ದೊಡ್ಡಬಳ್ಳಾಪುರ: ಅಪರಿಚಿತ ವ್ಯಕ್ತಿಯ ಕತ್ತರಿಸಿದ ಕೈ ಕಂಡ ಗ್ರಾಮಸ್ಥರು ಕೆಲಕಾಲ ಆತಂಕಕ್ಕೆ ಒಳಗಾಗಿದ್ದ ಘಟನೆ, ತಾಲೂಕಿನ ಮಧುರೆ ಹೋಬಳಿಯ ರಾಮದೇವನಹಳ್ಳಿ ಹೊರವಲಯದ ಗುಡ್ಡದ ಬಳಿ ನಡೆದಿದೆ.
ಕೆಲ ತಿಂಗಳುಗಳ ಹಿಂದೆ ಅಂತ್ಯಕ್ರಿಯೆ ನಡೆಸಿದೆ ಎನ್ನಲಾದ ವ್ಯಕ್ತಿಯ ಕೈಯನ್ನು, ಬೀದಿ ನಾಯಿಗಳು ತಂದಿದ್ದು, ಕೊಲೆಯ ಆತಂಕ ಗ್ರಾಮಸ್ಥರಲ್ಲಿ ಕಾಡಿತ್ತು
ರಸ್ತೆ ಕಾಮಗಾರಿ ಕಾರಣ ಇಲ್ಲಿನ ಗುಡ್ಡದಲ್ಲಿ ಮಣ್ಣು ತೆಗೆಯಲಾದ ವೇಳೆ ಉಂಟಾದ ಹಳ್ಳದಲ್ಲಿ ವ್ಯಕ್ತಿಯ ಕೈ ಕಂಡುಬಂದು ಆತಂಕಕ್ಕೆ ಕಾರಣವಾಗಿತ್ತು.
ಈ ಕುರಿತು ಸ್ಥಳೀಯರು ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಹಲವು ತಿಂಗಳ ಹಿಂದೆ ಅಂತ್ಯಕ್ರಿಯೆ ನಡೆಸಿರುವ ಅಪರಿಚಿತ ಶವದ ಕೈಯನ್ನು ನಾಯಿಗಳು ತಂದಿವೆ ಎಂದು ತಿಳಿಸಿದರು ಎನ್ನಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

