ದೊಡ್ಡಬಳ್ಳಾಪುರ, (ಡಿ.01): ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ನವೆಂಬರ್ 1 ರಿಂದ ಒಂದು ಲೀಟರ್ ಹಾಲಿಗೆ ರೈತರಿಗೆ ನೀಡಲಾಗುತ್ತಿದ್ದ ರೂ. 2.10 ಪೈಸೆ ಜೊತೆಗೆ ಡಿ.1 ರಿಂದ ಜಾರಿಗೆ ಬರುವಂತೆ ಮತ್ತೆ ರೂ. 0.90 ಪೈಸೆ ಸೇರಿ 3 ರೂ ನೀಡಲಾಗುತ್ತಿದೆ. ಇದರಿಂದ ರೈತರಿಗೆ ಗುಣಮಟ್ಟದ ಆಧಾರದ ಮೇಲೆ ಒಂದು ಲೀಟರ್ ಹಾಲಿಗೆ ಒಟ್ಟು ರೂ.38 ಗಳವರೆಗೂ ದೊರೆಯಲಿದೆ ಎಂದು ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದಕುಮಾರ್ ಹೇಳಿದರು.

ಅವರು ಈ ಕುರಿತು ಹರಿತಲೇಖನಿಗೆ ಮಾಹಿತಿ ನೀಡಿ, ಬೆಂಗಳೂರು ಹಾಲು ಒಕ್ಕೂಟಕ್ಕೆ ಪ್ರತಿದಿನ 16 ಲಕ್ಷ ಲೀಟರ್ ಹಾಲು ಸರಬರಾಜು ಆಗುತ್ತಿದೆ. ಇದರಲ್ಲಿ 10 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ರೈತರ ಹಿರಕ್ಷಣೆ ಕಾಪಾಡುವ ಸಲುವಾಗಿ ತಾಲೂಕು ಹಾಲು ಉತ್ಪಾದಕರ ಹಿತರಕ್ಷಣಾ ಸಮಿತಿ ರಚಿಸಲಾಗುತ್ತಿದೆ.

ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು, ಅಧ್ಯಕ್ಷರು ಸಮಿತಿಯ ಸದಸ್ಯರಾಗಿರುತ್ತಾರೆ. ತಾಲ್ಲೂಕಿನ ಪ್ರತಿ ಹೋಬಳಿಯಿಂದ ನಾಲ್ಕು ಜನ ಅಧ್ಯಕ್ಷರು ಸಮಿತಿಯಲ್ಲಿ ನಿರ್ದೇಶಕರಾಗಿರಲಿದ್ದಾರೆ. ಸಮಿತಿಯು ಉತ್ಪಾದಕರ ಹಾಗೂ ಒಕ್ಕೂಟದೊಂದಿಗೆ ಕೊಂಡಿಯಾಗಿ ಕೆಲಸ ನಿರ್ವಹಿಸಲಿದೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
