ದೊಡ್ಡಬಳ್ಳಾಪುರ, (ಡಿ.28); ಮೇಲಿನಾಜೂಗಾನಹಳ್ಳಿ(ಘಾಟಿ) ಗ್ರಾಮ ಪಂಚಾಯತಿಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ಇಂದು ಸಾರ್ವಜನಿಕ ಸಂಪರ್ಕ ಸಭೆಯನ್ನು ನಡೆಸಲಾಯಿತು.
ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ನವರು ಸಾರ್ವಜನಿಕ ರಿಂದ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಅವುಗಳಿಗೆ ಪರಿಹಾರ ಕೊಡಿಸಲು ಜಿಲ್ಲಾಧಿಕಾರಿ ಗಳಿಗೆ ಸೂಚನೆಯನ್ನು ನೀಡಿದರು.
ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನು ಕಲ್ಪಿಸಲು ಬೇಡಿಕೆ ನೀಡಿದ್ದು ಅದಕ್ಕೆ ಸ್ಪಂದಿಸುತ್ತೇನೆ ಎಂದರು.
ತೂಬಗೆರೆ ಪಂಚಾಯತಿಯಲ್ಲಿ ರಸ್ತೆ ಗಳ ನಿರ್ಮಾಣ,ನೀರಿನ ಸಮಸ್ಯೆಗಳು, ಆಸ್ಪತ್ರೆಯ ಸಮಸ್ಯಗಳ ಬಗ್ಗೆ ಮಾನ್ಯ ಸಚಿವರಿಗೆ ನಾಗರಿಕರು ಮನವಿಗಳನ್ನು ನೀಡಿದ್ದು ಅವುಗಳನ್ನು ಅತಿ ಬೇಗನೆ ಈಡೇರಿಸಲು ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಶಿವಶಂಕರ್, ಮುಖ್ಯಕಾರ್ಯನಿರ್ವಹಣಾಧಿಕಾರಿ.ಡಾ.ಅನುರಾಧ, ಅಪರ ಮುಖ್ಯ ಜಿಲ್ಲಾಧಿಕಾರಿ ಅಂಬರೀಶ್, ತಹಶಿಲ್ದಾರ್ ವಿಭಾ ರಾಥೋಡ್, ಘಾಟಿ ಗ್ರಾಮ ಪಂಚಾಯತಿ ಅಧ್ಯಕ್ಷ ಗೋಪಾಲ್ ನಾಯಕ್, ರಂಗಪ್ಪ ತೂಬಗೆರೆ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….