದ್ದ ಚಕ್ರವರ್ತಿ ಶಿವಾಜಿ ದಕ್ಷಿಣ ಭಾಗಕ್ಕೆಲ್ಲ ತನ್ನ ಸಾಮ್ರಾಜ್ಯ ವಿಸ್ತರಿಸಿದ ಅಪ್ರತಿಮ ವೀರ. ವಿರೋಗಳನ್ನು ಲೆಕ್ಕಿಸದೇ ಧೈರ್ಯ ಸಾಹಸವನ್ನು ಮೆರೆದ ಶಿವಾಜಿ ಸಂಸ್ಖೃತಿಯ ಪ್ರತೀಕವಾಗಿದೆ ಎಂದರು. ಹಿಂದುಳಿದ ವರ್ಗಗಳ ಅಭಿವೃದ್ದಿಗಾಗಿ ಸರ್ಕಾರದ ಯೋಜನೆಗಳ ಜಾರಿ ಹಾಗೂ ಹಲವಾರು ಸೌಲಭ್ಯಗಳನ್ನು ತಮ್ಮ ಅವಯಲ್ಲಿ ನೀಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ, ಉಪವಿಭಾಗಾಧಿಕಾರಿ ಅರುಳ್‍ಕುಮಾರ್, ತಹಸೀಲ್ದಾರ್ ಟಿ.ಎಸ್.ಶಿವರಾಜ್, ಎಪಿಎಂಸಿ ಅಧ್ಯಕ್ಷ ವಿಶ್ವನಾಥ, ತಾಲೂಕು ಪಂಚಾಯಿತಿ ಸದಸ್ಯ ಹಸನ್‍ಘಟ್ಟ ರವಿ ಸೇರಿದಂತೆ ಸವಿತಾ ಸಮಾಜ ಹಾಗೂ ಕ್ಷತ್ರಿಯ ಮರಾಠ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

