ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸ್ವಾಗತವೇ…?

ರಾಷ್ಟ್ರೀಯ ಶಿಕ್ಷಣ ನೀತಿಯದ್ದೆ ಈಗ ಎಲ್ಲೆಡೆ ಚರ್ಚೆ. ದೇಶದ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಬದಲಿಸುವ ಈ ಕ್ರಾಂತಿಕಾರಿ ನೀತಿಯಲ್ಲಿ ಏನಿದೆ ಎಂಬ ಕುತೂಹಲ ವಿದ್ಯಾರ್ಥಿಗಳಿಂದ ಹಿಡಿದು ಶಿಕ್ಷಣ ತಜ್ಞರ ವರೆಗೂ ಇದೆ. ಈ ಕುರಿತು ದೊಡ್ಡಬಳ್ಳಾಪುರದ ಶ್ರೀ ದೇವರಾಜ್ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಚಿಕ್ಕಣ್ಣ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸ್ವಾಗತವೇ ಆದರೆ.. ನಾಲ್ಕು ವರ್ಷದ ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಭಾಷಾ ಭೋದನೆಯನ್ನು ಕೇವಲ ಒಂದು ವರ್ಷಕ್ಕೆ ಅಂದರೆ ಎರಡು ಸೆಮಿಸ್ಟರ್ ಗಳಿಗೆ ಮಾತ್ರ ಸೀಮಿತಗೊಳಿಸಿರುವುದು, ಕನ್ನಡ ಭಾಷೆಗೆ, ಕನ್ನಡ ಕಲಿಯುವ ಪ್ರತಿಭೆಗಳಿಗೆ ಹಾಗೂ ಕನ್ನಡಿಗರಿಗೆ ಮಾಡಿದ ಅವಮಾನ ಎಂದು ಅವರು ಆರೋಪಿಸಿದ್ದಾರೆ .

ಮೂರು ವರ್ಷಗಳ ಪದವಿಯಲ್ಲಿ ಎರಡು ವರ್ಷ ಅಥವಾ ನಾಲ್ಕು ಸೆಮಿಸ್ಟರ್ ಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಕಲಿಯುತ್ತಿದ್ದರು. ಆದರೆ ಈಗ ನಾಲ್ಕು ವರ್ಷಗಳ ಪದವಿಯಲ್ಲಿ ಕೇವಲ ಒಂದೇ ವರ್ಷಕ್ಕೆ ಸೀಮಿತಗೊಳಿಸಿರುವುದು ಸಮಂಜಸವಲ್ಲ.

ಇದು ಕನ್ನಡ ಜನ, ಕನ್ನಡ ನಾಡು ನುಡಿಯ ಕಡಗಣನೆ. ಹಾಗಾಗಿ ಕನಿಷ್ಟ ಮೂರು ವರ್ಷಗಳಿಗೆ ಅಂದರೆ ಆರು ಸೆಮಿಸ್ಟರ್ ಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಕಲಿಯಲು ಸರ್ಕಾರ ನೂತನ ಶಿಕ್ಷಣ ನೀತಿಯಲ್ಲಿ ಅವಕಾಶ ಮಾಡಿಕೊಡಬೇಕು ಎಂದವರು ಒತ್ತಾಯಿಸಿದ್ದಾರೆ‌.

ಕರ್ನಾಟಕದ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್ ಗಳಲ್ಲಿ ಕನ್ನಡ ಭಾಷೆಯ ಬೋಧನೆಗೆ ಕೇವಲ ಒಂದು ವರ್ಷ ಅಂದರೆ ಎರಡು ಸೆಮಿಸ್ಟರ್ ಗಳಿಗೆ ಮಾತ್ರ ನಿಗದಿಗೊಳಿಸಿರುವುದು  ಅವೈಜ್ಞಾನಿಕ, ಅಶೈಕ್ಷಣಿಕ ಹಾಗೂ ಅಸಾಂಸ್ಕೃತಿಕ ನಿಲುವಾಗಿದೆ.

