
ಬೆಂ.ಗ್ರಾ.ಜಿಲ್ಲೆ: ನೆಲಮಂಗಲದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಆಯೋಜಿಸಿದ್ದ, ಜಂಬೋ ಕಪ್ 2021ರ ಮೊದಲನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ದೊಡ್ಡಬಳ್ಳಾಪುರದ ಬ್ರೂಸ್ ಬುಡೋಕನ್ ಕರಾಟೆ ಕ್ಲಬ್‌ನ ವಿದ್ಯಾರ್ಥಿಗಳು ಏಳು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಪಡೆದಿದ್ದಾರೆ.
ಫೆ.27ರಿಂದ 28ರ ವರೆಗೆ ನಡೆದ ಪಂದ್ಯಾವಳಿಯಲ್ಲಿ ನಗರದ ಬ್ರೂಸ್ ಬುಡೋಕನ್ ಕರಾಟೆ ಕ್ಲಬ್‌ನ ಮಾಸ್ಟರ್ ಎಂ.ಸತೀಶ್ ಹಾಗೂ ಗ್ರಾಂಡ್ ಮಾಸ್ಟರ್ ಮಹಮದ್ ಸಲೀಂ ತರಬೇತಿಯಲ್ಲಿ 5 ಮಂದಿ ಸ್ಪರ್ದೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಅತಿ ಹೆಚ್ಚು ಚಿನ್ನದ ಪದಕ ಪಡೆದ ಬ್ರೂಸ್ ಬುಡೋಕನ್ ಕರಾಟೆ ಕ್ಲಬ್ಗೆ ಚಾಂಪಿಯನ್ ರನ್ನರ್ ಕಪ್ ನೀಡಿ ಗೌರವಿಸಲಾಗಿದೆ.
ಸ್ಪರ್ಧಿಗಳ ವಿವರ: ಕಾಳಿಚರಣ್, ಯಶಸ್ವಿನಿ, ಬುವನ್ ತಲಾ 2ಚಿನ್ನದ ಪದಕ, ವಿಗ್ನೇಶ್ ಒಂದು ಚಿನ್ನದ ಪದಕ ಹಾಗೂ ತೇಜಸ್ ಬೆಳ್ಳಿ ಪದಕ ಪಡೆದವರಾಗಿದ್ದಾರೆ.
ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಶ್ರಿ ಸಿದ್ದಲಿಂಗಸ್ವಾಮಿ ಜೀ, ಜಂಬೋ ಕರಾಟೆ ಅಸೋಸಿಯೇಷನ್ ಸಂಸ್ಥಾಪಕ ಎಂ.ಪಿ. ಮಾರುತಿ, ಯುವ ಮುಖಂಡ ದೀಪಕ್, ಗ್ರಾಂಡ್ ಮಾಸ್ಟರ್ ಜಗದೀಶ್, ತೀರ್ಪುಗಾರರಾದ ಪವಿತ್ರ, ಯಶವಂತ್, ಮನೋಹರ್ ಮತ್ತಿತರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ.ಸುದ್ದಿಗಳು ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

