ಘಾಟಿ ಜಾನುವಾರುಗಳ ಜಾತ್ರೆ: ದನಗಳೊಂದಿಗೆ ಪೋಟೋಗೆ ಪೋಸ್ ನೀಡಿದ ಮಿನಿಸ್ಟರ್, ಡಿಸಿ..!

ದೊಡ್ಡಬಳ್ಳಾಪುರ, (ಡಿ.28); ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಳಿ ನಡೆಯುತ್ತಿರುವ ಜಾನುವಾರುಗಳ ಜಾತ್ರಾ ಮಹೋತ್ಸವಕ್ಕೆ ಆಹಾರ ಸಚಿವರಾದ ಕೆ.ಹೆಚ್.ಮುನಿಯಪ್ಪ ನವರು ಚಾಲನೆ ನೀಡಿದರು.

10 ದಿನಗಳ ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಬಂದಿರುವ  ಎತ್ತುಗಳು,ಹೋರಿಗಳಿಗೆ  ಉಚಿತವಾಗಿ ಮೇವನ್ನು ವಿತರಿಸಲಾಯಿತು.

ಜಾತ್ರಾಮಹೋತ್ಸದಲ್ಲಿ ಬರುವ ಎಲ್ಲಾ  ರೈತರಿಗೆ ಹಾಗೂ  ಸಾರ್ವಜನಿಕರಿಗೆ ಉಚಿತ ಅನ್ನ ದಾಸೋಹವನ್ನು  10 ದಿನಗಳ ಕಾಲವೂ ಏರ್ಪಡಿಸಲಾಗಿದೆ.

ಜಾನುವಾರುಗಳ ಜಾತ್ರಾ ಮಹೋತ್ಸ ದಲ್ಲಿ ವಿವಿಧ ಬಗೆಯ ತಳಿಯ ಸಾವಿರಾರು  ಎತ್ತುಗಳು,ಹೋರಿಗಳು ಭಾಗವಹಿಸಿದ್ದವು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!