ಹರಿದ್ವಾರ, ‘ಉತ್ತರಾಖಂಡ’ (ಡಿ.28): ಹರಿದ್ವಾರದ ಜಿಲ್ಲಾ ನ್ಯಾಯಾಲಯದ ಆವರಣದೊಳಗೆ ಬಂದು ಆನೆಯೊಂದುಆತಂಕ ಸೃಷ್ಟಿಸಿದ ಘಟನೆ ನಡೆದಿದೆ.
ತನ್ನ ಸಾಂಪ್ರದಾಯಿಕ ಹಾದಿ ಎಂದು ಗಜರಾಜ ಗೇಟ್ ಮುರಿದು ಒಳ ನುಗ್ಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಹರಿದ್ವಾರ ರೋಷನಾಬಾದ್ ಪ್ರದೇಶದ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ. ಹರಿದ್ವಾರದ ಸುತ್ತಲಿನ ಕಾಡಿನ ಮೂಲಕ ಆನೆ ತನ್ನ ಹಾದಿಯನ್ನು ಹುಡುಕುತ್ತಾ ನಗರದೊಳಗೆ ಪ್ರವೇಶಿಸಿದೆ.
ನ್ಯಾಯಾಲಯದ ಬಳಿ ಬರುತ್ತಿದ್ದಂತೆ ಗೇಟ್ ಹಾದು ಮುಂದೆ ಹೋದರೂ ಇದು ಸರಿಯಾದ ಮಾರ್ಗವಲ್ಲ ಎನಿಸಿತ್ತೇನೋ ಮತ್ತೆ ವಾಪಸ್ ಬಂದು ನ್ಯಾಯಾಲಯದ ಗೇಟ್ ಮುರಿದು ಒಳ ಬಂದಿದೆ.
ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಗಾಳಿಯಲ್ಲಿ ಗುಂಡು ಹಾರಿಸಿ, ಆನೆಯನ್ನು ಬೆದರಿಸಿ ರಾಜಾಜಿ ಹುಲಿ ಸಂರಕ್ಷಿತ ಅರಣ್ಯಕ್ಕೆ ಅಟ್ಟಿದ್ದಾರೆಂದು ವರದಿಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….