ಕಾಡಾನೆ ದಾಳಿ; ವೃದ್ಧೆ ಆಸ್ಪತ್ರೆಗೆ ದಾಖಲು

ಹಾಸನ, (ಜ.08): ಕಾಡಾನೆ ದಾಳಿಯಿಂದ ವಸಂತ್ ಸಾವು ಮರೆವ ಮುನ್ನವೇ ಮತ್ತೊಂದು ಅವಘಡ ವರದಿಯಾಗಿದ್ದು, ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಪರಿಣಾಮ ವೃದ್ಧೆಯೋರ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೇನಕ (60 ವರ್ಷ) ಗಾಯಗೊಂಡ ಮಹಿಳೆಯಾಗಿದ್ದು, ಬೇಲೂರು ತಾಲ್ಲೂಕಿನ ಸಿಂಗ್ರವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಗಾಯಾಳು ಮಹಿಳೆಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ‌ ನೀಡಲಾಗುತ್ತಿದ್ದು , ತಮ್ಮ ಮನೆಯ ಹಿಂದೆ ಬೆಳೆದಿದ್ದ ಕರಿಬೇವಿನ ಸೊಪ್ಪು ಕೀಳಲು ಹೋಗಿದ್ದ ವೇಳೆ ಕಾಡಾನೆ ದಾಳಿ ಮಾಡಿದೆ ಎನ್ನಲಾಗಿದೆ.

ಕಾಡಾನೆ ದಾಳಿಯಿಂದ ಬಲಗಾಲು ಮುರಿತಕ್ಕೆ ಒಳಗಾಗಿರುವ ಮೇನಕ ಅವರಿಗೆ ಹಾಸನದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆಗೆ ಅರಣ್ಯ ಇಲಾಖೆ ಅಧಿಕಾರಿಗಳು , ಜನಪ್ರತಿನಿಧಿಗಳು ಹಾಗೂ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!