ಮೊಹಾಲಿ, (ಜ.12); ಅಫ್ಘಾನ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನ್, ಭಾರತದ ಗೆಲುವಿಗೆ 159 ರನ್ ಗಳ ಸಾಧಾರಣ ಟಾರ್ಗೆಟ್ ನೀಡಿತ್ತು.
ಈ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ, 17.3 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಭಾರತದ ಪರ ದುಬೆ 60, ಜಿತೇಶ್ 31, ತಿಲಕ್ ವರ್ಮಾ 26, ಗಿಲ್ 23, ರಿಂಕು 16 ರನ್ ಗಳಿಸಿದರು. ಅಫ್ಘಾನ್ ಪರ ಮುಜೀಬ್ ಉರ್ ರೆಹಮಾನ್ 2 ವಿಕೆಟ್ ಪಡೆದರು.
ರೋಹಿತ್ ಡಕ್ ಔಟ್.. ಗಿಲ್ ಮೇಲೆ ಗರಂ; ಅಫ್ಘಾನಿಸ್ತಾನದ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ 159 ರನ್‌ಗಳ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾ ಶುಭಮನ್ ಗಿಲ್ ಮಾಡಿದ ಎಡವಟ್ಟಿನಿಂದ ರೋಹಿತ್ ಅವರು ರನ್ ಔಟ್ ಆಗಿ ಪೆವಿಲಿಯನ್ ಸೇರಿದರು.
ಮೊದಲ ಓವರ್‌ನ 2ನೇ ಎಸೆತವನ್ನು ಎದುರಿಸಿದ ರೋಹಿತ್, ಸಿಂಗಲ್ ಕದಿಯಲು ಮುಂದಾಗಿದ್ದರು. ಆದರೆ, ಇದನ್ನು ಗಮನಿಸದ ಗಿಲ್, ರನ್ ಓಡದೇ ಹಾಗೇ ನಿಂತಿದ್ದರು. ಅಷ್ಟರಲ್ಲಾಗಲೇ ಶರ್ಮಾ, ಗಿಲ್ ಬಳಿಗೆ ಬಂದಿದ್ದರು. ಹೀಗಾಗಿ, ಅವರು ರನ್ ಔಟ್ ಆಗಿ, ಗಿಲ್ ಮೇಲೆ ರೇಗಾಡುತ್ತಲೇ ಹೊರನಡೆದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….