ಕೊಲಂಬೊ, (ಸೆ.11): ಕೊಲಂಬೋದ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ಪಾಕ್ ನಡುವಿನ 2 ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ 47 ನೇ ಶತಕ ದಾಖಲಿಸಿದ್ದಾರೆ.
ಇದೇ ವೇಳೆ ರಾಹುಲ್ ಏಕದಿನ ಪಂದ್ಯ ವಿಭಾಗದಲ್ಲಿ ತಮ್ಮ ವೃತ್ತಿ ಜೀವನದ 6ನೇ ಶತಕ ದಾಖಲಿಸಿದ್ದಾರೆ. ಕೊಹ್ಲಿ-ರಾಹುಲ್ ಶತಕದ ನೆರವಿನಿಂದ ಭಾರತ 2 ವಿಕೆಟ್ ನಷ್ಟಕ್ಕೆ ಈ ವರೆಗೂ 356 ರನ್ ಗಳನ್ನು ಗಳಿಸಿದೆ.
ರಾಹುಲ್-ಕೊಹ್ಲಿ 200 ಎಸೆತಗಳಲ್ಲಿ ಭರ್ಜರಿ 233 ರನ್ ಗಳ ಜೊತೆಯಾಟ ನೀಡಿ ಭಾರತ ಕ್ರಿಕೆಟ್ ತಂಡ ಎದುರಾಳಿ ಪಾಕ್ ಗೆ ಅತ್ಯುತ್ತಮ ಸವಾಲು ನೀಡಿದೆ.
ಇದಕ್ಕೂ ಮುನ್ನ ನಾಯಕ ರೋಹಿತ್ 49 ಬಾಲ್ಗಳಿಗೆ 56 ರನ್ ಗಳಿಸಿದರೆ, ಶುಬ್ಮಾನ್ ಗಿಲ್ 52 ಬಾಲ್ಗಳಿಗೆ 58 ರನ್ ಗಳಿಸಿ ಔಟಾಗಿದ್ದರು. ನಂತರ ಜೊತೆಯಾದ ಕೊಹ್ಲಿ 94 ಬಾಲ್ಗಳಿಗೆ 122 ರನ್ ಪಡೆದರೆ, ರಾಹುಲ್ 106 ಬಾಲ್ಗಳಲ್ಲಿ111ರನ್ ಪಡೆದರು.
ಟಾಸ್ ಗೆದ್ದ ಪಾಕ್ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತದ ಬ್ಯಾಟ್ಸ್ಮನ್ ಗಳನ್ನು ನಿಯಂತ್ರಿಸಲು ಪಾಕ್ ಬೌಲರ್ ಗಳು ಪರದಾಡಿದರು.
ಪೋಟೋ ಕೃಪೆ: BCCI
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….