ಜೀವನಪೂರ್ತಿ ಭಾಷೆ ಬಳಸಬೇಕಾಗಿರುವ ವಿದ್ಯಾರ್ಥಿಗಳು ಇನ್ನೂ ಎರಡು ವರ್ಷ ಭಾಷೆ ಕುರಿತು  ಓದಿದಲ್ಲಿ ಯಾರಿಗೂ ಯಾವುದೇ ನಷ್ಟ ಆಗುವುದಿಲ್ಲ ಬದಲಾಗಿ ನಮ್ಮ ಭಾಷೆ, ನಮ್ಮನಾಡು, ನಮ್ಮಸಂಸ್ಕೃತಿ, ಸಾಹಿತ್ಯ ಮೊದಲಾದುವುಗಳ ಸ್ಪಷ್ಟ  ಅರಿವಿಗೆ ವೇದಿಕೆ ಕಲ್ಪಿಸಿದಂತಾಗುತ್ತದೆ.

ಆದ ಕಾರಣ ಕೇಂದ್ರ ಸರ್ಕಾರ ಈ ಕುರಿತು ಗಮನಹರಿಸಿ ಕರ್ನಾಟಕದ 4 ವರ್ಷದ ಪದವಿ ಕೋರ್ಸ್ ಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ 6 ಸೆಮಿಸ್ಟರ್ ಗಳಲ್ಲಿ ಅಂದರೆ ಮೂರು ವರ್ಷಗಳಲ್ಲಿ ಕಲಿಯುವಂತೆ, ಕಲಿಸುವಂತೆ, ವ್ಯವಸ್ಥೆ ಮಾಡುವ ಮೂಲಕ ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯದ ಉಳಿವು ಮತ್ತು ಅಧ್ಯಯನಕ್ಕೆ ಮಹತ್ವ ಕೊಡಬೇಕು ಎಂದವರು ಒತ್ತಾಯಿಸಿದ್ದಾರೆ‌.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…. 

ರಾಜಕೀಯ

ಯಾವಾಗ ಏನು ಆಗಬೇಕೋ ಆಗುತ್ತೆ, ಪಕ್ಷದ ಮೇಲೆ ವಿಶ್ವಾಸವಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

ಯಾವಾಗ ಏನು ಆಗಬೇಕೋ ಆಗುತ್ತೆ, ಪಕ್ಷದ ಮೇಲೆ ವಿಶ್ವಾಸವಿದೆ: ಡಿಸಿಎಂ ಡಿ.ಕೆ. ಶಿವಕುಮಾರ್

"ಯಾವಾಗ ಏನು ಆಗಬೇಕೋ ಅದು ಆಗುತ್ತದೆ. ಇನ್ನು ಮುಂದೆ ರಾಜಕೀಯ ವಿಚಾರವಾಗಿ ನಾನು ಮಾಧ್ಯಮಗಳ ಮುಂದೆ ಮಾತನಾಡುವುದಿಲ್ಲ. ಸಮಯ ಬಂದಾಗ ತಾನಾಗಿಯೇ ಗೊತ್ತಾಗುತ್ತದೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar) ತಿಳಿಸಿದರು.

[ccc_my_favorite_select_button post_id="121399"]
ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಭಾಷಣದಲ್ಲಿ 60 ಬಾರಿ ಕಾಂಗ್ರೆಸ್‌ ಜಪ: ಪ್ರಧಾನಿ ಮೋದಿ ವಿಡಿಯೋ ಟ್ರೋಲ್!

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ, ಕ್ಷೇತ್ರ ಮರು ವಿಂಗಡನೆ ಮಸೂದೆಗೆ ಸೋಲಾದ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ Narendra Modi) ಅವರು ನೀಡಿದ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್‌ (Congress) ಹೆಸರು ಮಾತ್ರವೇ ಕೇಳಿಸಿದೆ

[ccc_my_favorite_select_button post_id="121182"]
ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಯುದ್ಧ: ಭಾರತದ ಷೇರುಪೇಟೆ ತತ್ತರ.. ಬೆಲೆಯೇರಿಕೆ ಚಿಂತೆ

ಮಧ್ಯಪ್ರಾಚ್ಯದಲ್ಲಿ ಯುದ್ದ ನಡೆಯುತ್ತಿರುವುದರಿಂದ ಭಾರತದ ಷೇರುಪೇಟೆ (Indian share market ) ತತ್ತರಿಸುತ್ತಿದ್ದು, ಕೋಟ್ಯಾಂತರ ರೂ ನಷ್ಟದ ಜೊತೆಗೆ, ತೈಲ ಬೆಲೆಯೇರಿಕೆಯಾಗುವ ಭೀತಿ ಉಂಟಾಗಿದೆ.

