ಬೀಜಿಂಗ್, (ಅ.13): ಬೀಜಿಂಗ್ ನಲ್ಲಿ ಹಾಡುಹಗಲೇ ಇಸ್ರೇಲ್ ರಾಯಭಾರ ಕಚೇರಿಯ ಉದ್ಯೋಗಿಯೊಬ್ಬರಿಗೆ ಚೂರಿಯಿಂದ ಇರಿದ ಘಟನೆ ನಡೆದಿದೆ.
ಇರಿತಕ್ಕೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸದ್ಯ ಅರೋಗ್ಯ ಸ್ಥಿರವಾಗಿದೆ ಎಂದು ಬೀಜಿಂಗ್ ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ತಿಳಿಸಿದೆ.
ಇಸ್ರೇಲ್ ವ್ಯಕ್ತಿಯನ್ನು ಚಾಕುವಿನಿಂದ ಇರಿದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ದಾಳಿಗೊಳಗಾದ ಈ ಪ್ರದೇಶವು ರಾಯಭಾರ ಕಚೇರಿಯಿಂದ ದೂರದಲ್ಲಿದೆ ಎನ್ನಲಾಗಿದೆ.
ದಾಳಿಕೋರ ಮಧ್ಯಪ್ರಾಚ್ಯ ಮೂಲದವನೆಂದು ಕೆಲವು ವರದಿಗಳು ಹೇಳಿವೆ. ದಾಳಿಯ ಆಘಾತಕಾರಿ ದೃಶ್ಯಾವಳಿಗಳು ನೋಡಿದಾಗ, ಪಾದಚಾರಿ ಮಾರ್ಗದ ಮೇಲೆ ಮಲಗಿರುವ ಅಧಿಕಾರಿ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ತೋರಿಸುತ್ತದೆ. ಬಿಳಿ ಶರ್ಟ್ ಮತ್ತು ಸನ್ಗ್ಲಾಸ್ನ ವ್ಯಕ್ತಿಯೊಬ್ಬ ಜನರು ನಿಂತು ನೋಡುತ್ತಿರುವಾಗ ಚಾಕುವಿನಿಂದ ಪದೇ ಪದೇ ಇರಿದಿದ್ದಾನೆ.
ಈಗಾಗಾಲೇ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದ ಕುರಿತು ಚೀನಾ ನಿಲುವಿನ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವ ಇಸ್ರೇಲ್ ಗೆ ಇದೊಂದು ಆಘಾತಕಾರಿ ಸುದ್ದಿ ಇದರಿಂದ ಇಸ್ರೇಲ್ ಮತ್ತು ಚೀನಾ ನಡುವಿನ ಸಂಬಂಧ ಮತ್ತಷ್ಟು ಹದಗೆಡಿಸಿದಂತಾಗಿದೆ.
ಇಸ್ರೇಲ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಇಂದು ಬೀಜಿಂಗ್ನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿಯಲ್ಲಿ ಇಸ್ರೇಲಿ ಸಿಬ್ಬಂದಿಯ ಮೇಲೆ ನಡೆದ ದಾಳಿಯ ಬಗ್ಗೆ ಹೇಳಿಕೆಯನ್ನು ನೀಡಿದೆ, ಘಟನೆ ರಾಯಭಾರ ಕಚೇರಿಯ ಆವರಣದೊಳಗೆ ನಡೆದಿಲ್ಲ. ಉದ್ಯೋಗಿ ಪ್ರಸ್ತುತ ಆಸ್ಪತ್ರೆಯಲ್ಲಿ ವೈದ್ಯಕೀಯ ಆರೈಕೆಯನ್ನು ಪಡೆಯುತ್ತಿದ್ದಾರೆ ಮತ್ತು ಸ್ಥಿರ ಸ್ಥಿತಿಯಲ್ಲಿದ್ದಾರೆ. ದಾಳಿಯ ಹಿಂದಿನ ಉದ್ದೇಶವನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ ಎಂದಿದೆ.
ಘಟನೆಯ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….