
ದೊಡ್ಡಬಳ್ಳಾಪುರ: ಕಟ್ಟಡ ನಿರ್ಮಾಣಕ್ಕೆ ಕಬ್ಬಿಣದ ಕಂಬಿಗಳನ್ನು ಸಾಗಿಸುತ್ತಿದ್ದ ಟ್ರಾಕ್ಟರ್ ಉರುಳಿ ಬಿದ್ದು ಓರ್ವ ಸಾವನಪ್ಪಿರುವ ಘಟನೆ ತಾಲೂಕಿನ ಗುಮ್ಮನಹಳ್ಳಿ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.
ಘಟನೆಯಲ್ಲಿ ಕೊರಟಗೆರೆ ತಾಲೂಕಿನ ಹೊಳವನಹಳ್ಳಿಯ ಗಾರೆ ಕೆಲಸ ಮಾಡುತ್ತಿದ್ದ ಮಿರ್ಜಾ ಅಬ್ಬಾಸ್(32) ಸ್ಥಳದಲ್ಲಿಯೇ ಸಾವನಪ್ಪಿದ್ದು, ಟ್ರಾಕ್ಟರ್ ಚಾಲಕ ಅಲ್ಲಿಪುರದ ಮುಜಾಮೀಲ್ (35) ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಖಾಲಿಪಾಳ್ಯದಲ್ಲಿ ನಿರ್ಮಿಸುತ್ತಿದ್ದ ಕಟ್ಟಡಕ್ಕೆ ಕಬ್ಬಿಣದ ಕಂಬಿಗಳನ್ನು ಅಲ್ಲಿಪುರದಿಂದ ಸಾಗಿಸುವ ವೇಳೆ ಚಾಲಕ ನಿಯಂತ್ರಣ ತಪ್ಪಿದ ಟ್ರಾಕ್ಟರ್ ರಸ್ತೆ ಬದಿಯಲ್ಲಿನ ಚಾನಲ್ಗೆ ಉರುಳಿಬಿದಿದ್ದು, ಚಾಲಕ ಟ್ರಾಕ್ಟರ್ ನಿಂದ ಎಗರಿ ಜೀವ ಉಳಿಸಿಕೊಂಡರೆ, ಪಕ್ಕದಲ್ಲೆ ಕುಳಿತಿದ್ದ ಮಿರ್ಜಾ ಅಬ್ಬಾಸ್ ಟ್ರಾಕ್ಟರ್ ಮತ್ತು ಟ್ರಾಲಿ ನಡುವೆ ಸಿಕ್ಕು ಸಾವನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ಹರಿತಲೇಖನಿಗೆ ತಿಳಿಸಿವೆ.
ಘಟನೆ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಮೂಲಕ ಫಾಲೋ ಮಾಡಿ. ನಮ್ಮೋಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