[ccc_my_favorite_select_button post_id="119892"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ದೋಸ, ಇಡ್ಲಿ, ಸಾಂಬಾರ್, ಚಟ್ನಿ, ಚಟ್ನಿ ಗೀತೆ ಬಳಸಿ ಅವಮಾನಿಸುತ್ತಾರೆ.. CSK ದೂರು.!

ಇತ್ತೀಚೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸಿಎಸ್‌ಕೆ (CSK) ಪಂದ್ಯದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಡಿಜೆ ಸಿಎಸ್​ಕೆ ಅಭಿಮಾನಿಗಳನ್ನು ಹಾಗೂ ಆಟಗಾರರನ್ನು ಅವಮಾನಿಸಿದ್ದಾರೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜ್ಮೆಂಟ್

[ccc_my_favorite_select_button post_id="121029"]
ದೊಡ್ಡಬಳ್ಳಾಪುರ DJ ಕೇಸ್ಗೆ ಹೈ ಕೋರ್ಟ್ ತಡೆಯಾಜ್ಞೆ

ದೊಡ್ಡಬಳ್ಳಾಪುರ DJ ಕೇಸ್ಗೆ ಹೈ ಕೋರ್ಟ್ ತಡೆಯಾಜ್ಞೆ

ವಿಶ್ವ ಹಿಂದೂಪರಿಷತ್ ಮತ್ತು ಬಜರಂಗದಳದಿಂದ ನಗರದಲ್ಲಿ ನಡೆದ ಶೋಭಾಯಾತ್ರೆಯಲ್ಲಿ (Sobhayatre) ಅನುಮತಿ ಇಲ್ಲದೆ ಡಿಜೆ (DJ) ಬಳಸಿದ ಕುರಿತು ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆ ನೀಡಿದೆ ಎಂದು ತಿಳಿದು ಬಂದಿದೆ.

[ccc_my_favorite_select_button post_id="121351"]
ದೊಡ್ಡಬಳ್ಳಾಪುರ: ಕ್ಯಾಂಟರ್ಗೆ ಟೆಂಪೋ ಡಿಕ್ಕಿ.. ಚಾಲಕ ದುರ್ಮರಣ

ದೊಡ್ಡಬಳ್ಳಾಪುರ: ಕ್ಯಾಂಟರ್ಗೆ ಟೆಂಪೋ ಡಿಕ್ಕಿ.. ಚಾಲಕ ದುರ್ಮರಣ

ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ (Tempo) ಡಿವೈಡರ್ ಮೇಲೆ ಸಾಗಿ, ಮತ್ತೊಂದು ರಸ್ತೆಯಲ್ಲಿ ಎದುರು ಬರುತ್ತಿದ್ದ ಟ್ಯಾಂಕರ್ಗೆ (Canter) ಡಿಕ್ಕಿ ಹೊಡೆದ ಪರಿಣಾಮ (Accident), ಟೆಂಪೋ ಚಾಲಕ ಸಾವನಪ್ಪಿರುವ ಘಟನೆ ತಾಲೂಕಿ ಕೂಗೇನಹಳ್ಳಿ ಕಾಲೋನಿ

[ccc_my_favorite_select_button post_id="121396"]

ಆರೋಗ್ಯ

ಸಿನಿಮಾ

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ದರ್ಶನ್ ಬರ್ತ್‌ಡೇ: ಅಭಿಮಾನಿಗಳಿಂದ ವಿಶೇಷ ವಿಶ್

ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ (Actor Darshan) ಅವರಿಗೆ ಇಂದು ಜನ್ಮದಿನದ (Birthday) ಸಡಗರ. 49ನೇ ವರ್ಷಕ್ಕೆ ದರ್ಶನ್ ಕಾಲಿಟ್ಟಿದ್ದಾರೆ.

[ccc_my_favorite_select_button post_id="119431"]