
ದೊಡ್ಡಬಳ್ಳಾಪುರ: ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ಅವರ ಪೊಲೀಸ್ ಜೀಪಿನಲ್ಲಿ ಹಾವೊಂದು ಹೊಕ್ಕು, ಕೆಲ ಕಾಲ ಹಾವಿನ ರಕ್ಷಣೆ ಕಾರ್ಯ ನಡೆಸಿದ ಘಟನೆ ನಗರದ ಬಸವಭವನದ ಬಳಿ ನಡೆದಿದೆ.
ಕಚೇರಿಗೆ ಬರುವ ಸಂಧರ್ಭದಲ್ಲಿ ಹಿಂಬದಿಯ ವಾಹನ ಸವಾರರಿಗೆ ಪೊಲೀಸ್ ಜೀಪಿನಲ್ಲಿ ರಾಮಬಾಣದ ಹಾವು ಇರುವುದು ಕಂಡು ಬಂದಿದ್ದು, ಜೀಪನ್ನು ತಡೆದು ನಿಲ್ಲಿಸಿ ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೆ ಸ್ಥಳೀಯ ಹಾವು ಹಿಡಿಯುವವರನ್ನು ಕರೆಸಿ ಟೂಲ್ ಬಾಕ್ಸ್ ನಲ್ಲಿ ಸೇರಿದ್ದ ಹಾವನ್ನು ಹಿಡಿದು, ವನ್ಯ ಪ್ರದೇಶಕ್ಕೆ ಬಿಡಲು ಕಳುಹಿಸಿಕೊಡಲಾಗಿದೆ.
ನಗರ ಗ್ರಾಮಾಂತರ ಎನ್ನದೆ ಸುತ್ತಿರುವ ಜೀಪಿನಲ್ಲಿ ಯಾವ ಸಂದರ್ಭದಲ್ಲಿ ಹಾವು ಸೇರಿತ್ತು ಎಂಬ ಮಾಹಿತಿ ಇಲ್ಲವಾಗಿದ್ದು, ಅದೃಷ್ಟವಶಾತ್ ಯಾವುದೇ ತೊಂದರೆ ಉಂಟಾಗಿಲ್ಲ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…..

