ನಟ ಯಶ್ ಪ್ಯಾನ್ಸ್ ಸಾವು ಪ್ರಕರಣ; ಶೋಕ ಸಾಗರದಲ್ಲಿ ಗ್ರಾಮ / ಮೂವರ ಅಂತ್ಯಕ್ರಿಯೆ: ವಿಡಿಯೋ ನೋಡಿ

ಲಕ್ಷ್ಮೇಶ್ವರ, (ಜ.08): ನಟ ಯಶ್ ಜನ್ಮದಿನದ ಅಂಗವಾಗಿ ಅವರ ಅಭಿಮಾನಿಗಳು ಬೃಹತ್ ಗಾತ್ರದ ಪ್ಲೆಕ್ಸ್ ಅಳವಡಿಸುವ ಸಂದರ್ಭದಲ್ಲಿ ವಿದ್ಯುತ್‌ ತಂತಿ ಸ್ಪರ್ಶಿಸಿ ಮೂವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಸೂರಣಗಿ ಗ್ರಾಮದ ಅಂಬೇಡ್ಕ‌ ನಗರದ ಯಶ್ ಅಭಿಮಾನಿಗಳು ಭಾನುವಾರ ರಾತ್ರಿ ಬೃಹತ್ ಗಾತ್ರದ ಪ್ಲೆಕ್ಸ್ ಅಳವಡಿಸುವುದಕ್ಕೆ ಮುಂದಾಗಿದ್ದರು. ಈ ಸಂದರ್ಭದಲ್ಲಿ ಕಟೌಟ್ ವಿದ್ಯುತ್‌ ತಂತಿಗೆ ಸ್ಪರ್ಶಿಸಿದೆ. ವಿದ್ಯುತ್ ಪ್ರವಹಿಸಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಲಕ್ಷೇಶ್ವರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಹನುಮಂತ ಹರಿಜನ, ಮುರಳಿ ನಡುವಿನಮನಿ ಮತ್ತು ನವೀನ ಗಾಜಿ ಮೃತ ಯುವಕರು. ಈ ವೇಳೆ ಇನ್ನೂ ಮೂರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯುವಕರ ಹಠಾತ್ ಸಾವಿನಿಂದಾಗಿ ಸೂರಣಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.

ಮೃತ ಹನುಮಂತ, ನವೀನ್, ಮುರಳಿ ಪಾರ್ಥಿವ ಶರೀರಗಳನ್ನು ಲಕ್ಷ್ಮೇಶ್ವರ ತಾಲೂಕ ಆಸ್ಪತ್ರೆಯಿಂದ ಶವಗಾರದಿಂದ ಸೂರಣಗಿ ಗ್ರಾಮಕ್ಕೆ ಟಾಟಾಏಸ್ ವಾಹನದ ಮೂಲಕ ಮೃತದೇಹ ರವಾನೆ ಮಾಡಲಾಯಿತು. 

ಸೂರಣಗಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದ್ದು, ಯುವಕರ ಹಠಾತ್ ಮರಣದಿಂದ ಶೋಕ ಸಾಗರದಲ್ಲಿ ಸೂರಣಗಿ ಗ್ರಾಮ ಮುಳುಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

error: Content is protected !!