ಬೆಂಗಳೂರು, (ಡಿ.13): ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕುರಿತಂತೆ ಕಾಂಗ್ರೆಸ್‌ನ ಸಿದ್ರಾಮುಲ್ಲಾ ಖಾನ್ ಮತ್ತೆ ಅಧಿಕಾರಕ್ಕೆ ಬಂದರೆ ಹಿಂದೂ ಕಾರ್ಯಕರ್ತರ ಹತ್ಯೆಗಳು ನಡೆಯುತ್ತವೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಮರಕ್ಕೆ ಕಾರಣವಾಗಿದ್ದು, ಈಗ ಬಿಜೆಪಿ ಮುಖ್ಯ ವಕ್ತಾರ ಎಂ.ಜಿ.ಮಹೇಶ್ ಅವರಿಗೆ ಜೀವ ಬೆದರಿಕೆ ಬಂದಿದೆಯೆಂದು ಬಿಜೆಪಿ ಆರೋಪಿಸಿದೆ.

ಈ ಕುರಿತಂತೆ ಟ್ವಿಟ್ ಮಾಡಿರುವ ಬಿಜೆಪಿ ಕರ್ನಾಟಕ, ಸಿದ್ರಾಮುಲ್ಲಾ ಖಾನ್ ಎಂದು ಖ್ಯಾತಿ ಪಡೆದದ್ದನ್ನು ಸಮರ್ಥಿಸಿಕೊಂಡಿದ್ದಕ್ಕೆ ನಮ್ಮ ಪಕ್ಷದ ಮುಖ್ಯ ವಕ್ತಾರರಾದ ಎಂ.ಜಿ.ಮಹೇಶ್‌ರವರಿಗೆ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯನವರ ಗೂಂಡಾಗಳಿಂದ ಜೀವ ಬೆದರಿಕೆ ಕರೆಗಳು ಬಂದಿವೆ. ತಮಗಾಗದವರನ್ನು ನಾಶಮಾಡುವ ಮನಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಹುಟ್ಟಿನಿಂದಲೇ ಬಂದಿದೆ.

ನಿನ್ನೆಯಷ್ಟೇ ಮಧ್ಯಪ್ರದೇಶದ ಕಾಂಗ್ರೆಸ್‌ನ ಮಾಜಿ ಸಚಿವ ರಾಜಾ ಪಟೇರಿಯಾ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೇ ಕರೆ ಕೊಟ್ಟಿದ್ದರು. ರೌಡಿ ಪರೋಡಿಗಳೇ ತುಂಬಿರುವ ಕರ್ನಾಟಕದ ಕಾಂಗ್ರೆಸ್ ಪಕ್ಷದಲ್ಲಂತೂ ಕೊತ್ವಾಲನ ಶಿಷ್ಯ ಡಿ. ಕೆ. ಶಿವಕುಮಾರ್ ಅಧ್ಯಕ್ಷರಾದರೆ, ಬಾರ್‌ಗಳಲ್ಲಿ ಬುರುಡೆ ಒಡೆಯುವ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ.
ಕೊಲೆ ಆರೋಪವಿರುವ ವಿನಯ್ ಕುಲಕರ್ಣಿಯು ಒಂದು ಕಡೆಯಾದರೆ ಪುಡಿರೌಡಿಗಳ ಪೋಷಕರೆಂದೇ ಕುಖ್ಯಾತರಾಗಿರುವ ರಾಮಲಿಂಗಾ ರೆಡ್ಡಿ ಇನ್ನೊಂದು ಕಡೆ. ಇನ್ನು ಹರಿಪ್ರಸಾದ್ ಬಿ. ಕೆ. ಅವರಂಥ ಕೊತ್ವಾಲನ ಆತ್ಮೀಯರೆಲ್ಲ ಕಾಂಗ್ರೆಸ್‌ನಲ್ಲೇ ಇರುವಾಗ, ಸಿದ್ದರಾಮಯ್ಯನವರ ಗೂಂಡಾಗಳು ಬೆದರಿಕೆ ಹಾಕದೇ ಭಾವಗೀತೆ ಹಾಡುತ್ತಾರೆಯೇ? ಎಂದು ಪ್ರಶ್ನಿಸಿದೆ.
ದೇಶಕ್ಕಾಗಿ ಮುಡಿಪಾಗಿರುವ ಪಕ್ಷ ಭಾರತೀಯ ಜನತಾ ಪಾರ್ಟಿ. ದೇಶದ ಪರವಾಗಿ ಹೋರಾಡುವಾಗ ಇಂಥ ಬೆದರಿಕೆಗಳು, ಸಾಮಾನ್ಯ. ಸಿದ್ದರಾಮಯ್ಯನವರೇ ಇನ್ನು ಮುಂದಾದರೂ ನಿಮ್ಮ ಗೂಂಡಾಗಳಿಗೆ ಬುದ್ಧಿ ಹೇಳಿ ಇಂಥ ವ್ಯರ್ಥ ಪ್ರಯತ್ನಗಳನ್ನು ಕೈಬಿಟ್ಟು ಅದೇ ಪ್ರಯತ್ನವನ್ನು ನಿಮಗೊಂದು ಭದ್ರವಾದ ಕ್ಷೇತ್ರ ಹುಡುಕಿ ಕೊಡಲು ಮಾಡಿದರೆ ಉತ್ತಮ. CriminalCongress ಎಂದು ಆರೋಪಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….
