
ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿನ ಜವಾಹರ ನವೋದಯ ವಿದ್ಯಾಲಯದ 13 ವಿದ್ಯಾರ್ಥಿಗಳು ಟೇಕ್ವಾಂಡೋ ಸ್ಪರ್ಧೆಯಲ್ಲಿ ಬ್ಲಾಕ್ ಬೆಲ್ಟ್ ಮತ್ತು ಕಲರ್ ಬೆಲ್ಟ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.
ವಿದ್ಯಾಲಯದ ದೈಹಿಕ ಶಿಕ್ಷಕ ರಾಮಾಂಜಿನಪ್ಪ ಅವರಿಂದ ಟೇಕ್ವಾಂಡೋ ತರಬೇತಿ ಪಡೆದ ವಿದ್ಯಾರ್ಥಿಗಳು ಕರ್ನಾಟಕ ಟೇಕ್ವಾಂಡೋ ಸಂಸ್ಥೆ ಆಯೋಜಿಸಿದ್ದ ಬ್ಲಾಕ್ ಬೆಲ್ಟ್ ಮತ್ತು ಕಲರ್ ಬೆಲ್ಟ್ ಸ್ಪರ್ಧೆಯಲ್ಲಿ ಉತ್ತಮವಾದ ಪ್ರದರ್ಶನ ನೀಡಿ ಪ್ರಶಸ್ತಿಗಳನ್ನು ಪಡೆದಿದ್ದಾರೆಂದು ಪ್ರಾಂಶುಪಾಲರಾದ ಆರ್.ಚಕ್ರವರ್ತಿ ಹರಿತಲೇಖನಿಗೆ ತಿಳಿಸಿದ್ದಾರೆ.
ಬ್ಲಾಕ್ ಬೆಲ್ಟ್ ಸ್ಪರ್ಧೆ: ಕೀರ್ತಿ ಎಂ. ಬಿ, ಲಿಖಿತಾ ಕೆ. ಎಂ, ಅಮ್ರತ ಎ. ಬಿ, ತನುಶ್ರೀ ಹೆಚ್. ಎನ್, ತನ್ಯಾ ವಿ, ಶಿವಾನಿ ಬಿ, ಕುಮಾರ ರೋಹಿತ್ ಎಂ, ಕೀರ್ತನ್ ಎನ್. ಬಿ, ನವನೀತ ಗೌಡ ಹಾಗೂ ಯತೀಶ್ ಗೌಡ ಅವರು ಬ್ಲಾಕ್ ಬೆಲ್ಟ್ ಪಡೆದಿದ್ದಾರೆ.
ಕಲರ್ ಬೆಲ್ಟ್ ಸ್ಪರ್ಧೆ: ಕುಮಾರ್ ಅಭಿನವ್ ಐ. ಬಿ. ಮತ್ತು ಶ್ರೇಯಾಂತ್ ಎನ್.ಯು ಅವರು ಕಲರ್ ಬೆಲ್ಟ್ ಪಡೆದಿದ್ದಾರೆ.
ಇಂದು ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದ ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ಆರ.ಚಕ್ರವರ್ತಿ, ತಮ್ಮ ವಿಶೇಷ ಪರಿಶ್ರಮದಿಂದ ಇಂತಹ ವಿಶಿಷ್ಟ ಪ್ರಶಸ್ತಿ ಪತ್ರ ಪಡೆದಿರುವ ಈ ಮಕ್ಕಳನ್ನು ವಿದ್ಯಾಲಯದ ಕೀರ್ತಿಯನ್ನು ಸಾರಿದ್ದಾರೆ ಎಂದರು.
ಈ ವೇಳೆ ಉಪ ಪ್ರಾಂಶುಪಾಲರಾದ ಅಶೋಕನಂದಾ, ತರಬೇತುದಾರ ರಾಮಾಮಜಿನಯ್ಯ, ದೈಹಿಕ ಶಿಕ್ಷಕಿ ಅಂಜಲಿ ಪಿಳ್ಳೈ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

