ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿವೇಕಾ ಶಾಲಾ ಕೊಠಡಿಗಳ ಶಂಕುಸ್ಥಾಪನೆಯನ್ನು, ಶನಿವಾರ ಸಂಜೆ ಆರೋಗ್ಯ, ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಶಾಸಕ ಟಿ.ವೆಂಕಟರಮಣಯ್ಯ ನೆರವೇರಿಸಿದರು.
ಈ ಯೋಜನೆಯಡಿಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಬೊಮ್ಮಹಳ್ಳಿ, ಹೊಸಹಳ್ಳಿ, ಸಾಸಲು, ಎಸ್.ಎಸ್.ಘಾಟಿ, ಹೊಸಹಳ್ಳಿ ತಾಂಡ, ಆಚಾರಲಹಳ್ಳಿ, ಕೆಳಗಿನ ಜೂಗಾನಹಳ್ಳಿ, ರಾಜೀವ್ ಗಾಂಧಿ ಬಡಾವಣೆ, ಅರಳು ಮಲ್ಲಿಗೆ ಬಾಗಿಲು, ದೊಡ್ಡಬೆಳವಂಗಲ, ರೋಜಿಪುರ, ಎಂ.ಎಂ.ಗುಡಿ ಪಾಳ್ಯ, ಏಕಾಶಿಪುರ, ತೂಬುಕುಂಟೆ, ಕಸಾಘಟ್ಟ, ಜೋಡಿಕಾರೆಪುರ ಸೇರಿದಂತೆ ಒಟ್ಟು ತಾಲೂಕಿನಲ್ಲಿ 26 ವಿವೇಕ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಸಾಂಕೇತಿಕವಾಗಿ ಸಾಸಲು ಗ್ರಾಮದಲ್ಲಿ ಶಂಕುಸ್ಥಾಪನೆ ಕಾರ್ಯವನ್ನು ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಸಿಇಒ ಕೆ.ರೇವಣ್ಣಪ್ಪ, ಡಿಡಿಪಿಐ ಎನ್.ಶ್ರೀಕಂಠ, ತಹಶೀಲ್ದಾರ್ ಮೋಹನಕುಮಾರಿ, ತಾಪಂ ಇಒ ಶ್ರೀನಾಥ್ ಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ರಂಗಪ್ಪ ಮತ್ತಿತರರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

