ಡಿಕೆ ಶಿವಕುಮಾರ್ ಕಾಣಿಸಲಿಲ್ಲ ಎಂದರೆ ಮುನಿರತ್ನರನ್ನು ಕೇಳಿ: ಬಿಜೆಪಿಗೆ ಕಾಂಗ್ರೆಸ್ ತಿರುಗೇಟು

ಬೆಂಗಳೂರು, (ಅ.13): ಕಾವೇರಿಯನ್ನು ಸ್ಟಾಲಿನ್‌ ನಾಡಿಗೆ ಬೇಕಾಬಿಟ್ಟಿಯಾಗಿ ಹರಿಬಿಟ್ಟು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್​ ನಾಪತ್ತೆಯಾಗಿದ್ದಾರೆ, ದಯವಿಟ್ಟು ಹುಡುಕಿಕೊಡಿ ಎಂಬ ಬಿಜೆಪಿ ಪೋಸ್ಟರ್ ಎಕ್ಸ್ ಗೆ, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವಂತೆ ಡಿಕೆ ಶಿವಕುಮಾರ್ ಕಾಲಿಗೆ ಬಿದ್ದು ಹೈಡ್ರಾಮ ಸೃಷ್ಟಿಸಿದ ಬಿಜೆಪಿ ಶಾಸಕ ಮುನಿರತ್ನ ಅವರ ಹೆಸರನ್ನು ಉಲ್ಲೇಖ ಮಾಡಿ ಕಾಂಗ್ರೆಸ್ ತಿರುಗೇಟು ನೀಡಿದೆ.

ಈ ಕುರಿತಂತೆ ಎಕ್ಸ್ (ಟ್ವಿಟ್) ಮಾಡಿರುವ ಕರ್ನಾಟಕ ಕಾಂಗ್ರೆಸ್ ಡಿಯರ್ ಬಿಜೆಪಿ4ಕರ್ನಾಟಕ, ನಿಮಗೆ ಡಿಕೆ ಶಿವಕುಮಾರ್ ಅವರು ಕಾಣಿಸಲಿಲ್ಲ ಎಂದರೆ ನಿಮ್ಮದೇ ಪಕ್ಷದ ಮುನಿರತ್ನರನ್ನು ಕೇಳಿ ನೋಡಿ, ಮಾಹಿತಿ ಸಿಗಬಹುದು.

ಕಾಂಗ್ರೆಸ್ ನೀಡಿರುವ ತಿರುಗೇಟು ನೋಡಲು ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಪಕ್ಷ ಬಿಡಲು ತಯಾರಿರುವ ಇನ್ನೂ ಹತ್ತು ಹಲವು ಮುಖಂಡರು, ನಾಯಕರನ್ನು ಕೇಳಿ ನೋಡಿ, ಅವರಿಂದ ಮಾಹಿತಿ ಸಿಗಬಹುದು.

ಅಂದಹಾಗೆ, ಕಾಣೆಯಾಗಿರುವ “ವಿರೋಧ ಪಕ್ಷದ ನಾಯಕ” ನನ್ನು ಯಾವಾಗ ಹುಡುಕಿಕೊಡುವಿರಿ?? ಎಂದು ಕಿಚಾಯಿಸಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!